ನವದೆಹಲಿ 08: ಭಾರತದ ಮೂರು ಸೇನಾಪಡೆಗಳಲ್ಲೊಂದಾದ ಐಎಎಫ್ ಇಂದು
86ನೇ ವಾಯುಪಡೆ ದಿನವನ್ನು ಇಂದು ದೇಶಾದ್ಯಂತ ವಿಶಿಷ್ಟವಾಗಿ
ಆಚರಿಸಲಾಯಿತು.
ರಾಜಧಾನಿ ದೆಹಲಿ, ಉತ್ತರ ಪ್ರದೇಶ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ವಾಯು
ನೆಲೆಗಳು ಮತ್ತು ಕೇಂದ್ರಗಳಲ್ಲಿ ಏರ್ಫೋಸರ್್ ಡೇ ಪ್ರಯುಕ್ತ ವಿಶೇಷ
ಕಾರ್ಯಕ್ರಮಗಳು ನಡೆದವು.
ಉತ್ತರ ಪ್ರದೇಶದ ಗಾಜಿಯಾಬಾದ್ನ ಹಿಂಡಿಸನ್ ಏರ್ಫೋಸರ್್ ಸ್ಟೇಷನ್ನಲ್ಲಿ ವಾಯುಪಡೆ ದಿನಾಚರಣೆ ಪ್ರಯುಕ್ತ ವಿಶೇಷ ಪಥ ಸಂಚಲನ ಮತ್ತು
ವಿಮಾನಗಳು, ಹೆಲಿಕಾಫ್ಟರ್ಗಳ ಆಕರ್ಷಕ ಹಾರಾಟ ನಡೆಯಿತು. ಇದೇ ರೀತಿಯ ಕಾರ್ಯಕ್ರಮಗಳು
ದೇಶದ ವಿವಿಧೆಡೆ ನಡೆದಿವೆ.
ವಾಯುಪಡೆ ದಿನವನ್ನು 8ನೇ ಅಕ್ಟೋಬರ್ 1932ರಿಂದ
ಅಧಿಕೃತವಾಗಿ ಆಚರಿಸಲಾಗುತ್ತಿದೆ. ಭಾರತದ ಮೂರು ಸಶಸ್ತ್ರ ಪಡೆಗಳಲ್ಲಿ
ಅತಿಮುಖ್ಯವಾದ ವಾಯುದಳ ಭಾರತೀಯ ವಾಯು ಸರಹದ್ದನ್ನು ರಕ್ಷಿಸುವ
ಜೊತೆಗೆ ವೈರಿಗಳಿಂದ ಎದುರಾಗಬಹುದಾದ ಆತಂಕಗಳನ್ನು ನಿಗ್ರಹಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಜೊತೆಗೆ ನೈಸಗರ್ಿಕ ವಿಕೋಪಗಳಲ್ಲಿ ಸಂತ್ರಸ್ತರನ್ನು ರಕ್ಷಿಸುವ ಮತ್ತು ಪರಿಹಾರ ಕಾಯರ್ಾಚರಣೆಗೆ ನೆರವಾಗುವ ದೊಡ್ಡ ಜವಾಬ್ದಾರಿಯೂ ಇದರ ಮೇಲಿದೆ.
ಎರಡನೇ ಮಹಾಸಂಗ್ರಾಮ, ಬದ್ಧವೈರಿ ಪಾಕಿಸ್ತಾನದ ಜೊತೆ ನಡೆದ 4 ಯುದ್ಧಗಳು
ಮತ್ತು ಚೀನಾ ಜೊತೆ ಒಂದು
ಸಮರಗಳಲ್ಲೂ ವಾಯುಪಡೆ ಮಹತ್ವದ ಪಾತ್ರ ವಹಿಸಿತು.
ಆಪರೇಷನ್ ಮೇಘದೂತ್, ಅಪರೇಷನ್ ವಿಜಯ್, ಆಪರೇಷನ್ ಕ್ಯಾಕ್ಟಸ್ ಮತ್ತು ಆಪರೇಷನ್ ಪೂಮಲೈ-ಐಎಎಫ್ ಅಗಾಧ ಸಾಮಥ್ರ್ಯಕ್ಕೆ ಸಾಕ್ಷಿಯಾಗಿದೆ.
ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆ ಕಾರ್ಯಚರಣೆಗಳಲ್ಲೂ ಭಾಗವಹಿಸಿ
ಮನ್ನಣೆ ಗಳಿಸಿದೆ.
ವಿಶ್ವದ ಅತ್ಯಂತ ಎತ್ತರದ ಸಮರ ಭೂಮಿಯಾದ ಕಾಗರ್ಿಲ್ಯುದ್ಧದಲ್ಲಿ
ಐಎಎಫ್ನ ಫೈಟರ್ ಜೆಟ್ಗಳ ಪೈಲೆಟ್ಗಳು ತೋರಿದ ಅಪ್ರತಿಮ ಸಾಹಸ ಶ್ಲಾಘನೀಯ.
ಭಾರತೀಯ ವಾಯುಪಡೆ 1.75 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಹಾಗೂ 1,500 ವಿಮಾನಗಳನ್ನು ಹೊಂದಿದ್ದು, ವಿಶ್ವದ ಅತ್ಯಂತ ಬಲಿಷ್ಠ ವಾಯುಸೇನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತವನ್ನು ವಿಶ್ವದ ಅತ್ಯಂತ ಶ್ರೇಷ್ಠ ವಾಯುಸೇನೆ ಹೊಂದಿರುವ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಫ್ರಾನ್ಸ್ನಿಂದ
ಅಗಾಧ ಸಾಮಥ್ರ್ಯದ ರಫೇಲ್ ಫೈಟರ್ ಜೆಟ್ಗಳು ಸೇರಿದಂತೆ ಅತ್ಯಂತ ಪ್ರಬಲ ಯುದ್ಧ ವಿಮಾನಗಳನ್ನು ದೇಶದ ರಕ್ಷಣಾ ಬಲಕ್ಕೆ
ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಅಗಾಧ ಸಾಮಥ್ರ್ಯದ ವಾಯುದಾಳಿ
ಶಸ್ತ್ರಾಸ್ತ್ರಗಳೂ ಬತ್ತಳಿಕೆಗೆ ಸೇರುತ್ತಿವೆ.