ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.10ರಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.10ರಲ್ಲಿ  79ನೇ ಸ್ವಾತಂತ್ರ್ಯೋತ್ಸವ  ಆಚರಣೆ 79th Independence Day Celebration at Government Higher Primary School No. 10

ವಿಜಯಪುರ 19: ಆ 15, ಸ್ವಾತಂತ್ರ್ಯ ಸೇನಾನಿಗಳ ವಿರೋಚಿತ ಹೋರಾಟದ ಫಲವಾಗಿ ಇಂದು ನಮ್ಮ ಭಾರತ ದೇಶ ಎಲ್ಲ ರಂಗಗಳಲ್ಲೂ ಸುಖಿಯಾಗಿ ಪ್ರಗತಿ ಸಾಧಿಸುತ್ತಲ್ಲಿದೆ. ಆ ಕಾರಣಕ್ಕೆ ನಾವುಗಳೆಲ್ಲರೂ ನೆಮ್ಮದಿಯುಳ್ಳ ಸಖ್ಯದ ಜೀವನ ಸಾಗಿಸುತ್ತಲ್ಲಿದ್ದೇವೆ ಎಂದು  

ಮುಖ್ಯೋಪಾಧ್ಯಾಯರಾದ ಎ.ಐ.ಮಾಗಿ ಮೆಡಮರವರು  ಹೇಳಿದರು. 

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.10 ಜೋರಾಪುರ ಪೇಠೆ ವಿಜಯಪುರ, ಇಂದು ಶುಕ್ರವಾರ ನಡೆದ 79ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದ ರಾಷ್ಟ ಧ್ವಜಾ ರೋಹಣ ನೆರವೇರಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ವೈವಿಧ್ಯಮಯ ಏಕತೆಯ ಸಾರ ಭವ್ಯಮಯವಾಗಿದೆ ಎಂದರು. 

ಹಿರಿಯರ ತ್ಯಾಗ, ಬಲಿದಾನದ ಮೂಲಕ ಸಂಪಾದಿಸಿರುವ ಸ್ವಾತಂತ್ರ್ಯಎಂದು ಮರೆಯಲಾಗದು. ಮಹನೀಯರ ಋಣ ಭಾರ ತೀರಿಸಲು ಅಸಾಧ್ಯ. ಪರಕೀಯರ ಕಪಿಮುಷ್ಟಿಯಿಂದ ಮುಕ್ತಗೊಳಿಸಿದ ಐತಿಹಾಸಿಕ, ಅಪರೂಪದ ರೋಚಕ ಅಂದಿನ ಕ್ಷಣಗಳು ಭಾರತೀಯರ ಕಣಕಣದಲ್ಲೂ ಇಂದಿಗೂ ಸಂಚರಿ ಸುತ್ತಿವೆ. ಮೈಮನಗಳನ್ನು ನಿಬ್ಬೆರಗಾ ಗುವಂತೆ ಮಾಡಿವೆ.ನಿಜಕ್ಕೂ ಸ್ವಾತಂತ್ರ್ಯ ಹೋರಾಟಗಾರರ ಪರಿ ಶ್ರಮ ಅಪರಿಮಿತ,ಅಮೋಘವಾಗಿದೆ .ಪ್ರತಿ ಫಲಾಪೇಕ್ಷತೆ ಇಲ್ಲದೆ ಮಡಿದ ಅಸಂಖ್ಯಾತ ತ್ಯಾಗಿಗಳ ಸ್ಮರಣೆ ಸದಾ ಪ್ರಾತಃ ಸ್ಮರಣೀಯ. ಪ್ರತಿ ಭಾರತೀಯ ಪ್ರಜೆ ನೆನೆಯಲೇಬೇಕು ಎಂದರು. 

