ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸೌಲಭ್ಯ ಪಡೆದು ಪಪ್ಪಾಯ ಬೆಳೆದ ಮಾದರಿ ರೈತ


ಕೊಪ್ಪಳ: ಕೊಪ್ಪಳ ತೋಟಗಾರಿಕೆ ಇಲಾಖೆಯ ರಾಷ್ರ್ಟೀಯ ಕೃಷಿ ವಿಕಾಸ ಯೋಜನೆಯಡಿ ಸೌಲಭ್ಯದೊಂದಿಗೆ ಪಪ್ಪಾಯ ಬೆಳೆದ ರೈತ ಹೊಳೆಗೌಡ ಅವರು ಇತರೆ ರೈತರಿಗೆ ಮಾದರಿ ಯಾಗಿದ್ದಾರೆ.

ಗಂಗಾವತಿ ತಾಲೂಕು ಭತ್ತದ ಕಣಜ ಎಂದೇ ಪ್ರಸಿದ್ಧಿ  ಅನೇಕ ವರ್ಷಗಳಿಂದ ಭತ್ತ ಬೆಳೆದು ರಾಜ್ಯಕ್ಕೆ ದೇಶಕ್ಕೆ ಅನ್ನ ನೀಡಿದ ಹೆಗ್ಗಳಿಕೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನದ್ದು.  ಇತ್ತೀಚಿಗೆ ಭತ್ತದ ಬೆಲೆ ಕುಸಿಯುತ್ತಿರುವುದು ಮಳೆ ಪ್ರಮಾಣ ಕಡಿಮೆಯಾಗಿ ಒಂದೇ ಬೆಳೆ ಬರುತ್ತಿರುವುದರಿಂದ ಭತ್ತ ಅಷ್ಟೊಂದು ಲಾಭದಾಯಕವಾಗಿ ಉಳಿದಿಲ್ಲ.  ಇದನ್ನರಿತ ಅನೇಕ ರೈತರು ತೋಟಗಾರಿಕೆಯತ್ತ ವಾಲುತ್ತಿದ್ದಾರೆ.  ಅಂಥವರಲ್ಲಿ ಗಂಗವಾತಿ ತಾಲೂಕಿನ ಹಲಸನಕಟ್ಟಿ ಗ್ರಾಮದ ಹೊಳೆಗೌಡ ಮಾಲೀಪಾಟೀಲ ಒಬ್ಬರು.  ಇವರು ಕೃಷಿ ಬೆಳೆಗಳಿಂದ ಭತ್ತ, ಜೋಳ ಬೆಳೆಯುತ್ತಾರೆ. 

ಗಂಗಾವತಿ ಸಹಾಯಕ ತೋಟಗಾರಿಕೆ ಅಧಿಕಾರಿ ಚಂದ್ರಶೇಖರ, ಅವರು ಭೇಟಿ ನೀಡಿ ಪರಿಶಿಷ್ಟ ಜಾತಿಯವರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಶೇ.90 ರಷ್ಟು ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಇರುವ ಮಾಹಿತಿಯನ್ನು ರೈತರಿಗೆ ನೀಡಿ ತೋಟಗಾರಿಕೆ ಬೆಳೆ ಬೆಳೆಯಲು ಸಲಹೆ ನೀಡಿದ್ದಾರೆ.  ತೋಟಗಾರಿಕೆ ಇಲಾಖೆಯಲ್ಲಿ ಅನುಸೂಚಿತ ಜಾತಿಯವರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಚಚರ್ಿಸಿದ ನಂತರ ಹೊಳೆಗೌಡರು ಪಪ್ಪಯಾ ಬೆಳೆಯಲು ನಿರ್ಧರಿಸಿ 2017-18 ನೇ ಸಾಲಿನಲ್ಲಿ ನವೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರದಿಂದ "ಥೈವಾನ್ ರೆಡ್ ಲೇಡಿ" ಎಂಬ ತಳಿಯ 3600 ಸಸಿಗಳನ್ನು ತಂದು ತಮ್ಮ ಮೂರು ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದರು.  ಇಲಾಖೆಯ ಅಧಿಕಾರಿಗಳ ಸಲಹೆಯಂತೆ ಕಾಲಕಾಲಕ್ಕೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದಾರೆ.  ಮೊದಲನೇ ಬಾರಿ ಪಪ್ಪಾಯ ಬೆಳೆದಿದ್ದರಿಂದ ರೋಗ ಕೀಟ ಬಾಧೆಯೂ ಕಮ್ಮಿಯಾಗಿರುವುದು ಅವರಿಗೆ ವರದಾನವಾಗಿದೆ.  ಪಪ್ಪಾಯಾ ಬೆಳೆಯು ಜೂನ್ ತಿಂಗಳಿನಿಂದಲೇ ಇಳುವರಿ ಕೊಡಲು ಆರಂಭಿಸಿದೆ.  ಆರಂಭದಲ್ಲಿ ಸರಾಸರಿ ರೂ. 12 ಪ್ರತಿ ಕಿ.ಗ್ರಾಂ. ನಂತೆ 35 ಟನ್ಗಳಷ್ಟು ಹಣ್ಣುಗಳನ್ನು ಸ್ಥಳೀಯ ಖರೀದಿದಾರರಲ್ಲದೇ  ಮುಂಬಯಿ, ಹೈದಾರಬಾದ್ನಿಂದಲೂ ವ್ಯಾಪರಿಗಳು ಬಂದು ಖರೀದಿಸಿದ್ದಾರೆ.  ಇದುವರೆಗೂ 4 ಲಕ್ಷಕ್ಕೂ  ಹೆಚ್ಚಿನ ಆದಾಯ ಪಡೆದಿರುವ ಇವರು ಇನ್ನೂ 6-8 ತಿಂಗಳಿನಲ್ಲಿ 80-100 ಟನ್ಗಳಷ್ಟು ಇಳುವರಿ ನಿರೀಕ್ಷಿಸಿದ್ದಾರೆ.  ರೂ.10 ರಂತೆ ಪ್ರತಿ ಕಿ.ಗ್ರಾಂ. ಸರಾಸರಿ ದರ ಸಿಕ್ಕರೂ ಇವರ ಒಟ್ಟಾರೆ ಆದಾಯ 8-10 ಲಕ್ಷ ರೂ. ತಲುಪುವ ನಿರೀಕ್ಷೆ ಇದೆ.  

