ಬೆಂಗಳೂರು , ಜೂನ್ 30 : ಕೊರೊನಾ ಸೋಂಕು ಪರೀಕ್ಷೆಗಾಗಿ ರಾಜ್ಯಾದ್ಯಂತ ಈಗ 80 ಪ್ರಯೋಗಾಲಯಗಳನ್ನು ತೆರೆಯಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ ತಿಂಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಲಿವೆ ಎಂದು ಮೊದಲೇ ನೀರಿಕ್ಷೆ ಮಾಡಲಾಗಿತ್ತು ಅದರಂತೆ ಮುನ್ನೆರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಕಳೆದೊಂದು ವಾರದಿಂದ ಕೊರೋನಾಸೋಮಕು ಪ್ರಕರಣಗಳು ಹೆಚ್ಚಳವಾಗಿದೆ. ಈ ಮೊದಲೇ ಜುಲೈ ನಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗುವ ಬಗ್ಗೆ ಮಾಹಿತಿ ನೀಡಲಾಗಿತ್ತು ಹೀಗಾಗಿ ಯಾರೂ ಆತಂಕ ಪಡುಬೇಕಿಲ್ಲ ಎಂದರು.ಈ ಮೊದಲೇ ಸಭೆಯಲ್ಲಿ ಲ್ಯಾಬ್ ತೆರೆಯುವಂತೆ ಸೂಚಿಸಲಾಗಿತ್ತು. ಈಗ 80 ಲ್ಯಾಬ್ ಗಳನ್ನು ಆರಂಭಿಸಲಾಗಿದೆ ರಾಜ್ಯದಲ್ಲಿ ಎರಡು ಇದ್ದ ಲ್ಯಾಬ್ ಗಳ ಸಂಖ್ಯೆಯನ್ನು 80ಕ್ಕೆ ಏರಿಸಲಾಗಿದೆ ಎಂದರು.