ಕೊಪ್ಪಳ: ಇಂದಿನ ಯುವ ಪೀಳಿಗೆ ಟಿ.ವಿ, ಮೊಬೈಲ್ಗಳಲ್ಲೇ ಮುಳುಗದೆ, ನಮ್ಮ ಜಾನಪದ ಸಂಗೀತ, ಸುಗಮ ಸಂಗೀತ, ಹಿಂದೂಸ್ಥಾನಿ ಸಂಗೀತ, ಡೊಳ್ಳು ಕುಣಿತ, ನಾಟಕದಂತಹ ಅನೇಕ ಕಲೆಗಳು ನಗರ ಪ್ರದೇಶದ ಮಕ್ಕಳು ಕಲಿತು, ಮುಂದಿನ ಪೀಳಿಗೆ ಇವುಗಳನ್ನು ಉಳಿಸಿಕೊಂಡು ಹೋಗುವಂತಾಗಬೇಕು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಜರುಗಿದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು. ನಗರ ಪ್ರದೇಶಗಳಲ್ಲಿ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ ನಶಿಸಿ ಹೋಗುತ್ತಿದೆ. ಯುವಕ ಯುವತಿಯರು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಮತ್ತು ಪ್ರೋತ್ಸಾಹಿಸಬೇಕು. ಟಿ.ವಿ, ಮೊಬೈಲ್ಗಳಲ್ಲೇ ಮುಳುಗಿರುವ ನಮ್ಮ ಪ್ರಪಂಚ ಗ್ರಾಮೀಣ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಲಿ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರಾದ ಸಿ.ವ್ಹಿ. ಜಡಿಯವರವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಾಲ್ಮೀಕಿ ಯಕ್ಕರನಾಳ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹನುಮಂತಪ್ಪ ಮುಧೋಳ, ನಿವೃತ್ತ ಮುಖ್ಯೋಪಾಧ್ಯಾಯರಾದ ಇಂದುಮತಿ, ಸುಮಂಗಲಾ ಹಂಚಿನಾಳ, ಜಯಕ್ಕ ಹಂಚಿನಾಳ ಹಾಗೂ ಅನೇಕ ಹಿರಿಯ ಕಲಾವಿದರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದ ವಿವರ: ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಡಿ ಹಿಂದೂಸ್ಥಾನಿ ವಾದ್ಯ ಸಂಗೀತ, ಹಾಮರ್ೋನಿಯಂ ಸೋಲೋ, ವಿರೇಶ್ ಹಿಟ್ನಾಳ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ, ರಾಜಮಹ್ಮದ್ ಬಿ. ಕೆಸರಟ್ಟಿ ಸುಳೇಕಲ್ ತಂಡ, ಸದಾಶಿವ ಪಾಟೀಲ್ ತಂಡದವರಿಂದ ಸುಗಮ ಸಂಗೀತ, ಸಿ.ವ್ಹಿ ಜಡಿಯವರು ತಂಡದವರಿಂದ ಜನಪದ ಸಂಗೀತ, ಸಮೂಹ ನೃತ್ಯ ಅನ್ನಪೂರ್ಣ ಹೆಗಡೆ ತಂಡ, ಮಹಾಂತೇಶ್ ಕುಣಿಮುಂಚಿ ಡೊಳ್ಳು ಕುಣಿತ ತಂಡದವರಿಂದ, ಬಸವಲಿಂಗಯ್ಯ ನಂದಿ ಕೋಲು ತಂಡದವರಿಂದ, ಶ್ರೀನಿವಾಸ ಕಲ್ಯಾಣ ವಸುಂಧರ ಎ ಬೆಂಗಳೂರು ತಂಡದವರಿಂದ ನಾಟಕ, ಶರಣಬಸವ ಶಾಸ್ತ್ರೀ ಇಲಕಲ್ ಕಥಾ ಕೀರ್ತನ ಪ್ರದರ್ಶನ ನೀಡಿ ಕಾರ್ಯಕ್ರಮ ನಡೆಸಿಕೊಟ್ಟರು.