ಅಂಬಿಗರ ಚೌಡಯ್ಯನವರ 905ನೇ ಜಯಂತ್ಯೋತ್ಸವ
ಶಿಗ್ಗಾವಿ 24 : ಸೃಷ್ಟಿಕರ್ತನ ಸೃಷ್ಟಿಯೊಂದಿಗೆ ಸಮಾನವಾಗಿ ಬೆಳೆದು ಬಂದ ಮಾನವನು ಕಾಲ ಕ್ರಮೇಣ ಜಾತಿ ವ್ಯೆವಸ್ಥೆಗೆ ಸಿಲಕಿ ಶೋಷಣೆಗೆ ಒಳಗಾಗುತ್ತಾ ಬಂದ, ಶಿವ ಶರಣರ ಕಾಲದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರಂತ ನಿಷ್ಟೂರವಾದಿ ಶರಣರು ಈ ಜಾತಿ ವ್ಯವಸ್ಥೆಯನ್ನು ಖಂಡಿಸುತ್ತಾ ಬಂದರು ಎಂದು ಪುರಸಭೆ ಸದಸ್ಯ ಪರಶುರಾಮ ಸೊನ್ನದ ಹೇಳಿದರು. ಪಟ್ಟಣದ ಅಂಬೇಡ್ಕರ ಓಣಿಯ ಗಂಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅಂಬಿಗ ಸಮಾಜ ಬಾಂಧವರಿಂದ ಆಯೋಜಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತ್ಯಂತ ಹಿಂದುಳಿದ ಸಮಾಜಗಳಲ್ಲಿ ಈ ಸಮಾಜವೂ ಒಂದಾಗಿದ್ದು ಸಮಾಜದ ಏಳಿಗೆಗೆ ಸರ್ಕಾರ ಮತ್ತು ಈ ಕ್ಷೇತ್ರದ ಶಾಸಕರು ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿ, ಆದರ್ಶಪುರುಷರ ಜಯಂತಿಯನ್ನು ಆಚರಿಸುವ ಮೂಲಕ ಅಂತರಂಗದಲ್ಲಿ ಆದರ್ಶಗಳನ್ನು ಸ್ಥಾಪಿಸಿಕೊಳ್ಳುವ ಕೆಲಸವನ್ನು ಸಮಾಜ ಬಾಂಧವರು ಮಾಡಿಕೊಳ್ಳಬೇಕು. ಭಾಷಣಗಳಿಂದ ಸಮಾಜವನ್ನು ಕಟ್ಟಲು ಸಾಧ್ಯವಾಗುವುದಿಲ್ಲಾ, ನಮ್ಮನ್ನು ನಾವು ಕೀಳು ಮಟ್ಟದಲ್ಲಿ ನೋಡಿಕೊಳ್ಳುವುದನ್ನು ನಿಲ್ಲಿಸಬೇಕು, ಶರಣರ ಆಶಯದಂತೆ ಬೇಡುವುದನ್ನು ಬಿಟ್ಟು ಶ್ರದ್ದೆಯಿಂದ ಕಾಯಕವನ್ನು ಮಾಡಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದಾಗ ಮಾತ್ರ ಸಮಾಜಗಳು ಬೆಳವಣಿಗೆನ್ನು ಕಾಣಲು ಸಾಧ್ಯ ಇದರಿಂದ ಸಮ ಸಮಾಜವನ್ನು ಕಟ್ಟಲು ಸಾಧ್ಯ. ಅಂಬಿಗರ ಚೌಡಯ್ಯನವರು ಎಲ್ಲ ಶರಣರೂ ಮೆಚ್ಚಿದ ನಿಜ ಶರಣರಾಗಿದ್ದು ಇವರ 906ನೇ ಜಯಂತೋತ್ಸವವನ್ನು ವಿರಕ್ತಮಠದಲ್ಲಿ ಆಚರಿಸೋಣ ಎಂದರು. ಕೆ.ಎಂ.ಎಪ್ ನಿರ್ದೇಶಕ ಶಶಿಧರ ಯಲಿಗಾರ ಮಾತನಾಡಿ ಅಂಬಿಗ ಸಮಾಜದ ಬಡ ಮಕ್ಕಳ ಕಲ್ಯಾಣಕ್ಕಾಗಿ ಆರ್ಥಿಕ ಸಹಾಯ ಮಾಡುತ್ತೇನೆ. ಉತ್ತಮ ಶಿಕ್ಷಣ, ಶರಣರ ಕಾಯಕ ಮಂತ್ರದ ಪರಿಪಾಲನೆ ಮಾತ್ರ ಬಡತನದಿಂದ ಹೊರ ಬರುವ ಮಂತ್ರಗಳಾಗಿವೆ ಎಂದು ಹೇಳಿದರು. ಕುಮಾರಿ ವರ್ಷಾ ಬಾರಕೇರ ಉಪನ್ಯಾಸ ನೀಡಿದರು, ಗಣ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೆ.ಎಂ.ಎಪ್ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ, ರಮೇಶ ಸಾತಣ್ಣವರ, ಅನುರಾಧಾ ಮಾಳ್ವದೆ, ರೇಣಕನಗೌಡ ಪಾಟೀಲ, ಅಶೋಕ ಕಾಳೆ, ಈರಣ್ಣಾ ಬಾರ್ಕಿ, ಮಾಳಪ್ಪಾ ಜಾಡರ, ಚನ್ನಬಸಪ್ಪಾ ಅತ್ತಿಗೇರಿ, ಫಕ್ಕೀರಾ್ಪ ಇಂಧೂರ, ರಾಮಣ್ನಾ ಅಂದಲಗಿ, ಸುರೇಶ ಕಾಮನಳ್ಳಿ, ಲಕ್ಷ್ಮಣ ಕುಂದಗೋಳ, ಪರಶುರಾಮ ಹಾಳಿ, ರಮೇಶ ಹೊಸಪೇಟೆ, ರುದ್ರಣ್ಣಾ ಬಂಕಾಪೂರ, ಚನ್ನಪ್ಪ ಹಾವಣಗಿ ಇತರರಿದ್ದರು.