ನವದೆಹಲಿ 25: ವಿಶ್ವದ ಅತಿದೊಡ್ಡ ಯೋಜನೆಗಳಲ್ಲೊಂದಾದ ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಂಡ 24 ಗಂಟೆಯಲ್ಲಿ ಒಂದು ಸಾವಿರ ಫಲಾನುಭವಿಗಳು ಇದರ ಲಾಭ ಪಡೆದುಕೊಂಡಿದ್ದಾರೆ.
ದೇಶಾದ್ಯಂತ ಒಂದು ಸಾವಿರ ರೋಗಿಗಳು ಆಯುಷ್ಮಾನ್ ಭಾರತ ಯೋಜನೆಯ ಆರೋಗ್ಯ ವಿಮೆ(ಹೆಲ್ತ್) ಮಾಡಿಸಿಕೊಂಡಿದ್ದು ಕೇವಲ 24 ಗಂಟೆಯೊಳಗೆ ಒಂದು ಸಾವಿರ ಮಂದಿ ಇದರ ಲಾಭ ಪಡೆದಿದ್ದಾರೆ.
ವಿಶೇಷವಾಗಿ ಛತ್ತೀಸ್ಘಡ, ಹರಿಯಾಣ, ಜಾರ್ಖಂಡ್, ಅಸ್ಸಾಂ, ಮಧ್ಯಪ್ರದೇಶ ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ಇದರ ಲಾಭವನ್ನು ಪಡೆದುಕೊಳ್ಳಲು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದರು.
ಈ ಯೋಜನೆ ಚಾಲನೆಗೊಂಡ ಕೆಲವೇ ಗಂಟೆಗಳಲ್ಲಿ ಪೂನಂ ಮುಹೋತೊ ಎಂಬ 20 ವರ್ಷದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದರು.
ಇದಕ್ಕಾಗಿ ಈ ಮಗುವಿಗೆ ಪ್ರಧಾನಿಯವರೇ ಐದು ಗೋಲ್ಡ್ ಕಾಡರ್್ಗಳನ್ನು ನೀಡಿದ್ದಾರೆ. ಇನ್ನು ಆಯುಷ್ಮಾನ್ ಯೋಜನೆ ಜಾರಿಯಾದ ಮರುಕ್ಷಣವೇ ರಾಂಚಿಯಲ್ಲಿರುವ ಸಕರ್ಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ಕೂಡಲೇ ಅವರಿಗೆ ಸ್ಥಳದಲ್ಲೇ ವಿಮೆ ಮಾಡಿಸಿ ಆಯುಷ್ಮಾನ್ ಭಾರತ್ ಯೋಜನೆಯಡಿ ಮೂತ್ರಸಂಬಂಧಿ ರೋಗ ಸೇರಿದಂತೆ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಲಾಗಿದೆ.
ವಾಷರ್ಿಕವಾಗಿ ಐದು ಲಕ್ಷದವರೆಗೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉತ್ತಮ ಆರೋಗ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ದೇಶಾದ್ಯಂತ ಸುಮಾರು 10 ಕೋಟಿ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ.
ರಾಷ್ಟ್ರೀಯ ಆರೋಗ್ಯ ಸಂಸ್ಥೆ ಯೋಜನೆಯನ್ನು ಅನುಷ್ಠಾನ ಮಾಡುವ ಹೊಣೆಗಾರಿಕೆ ಹೊತ್ತುಕೊಂಡಿದೆ. ಅಲ್ಲದೆ ದೇಶಾದ್ಯಂತ ಬಹುತೇಕ ಎಲ್ಲ ರಾಜ್ಯಗಳು ಈ ಯೋಜನೆಯನ್ನು ಅನುಷ್ಠಾನ ಮಾಡಿವೆ.