ಬಳ್ಳಾರಿ17:- ನೆಗಡಿ, ತಲೆನೋವು ಕಾಣಿಸಿಕೊಂಡಾಗ ಬಳಕೆ ಮಾಡುವ 2 ರೂ. ಮುಖಬೆಲೆಯ ಮೆಂತೋಪ್ಲಸ್ ಡಬ್ಬಿ ನುಂಗಿದ ಪರಿಣಾಮ ಒಂಭತ್ತು ತಿಂಗಳ ಮಗುವೊಂದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ನಿಡುಗುತರ್ಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಭಾರತಿ ಎಂಬ ಮಗು ಸಾವಿಗೀಡಾಗಿದ್ದು, ಈ ಮಗು ಕಳೆದ ವರ್ಷ ಆಗಸ್ಟ್ 15ರಂದು ಜನಿಸಿತ್ತು. ಹೀಗಾಗಿ ಪೋಷಕರು ಮಗುವಿಗೆ ಭಾರತಿ ಎಂದು ನಾಮಕರಣ ಮಾಡಿದ್ದರು. ಈ ಮಗು ನಿನ್ನೆ ರಾತ್ರಿ ಮನೆಯ ಮುಂದೆ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಾತ್ ಆಗಿ ಮೆಂತೋಪ್ಲಸ್ ಡಬ್ಬಿ ನುಂಗಿದೆ. ತಕ್ಷಣವೇ ಕೂಡ್ಲಿಗಿ ಸಕರ್ಾರಿ ಆಸ್ಪತ್ರೆಗೆ ದಾಖಲಿಸಲು ಪೋಷಕರು ಮುಂದಾದಾಗ ಮಾರ್ಗ ಮಧ್ಯದಲ್ಲೇ ಮಗು ಅಸುನೀಗಿದೆ. ಈ ಹಿಂದೆ ಕೂಡ್ಲಿಗಿ ಸಮೀಪದ ಬೀರಲಗುಡ್ಡ ಗ್ರಾಮದಲ್ಲಿ ಬಾರೆಹಣ್ಣಿನ ಬೀಜ ನುಂಗಿ ಮಗುವೊಂದು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಈಗ ಮೆಂತೋಪ್ಲಸ್ ಡಬ್ಬಿ ನುಂಗಿ ಮಗು ಸಾವನ್ನಪ್ಪಿರುವುದು ದುರಂತವೇ ಸರಿ. ಪೋಷಕರು ಮಕ್ಕಳು ಆಡುವಾಗ ನಿಗಾ ಇಡಬೇಕಾಗಿದ್ದು, ಈ ಬಗ್ಗೆ ಪೋಷಕರಿಗೆ ಜಾಗೃತಿ ಅಗತ್ಯವಿದೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.