ಭಾರತೀಯರ ಪಾಲಿಗೆ ಸ್ವಾತಂತ್ರ್ಯ ದಿನ ಅಮೃತಕ್ಕೆ ಸಮಾನ. ಪ್ರತಿ ಪ್ರಜೆಗೂ ಸುಘಳಿಗೆಯ ಮಹತ್ವದ ದಿನವಾಗಿದೆ. ಇಂದು ನಾವೆಲ್ಲರೂ 79ನೇ ಸ್ವಾತಂತ್ರ್ಯ ಸವಿ ಸಂಭ್ರಮ ಅನುಭವಿ ಸುತ್ತಲ್ಲಿದ್ದೆವೆ. ಸಂಪತ್ತಭರಿತ ನಮ್ಮ ಭಾರತ ಆಂಗ್ಲರ ಹಿಡಿತದಲ್ಲಿ ನರಳಾಡಿತ್ತು. ವ್ಯಾಪಾರದ ಉದ್ದೇ ಶದಿಂದ ಇಲ್ಲಿ ಕಾಲಿಟ್ಟಿದ್ದ ಬ್ರಿಟಿಷರು ನಮ್ಮಲ್ಲಿಯೇ ಜಾತಿಯ ವಿಷ ಬೀಜಗಳನ್ನು ಯಥ್ಥೇಚ್ಚವಾಗಿ ಬಿತ್ತಿ  ದೇಶದ ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿದು ಭಾರತೀಯರನ್ನು ಮನಸ್ಸೋ ಇಚ್ಚೆಯಂತೆ ಹಿಂಸಿಸಿದರು. ಇವರ ಉಪಟಳಕ್ಕೆ ಅದೆಷ್ಟೊ ಜೀವಗಳು ನುಲಗಿ ಮರಗಿ ಮಣ್ಣಾಗಿವೆ. ಇವ ರಿಂದ ಮುಕ್ತಗೊಳಿಸಲು ಪ್ರಾಣದ ಹಂಗವನ್ನೇ ತೊರೆದು ಮರೆಯಾಗಿ ರುವ ವೀರರಿಗೆ ನಾವುಗಳು ಮನಸ್ಸಾರೆ ನೆನೆದು ನಮಸ್ಕರಿಸಬೇಕಾಗಿದೆ ಎಂದರು. ಮಹಾತ್ಮ ಗಾಂಧಿ, ಭಗತ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ ಆಜಾದ್, ಸರ್ದಾರ್ ವಲ್ಲಭ್ ಭಾಯಿ ಪಟೇಲ್, ಲೋಕಮಾನ್ಯ ಬಾಲಗಂಗಾ ಧರ ತಿಲಕ, ಲಾಲಾಲಜಪತ್ ರಾಯ್ , ರಾಮ ಪ್ರಸಾದ್ ಬಿಸ್ಮಿಲ್ ಸೇರಿದಂತೆ ಸಾವಿರಾರು ಮಹಾನ್ ನಾಯಕರ ತಪ್ಪಸಿನ ಫಲ ಸ್ವಾತಂತ್ರ್ಯ ದಕ್ಕಿದೆ. ಸ್ವಾತಂತ್ರ್ಯ ಬಂದು ಈಗ ಹಲ ದಶಕಗ ಳಾಗಿವೆ. ಭಾರತ ಎಲ್ಲ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಲ್ಲಿದೆ. ಪ್ರಪಂಚ ದಾದ್ಯಂತ ತನ್ನ ಛಾಪು ಮೂಡಿಸುತ್ತಿದೆ. ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಕೃಷಿ, ಶಿಕ್ಷಣ, ಸಾಹಿತ್ಯ, ಕ್ರೀಡೆ ಸೇರಿದಂತೆ ಭಾಗಶಃ ಎಲ್ಲ ರಂಗದಲ್ಲಿ ಪ್ರಗತಿ ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿ. ಅದರಲ್ಲೂ ಪರ ಮಾಣು ಕ್ಷೇತ್ರದ ಬಾಹ್ಯಾಕಾಶದಲ್ಲಿ ಮೂಡಿಸಿದ ಸಾಧನೆ ಜಗತ್ತನ್ನೇ ವಿಸ್ಮಯಗೊಳಿಸಿದೆ ಎಂದರು.  

