ನಾಟಕಗಳಿಂದ ಸಮಾಜಕ್ಕೊಂದು ಸಂದೇಶ: ಪಟ್ಟಣಶೆಟ್ಟಿ

ಲೋಕದರ್ಶನ ವರದಿ

ಬೆಳಗಾವಿ 29:  ನಾಟಕಗಳು ಕೇವಲ ಮನರಂಜನೆಗಾಗಿ ಮಾತ್ರ ಇರಬಾರದು ಅದರಿಂದ ಸಮಾಜಕ್ಕೊಂದು ಒಳ್ಳೆಯ ಸಂದೇಶವನ್ನು ನೀಡುವಂತಿರಬೇಕು.  ನಾನು ರಂಗಕ್ಕಾಗಿ ಆಯ್ದುಕೊಳ್ಳುವ ಎಲ್ಲ ನಾಟಕಗಳನ್ನು ನಾನು ಗಮನಿಸುವುದು ಮನರಂಜನೆಯೊಂದಿಗೆ ಜನರಿಗೊಂದು ಒಳ್ಳೆಯ ವಿಚಾರವನ್ನು ಹೇಳುವ ಕುರಿತು. ಅದರಂತೆ ಇಂದಿನ 'ಮದುವೆ ಮಾಕರ್ೆಟ್ ಹಾಗೂ 'ಸಾವಳಗಿ ಶಿವಲಿಂಗೇಶ್ವರ ಮಹಾತ್ಮೆ ಎರಡು ನಾಟಕಗಳನ್ನು ಆಯ್ದುಕೊಂಡಿದ್ದೇನೆ ಎಂದು ರಂಗಕಮರ್ಿ ಖನಗಾಂವದ ಖನ್ನಮ್ಮದೇವಿ ನಾಟ್ಯಸಂಘದ ಅಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ ಇಂದಿಲ್ಲಿ ಹೇಳಿದರು

ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಸವದತ್ತಿಯ ಜೈ ಕನರ್ಾಟಕ ಸೇನೆಯ ಆಶ್ರಯದಲ್ಲಿ ಹುಕ್ಕೇರಿಯ ಶ್ರೀ ಖನಗಾಂವದ ಖನ್ನಮ್ಮದೇವಿ ನಾಟ್ಯಸಂಘದವರು ಹಮ್ಮಿಕೊಂಡಿದ್ದ ಎಂ. ಎಸ್. ನರಸಿಂಹಮೂತರ್ಿ ಕೃತ 'ಮದುವೆ ಮಾಕರ್ೆಟ್ ಹಾಗೂ ಬಸವರಾಜ ಪಟ್ಟಣಶೆಟ್ಟಿ ಕೃತ 'ಸಾವಳಗಿ ಶಿವಲಿಂಗೇಶ್ವರ ಮಹಾತ್ಮೆ ನಾಟಕಗಳ ಪ್ರದರ್ಶನದ ಉದ್ಘಾಟನಾ ಸಮಾರಂಭದಲಿ ಮಾತನಾಡುತ್ತ  ಕಲಾವಿದ ಪಟ್ಟಣಶೆಟ್ಟಿ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಮಲ್ಲಿಕಾಜರ್ುನ ಶಿವಾಚಾರ್ಯ ಮಹಾಸ್ವಾಮಿಗಳು ಮೂಲಿಮಠ ಸವದತ್ತಿ ಹಾಗೂ ಪರಮಪೂಜ್ಯ ಅಜ್ಜಯ್ಯ ಮಹಾಸ್ವಾಮಿಗಳು ಬೆಟ್ಸೂರಮಠ ಸವದತ್ತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಗಣ್ಯರಾದ ಬೆಂಡಿಗೇರಿ ಹಾಗೂ ಪುರಸಭೆ ಸದಸ್ಯರಾದ ಶ್ರೀಶೈಲ ಕತ್ತಿ, ಇನ್ನೋರ್ವ ಸದಸ್ಯರಾದ ನಿಂಗಪ್ಪ ಬೆಟ್ಸೂರ, ಜೈ ಕನರ್ಾಟಕ ಸೇನೆ ರಾಜ್ಯ ಉಪಾಧ್ಯಕ್ಷರಾದ ಯಲ್ಲಪ್ಪ ಮಾನಕಪ್ಪಗೋಳ ಹಾಗೂ ಸೇನೆಯ ಜಿಲ್ಲಾಧ್ಯಕ್ಷ ಸಲಿಂ ನದಾಫ ಮತ್ತು ಗಣ್ಯವ್ಯಕ್ತಿಗಳಾದ ಯಲ್ಲಪ್ಪ ಬಜೇರಿ ಹಾಗೂ ಬಸವರಾಜ ವರಣ್ಣವರ ಮುಂತಾದವರು ಉಪಸ್ಥಿತರಿದ್ದರು. 

ಜೈ ಕನರ್ಾಟಕ ಸೇನೆಯ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸಂಗಮೇಶ ಶೀಲವಂತರ ಹಾಗೂ ಸವದತ್ತಿ ತಾಲೂಕಾ ಸೇನೆಯ ಅಧ್ಯಕ್ಷ ಶಂಕರ ಉಪ್ಪಾರ ಮತ್ತು ಇತರ ಕಾರ್ಯಕರ್ತರು ಶ್ರಮ ವಹಿಸಿ ಈ ನಾಟಕಗಳ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಮಲ್ಲಿಕಾಜರ್ುನ ಶಿವಾಚಾರ್ಯಸ್ವಾಮಿಗಳು ಆಶೀರ್ವದಿಸಿದರು. ಕಲಾವಿದ ಹುಸೇನ ನದಾಫ ಅವರು ನಿರೂಪಿಸಿ, ವಂದಿಸಿದರು.