ಯಮಕನಮರಡಿ 13: ಗ್ರಾಮೀಣ ಮಕ್ಕಳಲ್ಲಿನ ಸೂಪ್ತವಾದ ಪ್ರತಿಭೆಗಳನ್ನು ಹೊರಹಾಕುವ ದಿಸೆಯಲ್ಲಿ ನಡೆಸಲಾಗುವ ಸತೀಶ ಪ್ರತಿಭಾ ಪುರಸ್ಕಾರವು ಕಳೆದ 8 ವರ್ಷಗಳಿಂದ ಜನಮಾನಸದಲ್ಲಿ ಅಚ್ಚೋತ್ತಿದೆ ಅಲ್ಲದೆ ಗ್ರಾಮೀಣ ವಲಯದಲ್ಲಿ ಕಾರ್ಯಕ್ರಮ "ಮಕ್ಕಳ ಹಬ್ಬವಾಗಿ ಪರಿಣಮಿಸಿದೆ ಎಂದು ಯಮಕನಮರಡಿಯ ಕಾಂಗ್ರೇಸ್ಸ್ ಬ್ಲಾಕ್ ಅಧ್ಯಕ್ಷ ಕಿರಣ ರಜಪೂತ ಹೇಳಿದರು,
ಎನ್,ಎಸ್,ಎಫ್,ಪ್ರೌಢ ಶಾಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಈ ಸಮಾರಂಭ ಶನಿವಾರ ದಿ,14 ಹಾಗೂ ರವಿವಾರ ದಿ,15 ರಂದು ಅದ್ದೂರಿಯಾಗಿ ನಡೆಯಲಿದೆ ಪ್ರತಿಭಾ ಪುರಸ್ಕಾರದ ಸಮಾರಂಭದಲ್ಲಿ ಗ್ರಾಮೀಣ ವಲಯದ ಸುಮಾರು 800 ಕ್ಕೂ ಹೆಚ್ಚು ಪ್ರಾಥಮಿಕ, ಪ್ರೌಢಾಶಾಲೆ, ಹಾಗೂ ಕಾಲೇಜು ವಿಭಾಗಗಳ ವಿದ್ಯಾಥರ್ಿಗಳು ಅಂತಿಮ ಹಂತದ ಸ್ಫಧರ್ೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ಪ್ರಥಮ ದಿನದ ಸಮಾರಂಭ ಸಂಜೆ 5 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ಪ್ರಥಮ ದಿನದ ಸಮಾರಂಭದ ದಿವ್ಯ ಸಾನಿಧ್ಯವನ್ನು ಹುಕ್ಕೇರಿಯ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಹಾಗೂ ಹತ್ತರಗಿಯ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳು ಉಪಸ್ಥಿತರಿರುವರು ಹತ್ತರಗಿ ಗ್ರಾ,ಪಂ ಅಧ್ಯಕ್ಷ ಮಹಾದೇವ ಪಠೋಳಿ, ಹಾಗೂ ಯಮಕನಮರಡಿ ಗ್ರಾಮ,ಪಂ, ಅಧ್ಯಕ್ಷೆ ಅವ್ವಕ್ಕಾ ಮಾದರ, ವೇದಿಕೆಯಲ್ಲಿರುವರು ಕಾರ್ಯಕ್ರಮದ ಉದ್ಘಾಟನೆಯನ್ನು ಉಭಯ ಗಣ್ಯರೊಂದಿಗೆ ಕಳೆದ ವರ್ಷ ಭಾಷಣ ಸ್ಪಧರ್ೆಯ ವಿಜೇತರಾದ ಶ್ವೇತಾ ಇನಾಮದಾರ ಹಾಗೂ ಶ್ರೇಯಾ ಜನಾಜ, ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಲಿದ್ದಾರೆ, ಪ್ರಥಮ ದಿನ ಭಾಷಣ ಸ್ಫಧರ್ೆ, ಜನಪದ ಗಾಯನ [ಪ್ರೌಢಶಾಲಾ ವಿಭಾಗ] ಗಾಯನ [ಸ್ಪಧರ್ೆ ಪ್ರಾಥಮಿಕ ವಿಭಾಗ] ಸ್ಫಧರ್ೆಗಳು ನಡೆಯಲಿವೆ ನಂತರ ವಿಜೇತರರಿಗೆ ಬಹುಮಾನ, ಹಲವಾರು ಕಲಾವಿದರ ಹಾಸ್ಯದ ಪ್ರಸಂಗಗಳು ಸಮಾರಂಭಕ್ಕೆ ಮೆರಗು ತರಲಿವೆ, ದಿ,15 ರಂದು ಸಂಜೆ 5 ಕ್ಕೆ ನಡೆಯಲಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯಮಕನಮರಡಿಯ ಶ್ರೀಗುರುಚಾಚೋಟಿ ಮಹಾಸ್ವಾಮಿಗಳು ಹಾಗೂ ಉಳ್ಳಾಗಡ್ಡಿ-ಖಾನಾಪೂರದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಉಪಸ್ಥಿತರಿರುವರು, ಸಮಾರೊಪ ಸಮಾರಂಭದ ಅಧ್ಯಕ್ಷತೆಯನ್ನು ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿ,ವಹಿಸಿ ಮಾತನಾಡಲಿದ್ದಾರೆ, ಅಂದು ಗಾಯನ ಸ್ಫಧರ್ೆ,[ಕಾಲೇಜು ವಿಭಾಗ] ಜನಪದ ನೃತ್ಯ [ಪ್ರೌಢಶಾಲಾ ವಿಭಾಗ] ಹಾಗೂ ಸಮೂಹ ನೃತ್ಯ [ಪ್ರಾಥಮಿಕ ವಿಭಾಗ] ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ, ನಂತರ ವಿಜೇತರರಿಗೆ ಬಹುಮಾನ ವಿತರಣಾ ಕಾರ್ಯಕ್ರಮ, ನಡೆಯಲಿದೆ ಪತ್ರಿಕಾಗೋಷ್ಠಿಯಲ್ಲಿ ತಾ,ಪಂ,ಅಧ್ಯಕ್ಷ ದಸ್ತಗೀರ ಬಸ್ಸಾಪೂರಿ ಮಹಾದೇವ ಪಟೋಳಿ, ರವಿ ಜಿಂಡ್ರಾಳಿ,ಬ್ಲಾಕ್ ಕಾಂಗ್ರೇಸ್ಸ್ ಅಧ್ಯಕ್ಷ ವೀರಣ್ಣ ಬಿಸಿರೋಟ್ಟಿ, ನಾಗರಾಜ ದುಂದುರ,ಎಸ್,ಎಸ್,ಅತ್ಯಾಳಿ, ಉಪಸ್ಥಿತರಿದ್ದರು,