"ತೋಟಗಾರಿಕೆ ಇಲಾಖೆಯಿಂದ ಸೌಲಭ್ಯ ಪಡೆದು ಪಪ್ಪಯಾ ಬೆಳೆದ ನನಗೆ ಉತ್ತಮ ಆದಾಯ ದೊರಕಿದೆ.  ಇದರಿಂದಾಗಿ ನನ್ನ ಆಥರ್ಿಕ ಪರಿಸ್ಥಿತಿ ಖಂಡಿತ ಉತ್ತಮವಾಗಿದೆ" ಎನ್ನುತ್ತಾರೆ ರೈತ ಹೊಳೆಗೌಡ್ರು. "ಸಾಂಪ್ರದಾಯಕ ಬೆಳೆಗಳ ಜೊತೆಗೆ ಹೆಚ್ಚಿನ ಆದಾಯ ತರುವ ವಾಣಿಜ್ಯ ಬೆಳೆಗಳಿಂದ ಆಥರ್ಿಕ ಸುಧಾರಣೆ ಹೊಂದಬಹುದಾಗಿದೆ.  ಇಲಾಖೆಯ ಸಲಹೆ ಪಡೆದು ಅದನ್ನು ಕಾರ್ಯರೂಪಕ್ಕೆ ತಂದು ಆಥರ್ಿಕ ಲಾಭ ಪಡೆದ ಹೊಳೆಗೌಡರೊಬ್ಬರು ಎಲ್ಲರಿಂದ ಭಿನ್ನ ರೈತರಾಗಿ ಕಾಣುತ್ತಾರೆ" ಎಂದು ಗಂಗಾವತಿ ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕ ಶಿವಯೋಗಪ್ಪ ಅವರು ರೈತ ಹೊಳೆಗೌಡ್ರುರವರ ಕಾರ್ಯಕ್ಕೆ ಪ್ರಶಂಸಿದ್ದಾರೆ.

ಇಲಾಖೆ ಸೌಲಭ್ಯ: ತೋಟಗಾರಿಕೆ ಇಲಾಖೆಯಿಂದ ದೊರೆತ ಸೌಲಭ್ಯ ಇಂತಿದೆ.   ಪರಿಶಿಷ್ಟ ಜಾತಿಗೆ ಸೇರಿದ ಹೊಳೆಗೌಡರಿಗೆ ಇಲಾಖೆಯಿಂದ ಹನಿ ನೀರಾ (ಓಜೆ) ಅಳವಡಿಸಿಕೊಳ್ಳಲು ಶೇ.90 ರ ಸಹಾಯಧನ ದೊರೆತಿದೆ.  ಇದಲ್ಲದೇ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ಪಪ್ಪಯಾ ಬೆಳೆಯಲು ಸಹಾಯಧನ ದೊರೆತಿದೆ.  ರೈತರು ಸ್ವಂತ ಟ್ರ್ಯಾಕ್ಟರ್ ಹೊಂದಿದ್ದರಿಂದ ನೀರಿನ ಟ್ಯಾಂಕರ್ ಖರೀದಿಸಲು ಶೇ.90 ರ ಸಹಾಯಧನ ಪಡೆದಿದ್ದಾರೆ.  ಹೀಗೆ ಒಟ್ಟಾರೆಯಾಗಿ ಇಲಾಖೆಯಿಂದ ಉತ್ತಮ ಸೌಲಭ್ಯ ಪಡೆದ ರೈತ ಹೊಳೆಗೌಡರು ಪಪ್ಪಯಾ ಬೆಳೆದು ಉತ್ತಮ ಲಾಭ ಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ರೈತ ಹೊಳೆಗೌಡ ಮಾಲೀ ಪಾಟೀಲ ಗ್ರಾಮ ಹಲಸಿನಕಟ್ಟಿ ಮೋ.ಸಂ. 9880142347, ಗಂಗಾವತಿ ಸಹಾಯಕ ತೋಟಗಾರಿಕೆ ಅಧಿಕಾರಿ ಚಂದ್ರಶೇಖರ ಕುರಿ ಮೊ.ಸಂ. 8722446738, ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕರು ಶಿವಯೋಗಪ್ಪ ಮೊ.ಸಂ. 9743518608 ಇವರನ್ನು ಸಂಪಕರ್ಿಸಬಹುದು.