ಹಳಿಯಾಳ 02: ಹಳಿಯಾಳ ತಾಲ್ಲೂಕಿನ ಜೋಗನಕೊಪ್ಪ ಗ್ರಾಮದ ಬಾಲಕನೊಬ್ಬ ಗಂಟಲಲ್ಲಿ ಬಲೂನ್ ಸಿಲುಕಿ ಭಾನುವಾರ ರಾತ್ರಿ ಮೃತಪಟ್ಟಿದ್ದಾನೆ.
ನವೀನ್ ನಾರಾಯಣ ಬೆಳಗಾಂವಕರ (13) ಮೃತ ಬಾಲಕ.
ಬಾಲಕ ಬಲೂನ್ ಊದುವ ವೇಳೆ ಗಂಟಲಿಗೆ ಸಿಲುಕಿ, ಉಸಿರುಗಟ್ಟಿತ್ತು. ಕೂಡಲೆ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದೆವು. ಬಾಲಕ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು'ಎಂದು ಮೃತನ ಕುಟುಂಬ ಸದಸ್ಯರೊಬ್ಬರು ತಿಳಿಸಿದ್ದಾರೆ.