9 ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ

ಲೋಕದರ್ಶನ ವರದಿ 

ಕಂಪ್ಲಿ03:  ಶಿಕ್ಷಣದ ಮೂಲಕ ಸಮಾಜವನ್ನು ದೊಡ್ಡ ಮಟ್ಟದಲ್ಲಿ ಕಟ್ಟಬಹುದು ಎಂದು ಭಾವಸಾರ ಸಮಾಜದ ಅಧ್ಯಕ್ಷ ವಿಶ್ವನಾಥರಾವ್ ಪುಲಸ್ಕರ್ ಹೇಳಿದರು.

    ತಾಲೂಕಿನ ವಿಶ್ವಕರ್ಮ ಭವನದಲ್ಲಿ ಆಂಜಿನೇಯಸ್ವಾಮಿ ದೇವಸ್ಥಾನದ ಗೋಪುರದ ಕಳಸಾರೋಹಣ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು ಎಂದರು.

     ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿ ಕ್ಷೇತ್ರದಲ್ಲಿ ಸಾಧನೆಗೈದ ಭಾವಸಾರ ಸಮಾಜದ 9 ಜನ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

  ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಟಿ.ಹೆಚ್.ಸುರೇಶ್, ಪುರಸಭೆ ಅಧ್ಯಕ್ಷ ಎಂ.ಸುಧೀರ್, ಮುಖ್ಯಾಧಿಕಾರಿ ವೆಂಕಟೇಶ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ರುದ್ರಪ್ಪ ಆಚಾರ್, ಬೆಂಗಳೂರಿನ ಪರ್ವತರಾವ್ ತಾತುಸ್ಕರ್, ಭಾವಸಾರ ಸಮಾಜದ ಉಪಾಧ್ಯಕ್ಷ ಶೇಷಪತಿರಾವ್, ಕಾರ್ಯದಶರ್ಿ ರಮೇಶ್ ಬೆಳಂಕರ್, ಖಜಾಂಚಿ ತುಕಾರಾಮ್, ಕಾ.ಕಾ.ಸದಸ್ಯ ಗೋಪಾಲ್ರಾವ್, ರಾಜು, ಬೆಳಂಕರ್, ತಾರಾನಾಥರಾವ್, ಅಶೋಕ್ರಾವ್, ಸತ್ಯನಾರಾಯಣರಾವ್, ಲಕ್ಷ್ಮಣ, ಮುಖಂಡರಾದ ಡಿ.ಮೌನೇಶ್, ಜಗದೀಶ್ ರಾಯ್ಕರ್, ಬಳ್ಳಾರಿ ನಿರಂಜನ್ ಸೇರಿ ಇತರರು ಇದ್ದರು.