ಗದಗ ಜಿಲ್ಲೆಯಲ್ಲಿ 960 ಪ್ರಕರಣಗಳು ರಾಜೀ: ನ್ಯಾ. ಸಂಗ್ರೇಶಿ

ಗದಗ 08: ಗದಗ  ಜಿಲ್ಲೆಯಲ್ಲಿ   ರಾಷ್ಟ್ರೀಯ ಲೋಕ  ಅದಾಲತ್ನಲ್ಲಿ  1200 ಮೇಲ್ಪಟ್ಟು ಪ್ರಕರಣಗಳು ಸ್ವೀಕೃತವಾಗಿದ್ದು  960ಪ್ರಕರಣಗಳು ರಾಜೀಯಾಗಿವೆ.    ಇನ್ನೂ 100 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ ಎಂದು ಗದಗ  ಜಿಲ್ಲಾ ಪ್ರಧಾನ ಮತ್ತು ಸತ್ರ  ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ ಅವರು ತಿಳಿಸಿದರು.  

ಗದಗ ಜಿಲ್ಲಾ  ನ್ಯಾಯಾಲಯದ ವಿಡಿಯೋ ಕಾನ್ಫರನ್ಸ್ ಕೊಠಡಿಯಲ್ಲಿ  ಪತ್ರಿಕಾಗೋಷ್ಟಿಯನ್ನುದ್ದೇಶಿಸಿ  ಅವರು ಮಾತನಾಡಿದರು. 

ಹೂವಿನಹಡಗಲಿ ಗ್ರಾಮದಲ್ಲಿ ದಿ. 26ರಂದು  ಕಾರ್ ಮತ್ತು ಬೈಕ್ ನಡುವೆ ಅಪಘಾತವಾಗಿದ್ದು ಬೈಕ್ ಸವಾರ ರಾಜೇಂದ್ರ ಅರಕೇರಿ  ಸ್ಥಳದಲ್ಲಿ ಮೃತರಾಗಿದ್ದರು.  ಈ ನಿಮಿತ್ತ 22-7-19 ರಂದು  ಪ್ರಕರಣ ದಾಖಲು ದಾಖಲಾಗಿತ್ತು.   ಪ್ರಕರಣವು ರೂ.27 ಲಕ್ಷ ರೂ ಪರಿಹಾರಕ್ಕೆ  ರಾಜೀಯಾಗಿದ್ದು  ದಿ ನ್ಯೂ ಇಂಡಿಯಾ ಅಸೂರನ್ಸ್ ಕಂಪನಿಯಿಂದ  ಮೃತರ ಪತ್ನಿ   ರತ್ನಾ  ಅವರಿಗೆ  27 ಲಕ್ಷ ರೂ  ಚೆಕ್ ಇದೇ ಸಂದರ್ಭದಲ್ಲಿ  ವಿತರಣೆ ಮಾಡಲಾಯಿತು. 

ನರಗುಂದ ಕುರ್ಲಗೇರಿ ರಸ್ತೆಯಲ್ಲಿ ದಿ: 25ರಂದು ರಸ್ತೆ ಅಪಘಾತದಲ್ಲಿ ಬೈಕ ಸವಾರ  ಶರಣಪ್ಪ ಹೂಗಾರ   ತನ್ನ ಬಲಗೈಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು ಇದರ ಬಗ್ಗೆ   ದಿ. 6ರಂದು ಪ್ರಕರಣ ದಾಖಲಾಗಿತ್ತು. ಇಂದು 17 ಲಕ್ಷ ರೂ.ಗಳಿಗೆ  ಪರಿಹಾರಕ್ಕೆ ರಾಜೀಯಾಗಿದೆ.  ಎಂದು  ಪ್ರಧಾನ  ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ನುಡಿದರು.

ಅಪರ ಜಿಲ್ಲಾ ನ್ಯಾಯಾಧೀಶರಾದ ನರಸಿಂಹ ಎಂ.ವಿ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ರೂಪಾ ಎಸ್ ಎಸ್ ನಾಯಕ,  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಜಿ. ಸಲಗರೆ, 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಧೀಶ ಪಿ.ಜಿ. ಚೆಲುವಮೂರ್ತಿ , ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀನಿಆಸ್,  ಅಪರ ಹಿರಿಯ ದಿವಾಣಿ ನ್ಯಾಯಾಧೀಶರಾದ  ರಾಜಣ್ಣ ಸಂಕಣ್ಣವರ,  ನ್ಯೂ ಇಂಡಿಯಾ ಅಸೂರನ್ಸ್ ಕಂಪನಿ ವಕೀಲರಾದ ಎಸ್.ಕೆ.ಪಾಟೀಲ ಮತ್ತು  ಎಸ್.ಬಿ,  ಹಿರೇಮಠ  ಹಾಗೂ ಅಧಿಕಾರಿಗಳಾದ    ಸತೀಶ ಲಕ್ಷ್ಮೇಶ್ವರ, ವೆಂಕಟೇಶ ಬಿ.ವೈ  ಮತ್ತು  ಮಂಜುನಾಥ ಕುರಡೇಕರ್,  ಕಿರಿಯ ವಿಭಾಗದ ನ್ಯಾಯಾಧೀಶರುಗಳಾದ ಎ.ಎಂ. ಬಡಿಗೇರ, ಮಹಾದೇವಪ್ಪ ಎಚ್,  ಶ್ರೀಕಾಂತ ರವೀಂದ್ರ, ಸಲ್ಮಾ ಎ.ಎಸ್., ನಿಖಿತಾ ಅಕ್ಕಿ,  ವಕೀಲರುಗಳು ಉಪಸ್ಥಿತರಿದ್ದರು.