ಬಾಗಲಕೋಟೆ: ಕೃಷಿಕನು ತನ್ನ ಆದಾಯ ವೃದ್ಧಿಸಿಕೊಳ್ಳಲು ಸಂಘಟನೆ, ಉತ್ಪಾದಿಸಿದ ಉತ್ಪನ್ನಗಳ ಸಂಸ್ಕರಣೆಯೊಂದಿಗೆ ಸ್ವತಃ ಮಾರಾಟ ಮಾಡಿದಲ್ಲಿ ಹೆಚ್ಚಿನ ಲಾಭ ಪಡೆಯಬಹುದುದೆಂದು ಅಭಿಪ್ರಾಯ ವ್ಯಕ್ತಪಡಿಸಿ, ಸ್ವತ: ಮಾರಾಟ ಮಾಡಲು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀಯುತ ಎಮ್.ಪಿ.ನಾಡಗೌಡರು, ಸಮಸ್ತ ರೈತರನ್ನು ಉದ್ಧೇಶಿಸಿ ಕರೆ ನೀಡಿದರು.
ನಗರದ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಯಗಳ ಸಂಯುಕ್ತ ಆಶ್ರಯದಲ್ಲಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಮುಂದಾಳತ್ವದಲ್ಲಿ, ಮುಗಳೊಳ್ಳಿಯವರ ಅಧ್ಯಕ್ಷತೆಯಲ್ಲಿ ಜರುಗಿದ "ರೈತ ಉತ್ಪನ್ನ ಸಂಸ್ಕರಿಸಿದ ಗೋಡಂಬಿ ಮಾರಾಟ ಮಾಹಿತಿ ಕಾಯರ್ಾಗಾರವನ್ನು ಚಿಕ್ಕಸಂಗಮ ಸಂಗಮನಾಥ ದೇವಾಲಯದಲ್ಲಿ ನೂರಾರು ರೈತರ ಸಮ್ಮುಖದಲ್ಲಿ ಜರುಗಿತು.
ಸಂಘಟನೆಗಾಗಿ ಹಾಗೂ ತಾಂತ್ರಿಕ ವಿಷಯಗಳಿಗಾಗಿ ತೋಟಗಾರಿಕೆ ಇಲಾಖೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಿಕಟ ಸಂಪರ್ಕ ಹೊಂದಲು ತಿಳಿಸಿದರು. ಡಾ|| ಶ್ರೀಪಾದ ವಿಶ್ವೇಶ್ವರ ರೈತ ಉತ್ಪಾದಕ ಸಂಘಗಳ ಸ್ಥಾಪನೆ, ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.
ಕಾಯರ್ಾಗಾರದಲ್ಲಿ ಶಾರದಾ ವಿ. ತುಳಸಿಗೇರಿ, ಸಗರಪ್ಪ ಧರಮಣ್ಣನವರ, ಪ್ರಭಾನಂದಯ್ಯ ಹಿರೇಮಠ, ಪ್ರವೀಣ ಜಾನಮಟ್ಟಿ ಹಾಗೂ ಮುಖ್ಯ ಶಿಕ್ಷಕರಾದ ಎಮ್. ಎಮ್. ಅಹ್ಮದಿ ಉಪಸ್ಥಿತರಿದ್ದರು.