ಎ.ಐ.ಟಿ.ಎಂ. ಎಂ.ಬಿ.ಎ. ಫಿಯೆಸ್ಟಾ 2ಏ25 ಬೃಹತ್ ರಾಷ್ಟ್ರೀಯ ಮಟ್ಟದ ಮ್ಯಾನೆಜಮೆಂಟ ಉತ್ಸವ

A.I.T.M. M.B.A. Fiesta 2A25 is a huge national level management festival

ಎ.ಐ.ಟಿ.ಎಂ. ಎಂ.ಬಿ.ಎ. ಫಿಯೆಸ್ಟಾ 2ಏ25  ಬೃಹತ್ ರಾಷ್ಟ್ರೀಯ ಮಟ್ಟದ ಮ್ಯಾನೆಜಮೆಂಟ ಉತ್ಸವ 

ಬೆಳಗಾವಿ 5: ಇಂದಿನ ವಿದ್ಯಾರ್ಥಿಗಳು ನಾಳಿನ ಭವಿಷ್ಯವಾಗಿದ್ದಾರೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣಕ್ಕಿಂತ ಮೇಲ್ಪಟ್ಟು ಕಲಿಯಬೇಕಿದೆ ಮತ್ತು ಭವಿಷ್ಯಕ್ಕೆ ಸಿದ್ಧರಾಗಬೇಕಾಗಿದೆ. ವಿದ್ಯಾರ್ಥಿಗಳು ಸಂವಹನ ಕೌಶಲಗಳನ್ನು ಬೆಳೆಸಿಕೊಂಡು ಸ್ಪರ್ಧಾತ್ಮಕವಾಗಿ ಮುನ್ನಡೆಯುವ ಗುರಿಯನ್ನು ಹೊಂದಿರಬೇಕು. ಅವರು ತಮ್ಮ ಮೊಬೈಲಿನಿಂದ ದೂರವಿದ್ದು, ಕೇವಲ ರಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ ಇಲೇಕ್ಟ್ರಾನಿಕ್ ಉಪಕರಣಗಳನ್ನು ಬಳಸಬೇಕು.  ನಾಯಕತ್ವ, ನಿರ್ಧಾರ ಕೈಗೊಳ್ಳುವಿಕೆ, ಸಮಸ್ಯೆ ಪರಿಹಾರ ಮತ್ತು ಸಂಪನ್ಮೂಲ ನಿರ್ವಹಣೆ ಮುಂತಾದ ಉದ್ಯೋಗವನ್ನು ಪಡೆಯಲು ಪ್ರಮುಖವಾಗಿವೆ ಎಂದು ಬೆಳಗಾವಿಯ ಒರಿಯನ್ ಹೈಡ್ರಾಲಿಕ್ಸ ಪ್ರೈವೆಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಕೀತ್ ಮಚಾಡೊ ಹೇಳಿದರು. 

ಅವರು ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಮಂಗಳವಾರ, ದಿನಾಂಕ 04 ಮಾರ್ಚ, 2025 ರಂದು ಎಂ.ಬಿ.ಎ. ವಿಭಾಗದ ವತಿಯಿಂದ ನೆರವೇರಿದ ಎ.ಐ.ಟಿ.ಎಂ ಎಂ.ಬಿ.ಎ. ಫಿಯೇಸ್ಟಾ 2ಏ25- ಎರಡು ದಿನಗಳ ರಾಷ್ಟ್ರೀಯ ಮಟ್ಟದ ಮ್ಯಾನೆಜಮೆಂಟ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯ ಅತಿಥಿಯಾಗಿ ಮಾತನಾಡಿದರು.  

ಇಂದಿನ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ತಾಂತ್ರಿಕ ಕೌಶಲ್ಯ ಹಾಗೂ ಗುಣಮಟ್ಟದ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಗೂಗಲ್, ಫೇಸ್‌ಬುಕ್, ವಾಟ್ಸಅಪ್ ಕಂಪನಿಗಳು ಗಳಿಸಿದ ಯಶಸ್ಸಿನಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣ, ಅನುಭವ, ಕೌಶಲ್ಯತೆ ಹಾಗೂ ಆನಂದಮಯ ಗುಣಗಳು ಬೆಳೆಯಬೇಕು.  ವಿವಿಧ ಕ್ಷೇತ್ರಗಳಲ್ಲಿ ಸಿಗುವ ಅಗಾಧ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸರ್ವತೋಮುಖ ಬೆಳವಣಿಗೆಗಾಗಿ ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕೆಂದು ಕರೆ ನೀಡಿದರು. 

ಎಂ.ಬಿ.ಎ. ವಿಭಾಗದ ನಿರ್ದೇಶಕ ಡಾ. ಸೂರ್ಯಕುಮಾರ ಖನೈ ಮಾತನಾಡಿ, ಎಂ.ಬಿ.ಎ. ಇಲಾಖೆ ಶಿಕ್ಷಣದ ಮೇಲೆ ಮಾತ್ರ ಗಮನ ಹರಿಸುತ್ತಿಲ್ಲ.  ಜೊತೆಗೆ ಮೌಲ್ಯವರ್ಧಿತ ಚಟುವಟಿಕೆಗಳ ಬಗ್ಗೆಯೂ ಗಮನ ಹರಿಸುತ್ತಿದೆ.  ಇದು ಅಂತಿಮವಾಗಿ ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಸಿದ್ದವಾಗಲು ಸಹಾಯ ಮಾಡುತ್ತದೆ. ಒಃಂಅಂಋಒ ವು "ಗ್ಲೋಬಲ್ ಇಮರ್ಶನ್ ಪ್ರೊಗ್ರಾಮ್" ಎಂಬ ನವೀನ ಪರಿಕಲ್ಪನೆಯನ್ನು ಪರಿಚಯಿಸಿದ್ದು, ಇದು ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಮಲೇಷಿಯಾ, ಸಿಂಗಾಪೂರ ಮತ್ತು ದುಬೈನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡುವ ಅವಕಾಶವನ್ನು ನೀಡುತ್ತದೆ ಎಂದು ಅವರು ವಿವರಿಸಿದರು. 

ಈ ಉತ್ಸವದಲ್ಲಿ ವಿವಿಧ ಕಾಲೇಜುಗಳಿಂದ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಎರಡು ದಿನಗಳ ಕಾಲ ಸ್ಪರ್ಧಾತ್ಮಕ ಕಾರ್ಯಕ್ರಮಗಳು ಜರುಗುವವು. 

ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕಿ ಡಾ. ಸ್ಪೂರ್ತಿ ಅಂಗಡಿ ಪಾಟೀಲ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರವೃಂಧ, ಸಿಬ್ಬಂದಿ ವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಎಂ.ಬಿ.ಎ. ನಿರ್ದೇಶಕ ಡಾ. ಸೂರ್ಯಕುಮಾರ ಖನೈ ಸ್ವಾಗತಿಸಿದರು.  ಸ್ನೇಹಾ ಸದಲಗೆ ಮತ್ತು ಬಸವರಾಜ ಕುಟ್ರೆ ನಿರೂಪಿಸಿದರು. ಪ್ರೊ. ವಿಶಾಲ ಬೋಗಾರ ವಂದಿಸಿದರು.