ಸ್ವಾತಂತ್ರ್ಯ ಹೋರಾಟಗಾರರ ಕನಸು  ಇಂದಿನಯುವ ಜನತೆ ಅರಿಯಬೇಕು. ದೇಶ ಪ್ರೇಮ, ದೇಶ ಭಕ್ತಿ ರೋಮ ರೋಮಗಳಲ್ಲಿ ನಲಿದಾಡಬೇಕು. ಪ್ರಾಮಾಣಿಕತೆ, ನಿಸ್ವಾರ್ಥತೆ ಬದುಕು ಸರ್ವಕಾಲಕ್ಕೂ ಶ್ರೇಷ್ಠ ನವ ಭಾರತ ನಿರ್ಮಾಣದಲ್ಲಿ ತಮ್ಮ ಪಾತ್ರ ಪರಿಚಯಿಸಲು ಮುಂದಾಗಬೇಕು. ಅಂದಾಗ ಉಸಿರಿಗೆ, ಹೆಸರಿಗೆ ಒಂದು ಮೆರುಗು ಬಂದಿತು. ಚೈತನ್ಯ ಜೀವನ ತಮ್ಮದಾದೀತು ಎಂದು ಯುವ ಜನತೆಗೆ  ಎ.ಐ.ಮಾಗಿ ಮೆಡಮ್ ಮುಖ್ಯಾಧ್ಯಾಪಕರು ಎಲ್ಲರಿಗೂ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಚಟುವಟಿಕೆಯ ಡಿಸ್ ಪ್ಲೇ ದೇಶಭಕ್ತಿ ಗೀತೆ ನೃತ್ಯ ಮತ್ತು ಭಾಷಣ ಜರುಗಿದವು. ಚಿಣ್ಣರ ನೃತ್ಯ ಹಾಗೂ ವಿವಿಧ ರಾಷ್ಟ್ರ ನಾಯಕರ ವೇಷ ರೂಪಗಳು ಗಮನ ಸೆಳೆದವು. 

ಗಾಂಧಿಯವರ ಹಾಗೂ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು.   

ಈ  ಸ್ವಾತಂತ್ರೋತ್ಸವದ ಕಾರ್ಯ ಕ್ರಮದಲ್ಲಿ ಗಣ್ಯರು,  ಮುಖ್ಯಾಧ್ಯಾಪಕರಾದ ಎ.ಐ.ಮಾಗಿ, ಎಮ್‌. ಎನ್‌.ಮುಂಜಣ್ಣಿ, ಝಡ್‌. ಎಸ್‌.ಆಸ್ಕಿ, ಪಿಕೆ. ಖರಾತ್ ಸರ್, ಶಬಾನ ಬೇಗಂ ಕೋತ್ವಾಲ್ ಮತ್ತು ಪೂಜಾ ಮೆಡಮ್  ಶಿಕ್ಷಕಿಯರು, ಹಾಗೂ ಶಾಲಾ ಮಕ್ಕಳಿಗೆ ಕಲಿಸಲು ತರಬೇತಿಗಾಗಿ ಬಂದಿರುವ ಶಿಕ್ಷಕರು/ಶಿಕ್ಷಕಿಯರು, ಶಾಲಾ ಸಿಬ್ಬಂದಿ ಯವರು ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಈ ಮನರಂಜನೆ ಕಾರ್ಯಕ್ರಮ ನೆರವೇರಿಸಿದರು. ಎಲ್ಲಾ ವರ್ಗದ ವಿದ್ಯಾರ್ಥಿ-ವಿದ್ಯಾರ್ಥಿನೀಯರು, ಪಾಲಕರು, ತಾಯಂದಿರರು,  ಇನ್ನಿತರರು ಹಾಜರಿದ್ದರು.