ಕಾಗವಾಡ : ರಕ್ತದಲ್ಲಿಯ ಕ್ಯಾನ್ಸರ್ ರೋಗ ಉಪಚಾರಕ್ಕಾಗಿ ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ಈ ರಾಜ್ಯಗಳಲ್ಲಿ ಹೆಸರಾಂತವಾದ ಮಿರಜದ ಡಾ. ಜೋಶಿ'ಸ್ ಕ್ಯಾನ್ಸರ್ ದಶಕಪೂರ್ತಿ ಸಮಾರಂಭ ಶನಿವಾರ ದಿ. 9 ರಂದು ಜರುಗಿತು.
ಕಳೇದ ಹತ್ತು ವರ್ಷಗಳಲ್ಲಿ ಈ ಆಸ್ಪತ್ರೆಯಲ್ಲಿ ಉಪಚಾರಿಸಿಕೊಂಡ ಎಲ್ಲ ರೋಗಿಗಳು, ಆಪ್ತರು ಪಾಲ್ಗೊಂಡು ಅಭಿನಂದನೆ ಸಲ್ಲಿಸಿದರು.
ಮಿರಜದ ಖ್ಯಾತ ವೈದ್ಯಕೀಯ ತಜ್ಞರಾದ ಡಾ. ಹೇಮಂತ ಪಾಡಿಯಾ, ಸಾಂಗಲಿ ಮಹಾನಗರ ಪಾಲಿಕೆಯ ಮಹಾಪೌರ ಸಂಗೀತಾ ಖೋತ, ಬಿಜೆಪಿಯ ನೇತಾರರು ಸುರೇಶ ಅವಟಿ, ಸ್ತಾಯಿ ಸಮಿತಿ ಆಧ್ಯಕ್ಷ ಸಂದೀಪ ಅವಟಿ, ಯುವಧುರಿಣ ದಿಗಂಬರ ಜಾಧವ, ಡಾ. ಜೋಶಿ ಕ್ಯಾನ್ಸರ್ ಮೇಡಿಕಲ್ ಸೆಂಟರ್ದ ಮುಖ್ಯಸ್ಥ ಡಾ. ರವೀಂದ್ರ ಜೋಶಿ, ಡಾ. ಎಂ.ವ್ಹಿ.ವಿಜಾಪುರೆ, ಸಿ.ಎಂ.ಕಿತ್ತೂರೆ ಇವರು ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರನ್ನು ಸನ್ಮಾನಿಸಿದರು. ಡಾ. ಹೇಮಂತ ಪಾಡಿಯಾ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಸಮಾರಂಭದಲ್ಲಿ ಡಾ. ರವೀಂದ್ರ ಜೋಶಿ ಮಾತನಾಡುವಾಗ, 10 ವರ್ಷಗಳಲ್ಲಿ ಆಸ್ಪತ್ರೆಯಲ್ಲಿ ಕೈಗೊಂಡ ಋಗ್ನರ್ ಸೇವೆ ಇದು ನನ್ನ ಈಶ್ವರ ಸೇವೆ ಎಂದು ಭಾವಿಸಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ.
ಅಂತರ-ರಾಷ್ಟ್ರೀಯ, ರಾಷ್ಟ್ರ, ರಾಜ್ಯ ಮಟ್ಟಗಳಲ್ಲಿಯ ವಿವಿಧ ಪ್ರಶಸ್ತಿಗಳನ್ನು ಋಗ್ನಾಲಯಕ್ಕೆ ಲಭಿಸಿವೆ. ನಾವು ರೋಗಿಗಳಿಗೆ ನೀಡಿರುವ ಪ್ರಾಮಾಣಿಕ ಸೇವೆಯ ಇದೊಂದು ಪಾವತಿ ಎಂದರು.
ಸಿದ್ಧಿವಿನಾಯಕ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ ಡಾ. ಶಿಶೀರ್ ಗೋಸಾವಿ ಮಹಾತ್ಮಾ ಗಾಂಧಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ ಡಾ. ಶರದ್ ದೇಸಾಯಿ, ತ್ವಚಾರೋಗ ತಜ್ಞ ಡಾ. ದಯಾನಂದ ನಾಯಿಕ, ಡಾ. ದೀಪಕ ಪರಿಚಾರಕ, ಡಾ. ಗಾಡವೆ, ಡಾ. ಸೋಮನಾಥ ಮಗದುಮ್ಮ, ಡಾ. ಯಶ್ವಂತ ತೋರೊ, ಡಾ. ವಿಕಾಸ ಗೋಸಾವಿ, ಡಾ. ಪಿ.ಬಿ.ಮಗದುಮ್ಮ, ಡಾ. ಅಶೋಕ ಕುಲಕರ್ಣಿ, ಡಾ. ಖಡಕೋಳ,ಡಾ. ಸಂತೋಷ ಕುಲಗೋಡ್, ಡಾ. ಚಿಚಳೆ, ಡಾ. ವಿವೇಕ ಕುಲಕರ್ಣಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.