ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ 84ನೇ ಶಿವಜಯಂತಿ ಆಚರಣೆ

ಶಿಗ್ಗಾವಿ22: ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಕೂಡಾ ತುಂಬಾ ಪ್ರಮುಖ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಆದ್ಯಾತ್ಮಿಕ ಪ್ರವಚನಗಳು, ಯೋಗ- ಧ್ಯಾನಗಳು ಅವಷ್ಯಕವಾಗಿವೆ ಅವುಗಳನ್ನು ಪಡೆಯಲು ಮಠ, ಮಂದಿರ, ಈಶ್ವರೀಯ ವಿಶ್ವ ವಿದ್ಯಾಲಯಗಳು ಸುಲಬ ಮಾರ್ಗವಾಗಿವೆ ಎಂದು ವಿರಕ್ತ ಮಠದ ಶ್ರೀ ಸಂಗನಬಸವ ಶ್ರೀಗಳು ಹೇಳಿದರು. 

   ಪಟ್ಟಣದ ಜೋಳದ ಪೇಟೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ದಲ್ಲಿ 84ನೇ ಶಿವಜಯಂತಿಯ ಅಂಗವಾಗಿ ಶಿವದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜನರಿಗೆ ಸುಲಬವಾಗಿ ಅರ್ಥವಾಗುವ ರೀತಿಯಲ್ಲಿ ಆದ್ಯಾತ್ಮಿಕ ಭೋಧನೆ ದ್ಯಾನ ನೀಡುವಲ್ಲಿ ವಿದ್ಯಾಲಯ ಕೂಡಾ ಪ್ರಮುಖವಾಗಿದೆ, ಎಲ್ಲರೂ ಒತ್ತಡಗಳ ನಡುವೆ ಸ್ವಲ್ಪ ಸಮಯ ಆಧ್ಯಾತ್ಮಿಕಕ್ಕೆ ಬಳಕೆ ಮಾಡಿಕೊಂಡು ದೈಹಿಕ  ಹಾಗೂ ಮಾನಸಿಕವಾಗಿ ಬಲಿಷ್ಟರಾಗಿ ಎಂದು ಸಲಹೆ ನೀಡಿದರು.

 ವಿದ್ಯಾಲಯದಲ್ಲಿ ಶಿವಲಿಂಗ ಮೂತರ್ಿ ಹಾಗೂ ಲಕ್ಷ್ಮಿ ನಾರಾಯಣರ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮವನ್ನು ಈಶ್ವರೀಯ ಭೋಧಕರಾದ ಬಿ.ಕೆ.ಸುದಕ್ಕನವರ ನೇತೃತ್ವದಲ್ಲಿ ಆಚರಿಸಲಾಯಿತು.     ಕಾರ್ಯಕ್ರಮದ ಉದ್ಘಾಟನೆಯನ್ನು ವಿರಕ್ತಮಠದ ಶ್ರೀ ಸಂಗನಬಸವ ಮಹಾಸ್ವಾಮಿಗಳು ನೆರವೇರಿಸಿ ಆಶೀರ್ವಚನ ನೀಡಿದರು. ಪುರಸಭೆ ಸದಸ್ಯರಾದ ಸುಭಾಸ ಚವ್ಹಾಣ, ದಯಾನಂದ ಅಕ್ಕಿ, ಸುಧೀರ ಮಾಳವದೆ, ಪ್ರಕಾಶ ಹಾದಿಮನಿ ಮೆರವಣಿಗೆ ಚಾಲನೆಯನ್ನು ನೀಡಿದರು.

     ಕಾರ್ಯಕ್ರಮದಲ್ಲಿ ಬಿ.ಕೆ. ಭಾರತಿಅಕ್ಕ, ನಳಂದಾ ಶಾಲಾ ಶಿಕ್ಷಕರಾದ ಸಿ.ಎಸ್.ಚರಂತಿಮಠ, ಭಕ್ತಾದಿಗಳು ಹಾಗೂ ಈಶ್ವರೀಯ ಪರಿವಾರದವರು ಉಪಸ್ಥಿತರಿದ್ದರು.