ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.28ರಂದು 'ರಾಷ್ಟ್ರೀಯ ವಿಜ್ಞಾನ ದಿನಾಚರಣೆ'ಯ ಅಂಗವಾಗಿ 'ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು
ಯರಗಟ್ಟಿ 28 : ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.28ರಂದು 'ರಾಷ್ಟ್ರೀಯ ವಿಜ್ಞಾನ ದಿನಾಚರಣೆ'ಯ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕರ ಮಾದರಿ ಶಾಲೆಯ ಪ್ರಧಾನ ಗುರುಗಳಾದ ಮಂಜುನಾಥ ಕಂಬಾರ ಇವರು ಮಾನವನ ಮತ್ತು ವಿಜ್ಞಾನದ ನಡುವಿನ ಸಂಬಂಧ ದಿನನಿತ್ಯ ಜೀವನದಲ್ಲಿ ವಿಜ್ಞಾನದ ಪ್ರಾಮುಖ್ಯತೆ ಗಣಿತದ ಅಗತ್ಯತೆಯ ಬಗ್ಗೆ ಪ್ರಾಯೋಗಿಕವಾಗಿ ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಡಾ. ಸಿಂಕದರ ಚಾಂದಖಾನವರ ವಹಿಸಿಕೊಂಡಿದ್ದರು ಶಾಲೆಯ ಪ್ರಧಾನ ಗುರುಗಳು ಎ. ಎ. ಮಕ್ತುಮ್ನವರ ಎಂ. ಎಂ. ಚೀಲದ ಎಸ್ ಬಿ ಮಿಕಲಿ ಸಿ.ಆರ್.ಪಿ ವಸಂತ ಬಡಿಗೇರ ಎಸ್ ಡಿಎಂಸಿ ಸದಸ್ಯರು ಸಕ್ಕುಬಾಯಿ ಕುಂಬಾರ ರೇಷ್ಮಾ ಬಾಗಿಲದಾರ ಶಾಲೆಯ ಸರ್ವ ಗುರು ಬಳಗ ಭಾಗ ವಹಿಸಿದ್ದರು ಪ್ರಾಸ್ತಾವಿಕವಾಗಿ ಮಾತನಾಡಿದ ನಾಗಮ್ಮ ಗುರುಮಾತೆ ವಿಜ್ಞಾನವು ಬರೀ ಕಲಿಕೆಯ ವಿಷಯವಾಗದೆ ವಿದ್ಯಾರ್ಥಿಯ ಕ್ರಿಯಾತ್ಮಕ ಅಲೋಚನೆಗಳನ್ನು ಪ್ರಬಲಗೊಳಿಸುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಾಗಮ್ಮ ಕುರಿ ಸ್ವಾಗತಿಸಿ ಸೌಮ್ಯಾ ದಾಸರೆಡ್ಡಿ ಗುರುಮಾತೆಯರು ವಂದಿಸಿದರು. ಕಾರ್ಯಕ್ರಮವನ್ನು ಜಯಶ್ರೀ ಬಡಕಪ್ಪನವರ ಗುರು ಮಾತೆಯರು ನಿರೂಪಿಸಿದರು.