ಮಹಾನ್ ಕ್ರಾಂತಿಕಾರಿ ಚಂದ್ರ ಶೇಖರ್ ಆಜಾದ್ 94ನೇ ಹುತಾತ್ಮ ದಿನ ಆಚರಣೆ

94th Martyrdom Day Celebration of Great Revolutionary Chandra Shekhar Azad...

ಕೊಪ್ಪಳ 27:AIDSO  ಮತ್ತು AIDYO ನೇತೃತ್ವದಲ್ಲಿ ಕೊಪ್ಪಳದ ಆಜಾದ್ ವೃತ್ತದ ಬಳಿ ಚಂದ್ರಶೇಖರ್ ಆಜಾದ್ ರವರ 94ನೇ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು. 

ಈ ಸಂದರ್ಭದಲ್ಲಿ AIDYO  ನ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ   ಆಜಾದ್ ರವರು ನಮ್ಮ ಸ್ವತಂತ್ರ ಸಂಗ್ರಾಮದಲ್ಲಿ ಬಂದಿರುವಂತಹ ಮಹಾನ್ ಕ್ರಾಂತಿಕಾರಿಯಾಗಿದ್ದು, ರಾಜಿರಹಿತ ಹೋರಾಟವನ್ನು ಮಾಡುವ ಮೂಲಕ ಸ್ವಾತಂತ್ರ ನಂತರ ಭಾರತದಲ್ಲಿ ಸಮಸಮಾಜದ ಕನಸು ಕಂಡಂತಹ ಮಹಾನ್ ಹೋರಾಟಗಾರರಾಗಿದ್ದರು. ಹಲವಾರು ಕ್ರಾಂತಿಕಾರಿ ಸಂಘಟನೆಗಳಲ್ಲಿ ಭಾಗವಹಿಸುವ ಮೂಲಕ ಭಗತ್ ಸಿಂಗ್ ರವರ ಜೊತೆಗೂಡಿ ಸಾಮಾಜಿಕ ಕ್ರಾಂತಿಯ ಮೂಲಕವಾಗಿ ಜಾತಿ ವ್ಯವಸ್ಥೆ ,ಧಾರ್ಮಿಕ ಸಮಸ್ಯೆ, ಆರ್ಥಿಕ ಅಸಮಾನತೆಗಳ ನಿರ್ಮೂಲನೆಗೆ ರಾಜಿರಹಿತ ವಾದ ನಿರಂತರ ಹೋರಾಟ ಮಾಡಿರುವ ಮಹಾನ್ ವ್ಯಕ್ತಿ ಎಂದರು.

ಈ ಸಂದರ್ಭದಲ್ಲಿ ಂಋಙಓ ರಾಜ್ಯ ಮುಖಂಡರಾದ ಶರಣು ಗಡ್ಡಿ,AIDYO ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ, ಸದಾಶಿವ ಮುನಿರಾಬಾದ್, ಹಿರಿಯರಾದ ಈಶ್ವರ​ಪ್ಪ ದಿನ್ನಿ,  ಶಿವಪ್ಪ ಹಡಪದ್, ಮಕ್ಬಲ್ ಕೊಪ್ಪಳ ವಿಜಯಕುಮಾರ್  ಬ್ಯಾಳಿ ಇನ್ನು ಅನೇಕರು ಇದ್ದರು.