ಅದ್ದೂರಿಯಾಗಿ ಜರುಗಿದ 76ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆ

76th Republic Day celebrations were held in grand style

ಅದ್ದೂರಿಯಾಗಿ ಜರುಗಿದ 76ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆ

ಯರಗಟ್ಟಿ 26: ಪಟ್ಟಣದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ಯ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ತಾಲೂಕಾಧ್ಯಕ್ಷ, ತಹಶೀಲ್ದಾರ್ ಎಂ. ವ್ಹಿ. ಗುಂಡಪ್ಪಗೋಳ ಅವರು ಧ್ವಜಾರೋಹಣ ನೆರವೇರಿಸಿದರು.ನಂತರ ಮಾತನಾಡಿ ಭಾರತ ಪ್ರಜಾಪ್ರಭುತ್ವದ ದಿನವಾಗಿ ಅರ​‍್ಿಸಿಕೊಂಡ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ನಮ್ಮ ದೇಶವನ್ನು ಸೌರ್ವಭೌಮ, ಜಾತ್ಯತೀತ, ರಾಷ್ಟ್ರವೆಂದು ಅಂಗೀಕರಿಸುವುದರ ಜೊತೆಗೆ ಸಂವಿಧಾನವನ್ನು ಜನವರಿ 26 1950 ರಂದು ಜಾರಿಗೆ ತರಲಾಗಿದೆ.ಪ್ರತಿವರ್ಷ ಜನವರಿ 26ರ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸಿಕೊಂಡು ಬರುತ್ತಿದ್ದು, ಭಾರತ ಪ್ರಜಾಪ್ರಭುತ್ವವಾಗಲು ತಮ್ಮ ಪ್ರಾಣ ಬಲಿದಾನವನ್ನು ಸಮರ​‍್ಿಸಿದ ಎಲ್ಲಾ ದೇಶಭಕ್ತರನ್ನು ಸ್ಮರಿಸಬೇಕೆಂದರು.ಮಾಜಿ ಜಿ.ಪಂ. ಸದಸ್ಯ ಅಜೀತಕುಮಾರ ದೇಸಾಯಿ ಅವರು ಮಾತನಾಡಿ ಈ ವರ್ಷ ವಿದ್ಯಾರ್ಥಿನಿಯರಿಗೆ ವಿಶೇಷ ಪ್ರಾತಿನಿಧ್ಯವನ್ನು ನೀಡಲೆಂದು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ತೆರೆಯಲಾಗಿದೆ. ಆದಷ್ಟು ಶೀಘ್ರದಲ್ಲಿ. ನೆನೆಗುದಿಗೆ ಬಿದ್ದಿದ್ದ ಹೆದ್ದಾರಿ ರಸ್ತೆ ಕಾಮಗಾರಿಗೆ ವೇಗ ನೀಡಲಾಗಿದೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಹಶೀಲ್ದಾರರು ಹಾಗೂ ಗಣ್ಯ ಮಾನ್ಯರು ಪಥಸಂಚಲನಗಳ; ತಂಡಗಳ ವೀಕ್ಷಣೆ ನಡೆಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳ ಪಥ ಸಂಚಲನದ ವಿವಿಧ ಧ್ವಜವಂದನೆ ಕಾರ್ಯಕ್ರಮ ಜರುಗಿತು.ಸ್ವತಂತ್ರ ದೇಶದ ಕನಸನ್ನು ಹೊತ್ತು ಪ್ರಾಣತ್ಯಾಗ ಮಾಡಿದ ಹುತಾತ್ಮರ ಜೀವನ, ಅನ್ನದಾತನು ಅನುಭವಿಸುತ್ತಿರುವ ಸಂಕಷ್ಟಗಳು, ಸಮಾಜದಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯಗಳ ತುಣುಕು ದೃಶ್ಯಗಳನ್ನು ಹಾಡುಗಳ ಮೂಲಕ ನೀಡಲಾದ ಪ್ರದರ್ಶನ ನೆರೆದಿದ್ದ ಸಾರ್ವಜನಿಕರನ್ನು ಮನರಂಜಿಸಿತು.ಸಂಭ್ರಮಾಚರಣೆಯ ನಿಮಿತ್ಯ ಮೈದಾನವೆಲ್ಲ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಇನ್ನಿತರ ಇಲಾಖೆಗಳ ಸಿಬ್ಬಂದಿಗಳಿಂದ ತುಂಬಿ ತುಳುಕುತ್ತಿರುವ ದೃಶ್ಯ ಕಂಡುಬಂದಿತು.ಪಥ ಸಂಚಲನ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯಲ್ಲಿ ವಿಜೇತವಾದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಹಾಗೂ ಪ್ರೌಡ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು.ಈ ವೇಳೆ ತಹಶೀಲ್ದಾರ ಪ. ಪಂ. ಮುಖ್ಯಾಧಿಕಾರಿ ಡಿ. ಎನ್‌. ತಹಶೀಲ್ದಾರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಪಿಎ??? ಎಲ್‌. ಬಿ. ಮಾಳಿ, ಪಶು ವೈದ್ಯಾಧಿಕಾರಿ ಡಾ. ಎಂ. ವ್ಹಿ. ಪಾಟೀಲ, ವೈದ್ಯಾಧಿಕಾರಿ ಡಾ. ಬಿ. ಎಸ್‌. ಬಳ್ಳೂರ, ಕೃಷಿ ಅಧಿಕಾರಿ ಮಹಾಂತೇಶ ಕಳಸಪ್ಪನವರ, ಹೇಸ್ಕಾಂ ಎಸ್ ಓ ಮಹಾಂತೇಶ ಯರಗಟ್ಟಿ, ಎಪಿಎಂಸಿ ಉಪಾಧ್ಯಕ್ಷ ಬಸವರಾಜ ಆರಿಬೆಂಚಿ, ಪ. ಪಂ. ಸದಸ್ಯರಾದ ನಿಖಿಲ ಪಾಟೀಲ, ಹನುಮಂತ ಹಾರುಗೋಪ್ಪ, ಸಲಿಂಬೇಗ ಜಮಾದಾರ, ಕಸಾಪ ಅಧ್ಯಕ್ಷ ತಮ್ಮಣ್ಣ ಕಾಮಣ್ಣವರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಮಾಜಿ ಸೈನಿಕ ಕುಮಾರ ಹಿರೇಮಠ, ಪ್ರಾಂಶುಪಾಲರಾದ ರಾಮನಗೌಡ ಮರಿಗೌಡರ, ಮುಖ್ಯೋಪಾಧ್ಯಾಯರಾದ ಎ. ಎ. ಮಕ್ತುಮನ್ನವರ, ಭಾಸ್ಕರ ಹಿರೇಮೆತ್ರಿ, ಶಿವಾನಂದ ಕರಿಗೋಣ್ಣವರ, ನಿವೃತ್ತ ಶಿಕ್ಷಕ ಪಿ. ಎಚ್‌. ಪಾಟೀಲ, ರಮೇಶ ಪಾಟೀಲ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯತ ಸದಸ್ಯರು, ಸಾರ್ವಜನಿಕರು ಇದ್ದರು.