ರಷ್ಯಾದಲ್ಲಿ ಒಂದೇ ದಿನ 8600 ಕೊರೊನಾ ಪ್ರಕರಣ

ಮಾಸ್ಕೋ, ಮೇ 24,ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 8,600 ಹೊಸ ಕೋವಿಡ್ -19 ಪ್ರಕರಣ ದಾಖಲಾಗಿದ್ದು, ಒಟ್ಟು ಪೀಡಿತರ ಸಂಖ್ಯೆ 3,44,482 ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಕೊರೊನಾ ವೈರಸ್ ತಡೆ ವಿಭಾಗ ಭಾನುವಾರ ತಿಳಿಸಿದೆ."ಕಳೆದ 24 ಗಂಟೆಗಳಲ್ಲಿ, 84 ಪ್ರದೇಶಗಳಲ್ಲಿ 8,599 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 3,777 ಪ್ರಕರಣಗಳು ಸಕ್ರಿಯವಾಗಿ ಪತ್ತೆಯಾಗಿವೆ, ಜನರಲ್ಲಿ ಯಾವುದೇ ರೋಗ ಲಕ್ಷಣಗಳನ್ನು ಕಂಡು ಬಂದಿರಲಿಲ್ಲ" ಎಂದು ಕೇಂದ್ರವು ಹೇಳಿಕೆಯಲ್ಲಿ ತಿಳಿಸಿದೆ.ಎಲ್ಲಾ ಹೊಸ ಪ್ರಕರಣಗಳಲ್ಲಿ, 2,516 ಮಾಸ್ಕೋದಲ್ಲಿ ದಾಖಲಾಗಿದೆ. ಮಾಸ್ಕೋ ಪ್ರದೇಶದಲ್ಲಿ 862; ಮತ್ತು ಸೇಂಟ್ ಪೀಟರ್ಸ್ಬರ್ಗ್ ನಲ್ಲಿ 384 ಪ್ರಕರಣ ವರದಿಯಾಗಿವೆ. ದೇಶದ ಕೋವಿಡ್-19 ಸಾವಿನ ಸಂಖ್ಯೆ 3,541 ಕ್ಕೆ ತಲುಪಿದೆ. ಒಂದೇ ದಿನದಲ್ಲಿ 153 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 5,363 ಕೋವಿಡ್-19 ರೋಗಿಗಳು ಚೇತರಿಸಿಕೊಂಡಿದ್ದಾರೆ, ಒಟ್ಟು ಗುಣಪಡಿಸಿದ ಜನರ ಸಂಖ್ಯೆಯನ್ನು 1,13,299 ಕ್ಕೆ ಆಗಿದೆ.