ಮರಡಿನಾಗಲಾಪುರದಲ್ಲಿ 76 ನೇಯ ಗಣರಾಜ್ಯೋತ್ಸವ

76th Republic Day in Maradinagalapur

ಬೈಲಹೊಂಗಲ 28: ತಾಲೂಕಿನ ಮರಡಿನಾಗಲಾಪೂರದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಮರಡಿನಾಗಲಾಪುರದಲ್ಲಿ 76 ನೇಯ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ  ಪ್ರಧಾನ ಪ್ರಧಾನ ಗುರುಗಳಾದ  ಬಿ .ಆರ್‌. ಜಕಾತಿ ಮಾತನಾಡಿ, ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ದೇಶದ ಪ್ರಗತಿಗೆ ಸೇವೆ ಸಲ್ಲಿಸಬೇಕೆಂದು ತಿಳಿಸಿದರು.      

ದೈಹಿಕ ಶಿಕ್ಷಕರಾದ  ಜಿ. ಎಸ್  ಖನಗೌಡ್ರ ಗಣರಾಜ್ಯೋತ್ಸವದ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಕ್ರೀಡಾ ಅಂಕಣಗಳ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದ್ದರು. ಮಕ್ಕಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಶಿಕ್ಷಕರು, ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.ಶಿಕ್ಷಕ  ಎಸ್‌. ಸಿ. ತಳವಾರ್ ಸ್ವಾಗತಿಸಿದರು. ಶಿಕ್ಷಕರಾದ  ಎ.ಬಿ.ತುಮ್ಮರಗುದ್ದಿ  ನಿರೂಪಿಸಿದರು ಶಿಕ್ಷಕಿ ಶ್ರೀಮತಿ ವನೀತಾ  ವಂದಿಸಿದರು.