ಯರಗಟ್ಟಿ 21: ತಾಲೂಕಾ ಆಡಳಿತದಿಂದ ತಹಶೀಲ್ದಾರ ಕಚೇರಿಯಲ್ಲಿ 12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿಯ ಅಂಗವಾಗಿ ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸರಳವಾಗಿ ಆಚರಿಸಿದರು.
ಈ ವೇಳೆಯಲ್ಲಿ ಉಪ ತಹಶೀಲ್ದಾರ ಸಂತೋಷ ಜಾದವ, ಶಿರಸ್ತೇದಾರ ಎಸ್. ಬಿ. ಕುಲಕರ್ಣಿ, ಸ್ವರೂಪ ಚಪಳಿ, ಲಖನ ಪೂಜೇರಿ, ಶೋಭಾ ಸಿದ್ನಾಳ, ವಿಜಯ ಉಪ್ಪಿನ, ಮಂಜುನಾಥ ಬಡಿಗೇರ ಸೇರಿದಂತೆ ಹಲವರು ಇದ್ದರು.