ಭರತೇಶ ಶಿಕ್ಷಣ ಸಂಸ್ಥೆಯ 8ನೇ ವಾಷರ್ಿಕೋತ್ಸವ

ಹಲಗಾ:  ಪ್ರತಿಯೊಬ್ಬ ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹುಡುಕಿ ಪ್ರೋತ್ಸಾಹಿಸುವದು ಪಾಲಕರ ಕರ್ತವ್ಯ. ಮಕ್ಕಳಲ್ಲಿ ತಾರತಮ್ಯ, ಅನಗತ್ಯ ಹೋಲಿಕೆ ಮಾಡಬಾರದೆಂದು ಧಾರವಾಡದ ಪ್ರಸಿದ್ಧ ಮಾನಸಶಾಸ್ತ್ರಜ್ಞ  ಶ್ರೀ ಆನಂದ ಪಾಂಡುರಂಗಿ ಅವರು ಹೇಳಿದರು.

ಅವರು ಭರತೇಶ ಶಿಕ್ಷಣ ಸಂಸ್ಥೆಯ 8ನೇ ವಾಷರ್ಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು. ಶೈಕ್ಷಣಿಕ ಮನೋವಿಜ್ಞಾನದಲ್ಲಿ ಪಾಲಕರು ಮತ್ತು ಮಕ್ಕಳ ಪಾತ್ರದ ಕುರಿತು ಅತ್ಯಂತ ಆರ್ಥಪೂರ್ಣವಾಗಿ ಉದಾಹರಣೆಗಳೊಂದಿಗೆ ಪ್ರತಿಯೊಬ್ಬ ಪಾಲಕರ ಮನಮುಟ್ಟುವಂತೆ ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ  ಭಾರತಿ ಹದರ್ಿ ಮತ್ತು ಶ್ರೀಮತಿ ಸ್ವಾತಿ ಉಪಾಧ್ಯೆ ಆಗಮಿಸಿದ್ದರು. ಅತಿಥಿಗಳು ಗೌರವ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. 

ಶಾಲೆಯ ಆಡಳಿತ ಮಂಡಳಿಯ ನಿದರ್ೇಶಕ ಶ್ರೀ ವಿನೋದ ದೊಡ್ಡಣ್ಣವರ, ಅಧ್ಯಕ್ಷ ಶ್ರೀ ರಾಜೀವ ದೊಡ್ಡಣ್ಣವರ, ಸದಸ್ಯೆ ಶ್ರೀಮತಿ ಕೀತರ್ಿ ದೊಡ್ಡಣ್ಣವರ, ಶ್ರೀ ಬಾಹುಬಲಿ ಕಡೆಮನಿ ,ಶ್ರೀ ರಾಜೇಶ ಕಡೆಮನಿ ಪ್ರಾಚಾರ್ಯರಾದ ಶ್ರೀಮತಿ ದೇವಯಾನಿ ದೇಸಾಯಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಾಲೆಯ ವಿದ್ಯಾಥರ್ಿಗಳು ಸಭಾ ಕಾರ್ಯಕ್ರಮದ ನಂತರ ಪ್ರಸ್ತುತ ಪಡಿಸಿದ ಸಮೂಹ ಗಾಯನ, ನೃತ್ಯ, ನಾಟಕ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅತಿಥಿಗಣ್ಯರು ಪಾಲಕರಿಂದ ಮೆಚ್ಚುಗೆ ಪಾತ್ರವಾದವು. ಸಂಪೂರ್ಣ ಕಾರ್ಯಕ್ರಮವನ್ನು ಶಾಲೆಯ ವಿದ್ಯಾಥರ್ಿಗಳೇ ನಿರ್ವಹಿಸಿದ್ದರು. 

ಆರಂಭದಲ್ಲಿ ಐದನೇಯ ತರಗತಿಯ ವಿದ್ಯಾಥರ್ಿನಿ ಸೈಯದನಫಿಸಾ ಫಾತಿಮಾ ಎಲ್ಲರನ್ನು ಸ್ವಾಗತಿಸಿದರು. ಪರಾಚಾರ್ಯರಾದ ದೇವಯಾನಿ ದೇಸಾಯಿ ವಾಷರ್ಿಕ ವರದಿ ವಾಚನಮಾಡಿದರು. ಬಹುನಾನ ವಿತರಣೆಯ ಜವಾಬ್ದಾರಿಯನ್ನು ಉಪಪ್ರಾಚಾಯರ್ೆ ಶ್ರೀಮತಿ ಪವರ್ಿನ್ ಅತ್ತಾರ ವಹಿಸಿದ್ದರು. ಕೊನೆಯಲ್ಲಿ ಜೊಸ್ಫನ್ ಗುಂಟಿ ವಂದಿಸಿದರು. ಭರತೇಶ ಸೆಂಟ್ರಲ್ ಸ್ಕೂಲ್ ಹಲಗಾ 2019 ನೇ ಸಾಲಿನ ವಾಷರ್ಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿತು.