ಸರ್ಕಾರಿ ನಿವೃತ್ತಿ ನೌಕರರ ಸಂಘದ ಜಿಲ್ಲಾ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವ
ಬಳ್ಳಾರಿ 27: 76ನೇ ಗಣರಾಜ್ಯೋತ್ಸವ ಅಂಗವಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ರಾಜ್ಯ ಸರ್ಕಾರಿ ನಿವೃತ್ತಿ ನೌಕಕರ ಸಂಘದ ಬಳ್ಳಾರಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಧ್ವಜಾರೋಹಣಾ ಕಾರ್ಯಕ್ರಮ ನಡೆಯಿತು.ಶಿಕ್ಷಣ ಇಲಾಖೆಯ ನಿವೃತ್ತ ಮಾಜಿ ಮೋಕಾ ಕ್ಲಸ್ಟರ್ ಸಿಆರ್‌ಪಿ ಪಿ.ಅಂಜಿನಿ ಅವರು ಜಿಲ್ಲಾ ಸರ್ಕಾರಿ ನಿವೃತ್ತಿ ನೌಕಕರ ಸಂಘದ ಕಚೇರಿಗೆ ರೂ.7001/- ಗಳ ಚೆಕ್ ವಿತರಣೆ ಮಾಡಿದರು.ನಿವೃತ್ತ ಉಪ ತಹಶೀಲ್ದಾರ್ ಬಿ.ಅರ್ಜುನಪ್ಪ ಅವರು ಮಾತನಾಡಿ, ನಿವೃತ್ತಿ ನಂತರವೂ ಸಹಕಾರ ಮತ್ತು ದೇಣಿಗೆ ನೀಡುವ ಮನೋಭಾವ ಬೆಳೆಸಿಕೊಳ್ಳುವುದು ನಾಗರಿಕರ ಧರ್ಮ. ಇಂತಹ ಮನೋಭಾವ ಎಲ್ಲರಲ್ಲಿಯೂ ಮೂಡಬೇಕು ಎಂದರು.ಈ ವೇಳೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮರಿಶಾಂತ ಕುಮಾರ್, ಜಿಲ್ಲಾ ಕಾರ್ಯದರ್ಶಿ ಹಾಗೂ ನಿವೃತ್ತ ಮುಖ್ಯ ಗುರುಗಳಾದ ಜಿ.ದೇವೆಂದ್ರ್ಪ, ನಿವೃತ್ತಿ ಶಿಕ್ಷಕರಾದ ಸತ್ಯಮ್ಮ, ಆರೋಗ್ಯ ಇಲಾಖೆಯ ನಿವೃತ್ತಿ ನೌಕರರಾದ ಅಬ್ದುಲ್ ರಾವೂಫ್ ಸೇರಿದಂತೆ ಇತರರು ಇದ್ದರು.