ಜರ್ಮನಿಯಲ್ಲಿ 945 ಹೊಸ ಕೊರೊನಾ ಸೋಂಕು ಪ್ರಕರಣ

ಮಾಸ್ಕೋ, ಮೇ 2 ,ಜರ್ಮನಿಯಲ್ಲಿ ಕಳೆದ 24 ಗಂಟೆಗಳಲ್ಲಿ 945 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,61,703 ಕ್ಕೆ ಏರಿಕೆಯಾಗಿದೆ.   ಇದೇ ಅವಧಿಯಲ್ಲಿ 94 ಜನರು ಮೃತಪಟ್ಟಿದ್ದು ಒಟ್ಟು ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 6575 ಕ್ಕೆ ಏರಿಕೆಯಾಗಿದೆ.ಈವರೆಗೆ 1,29,000 ಜನರು ಕೊರೊನಾ ಸೋಂಕಿನಿಂದಗುಣಮುಖರಾಗಿದ್ದಾರೆ.ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಕೋವಿಡ್  - 19 ಅನ್ನು ಸಾಂಕ್ರಾಮಿಕ ಎಂದು ಘೋಷಿಸಿತ್ತು. ಈವರೆಗೆ ವಿಶ್ವಾದ್ಯಂತ 33 ಲಕ್ಷಕ್ಕೂ ಹೆಚ್ಚು ಜನರು ಈ ಸೋಂಕಿಗೆ ತುತ್ತಾಗಿದ್ದು 2,38,000 ಜನರು ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.