ತಿರುಮಲ, ಜೂನ್ ೫,ತಿರುಮಲದಲ್ಲಿ ಈ ತಿಂಗಳ ೮ ರಿಂದ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನವನ್ನು ಪ್ರಾಯೋಗಿಕವಾಗಿ ಪುನಃ ಪ್ರಾರಂಭಿಸುತ್ತಿದ್ದೇವೆ ಎಂದು ತಿರುಮಲ ತಿರುಪತಿ ದೇವಾಸ್ಥಾನದ ಕಾರ್ಯಕಾರಿ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಪ್ರಕಟಿಸಿದ್ದಾರೆ. ಅವರು ತಿರುಮಲದಲ್ಲಿಯ ಅನ್ನಮಯ್ಯ ಭವನದಲ್ಲಿ ಅಧಿಕಾರಿಗಳೊಂದಿಗೆ ದರ್ಶನ ವಿಧಿ ವಿಧಾನಗಳ ಬಗ್ಗೆ ಚರ್ಚೆ ನಡೆಸಿದರು.ನಂತರ ಮಾಧ್ಯಮಗಳೊಂದಿಗೆ ಮಾತನಾಡಿ.. ಕೊರೊನಾ ಹರಡುವುದನ್ನು ತಡೆಗಟ್ಟುವ ಕ್ರಮವಾಗಿ ಸ್ಥಗಿತಗೊಳಿಸಲಾಗಿದ್ದ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಭಕ್ತರು ಎದುರುನೋಡುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳಿಂದ ಭಕ್ತಾಧಿಗಳಿಗೆ ದರ್ಶನ ಆರಂಭಿಸಲು ಒಪ್ಪಿಗೆ ಲಭಿಸಿರುವುದರಿಂದ ದರ್ಶನದ ಬಗ್ಗೆ ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ..ತಿಮ್ಮಪ್ಪನ ದೇಗುಲದಲ್ಲಿ ಜ್ಯೇಷ್ಟಾಭಿಷೇಕಗಳು ಗುರುವಾರದಿಂದ ಆರಂಭಗೊಂಡಿವೆ ಎಂದು ಸಿಂಘಾಲ್ ಹೇಳಿದರು.