ಯರಗಟ್ಟಿ 28: 76ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ತಾಲೂಕಾ ಆಡಳಿತದಿಂದ ಈ ಬಾರಿ ಅಂತಾರಾಷ್ಟ್ರೀಯ ಕ್ರೀಡಾಪಟು ಉದಯಕುಮಾರ ಆಡಕಿ ಹಾಗೂ ಪೊಲೀಸ್ ಇಲಾಖೆಯ ಎಎಸ್‌ಐ ವಾಯ್. ಎಂ. ಕಡಕೋಳ, ಆರೋಗ್ಯ ಇಲಾಖೆ ಪ್ರಾಕಾಶ ಮಾಂಗ್, ಪತ್ರಕರ್ತ ಸಿದ್ದು ಪೂಜೇರ, ಶಿಕ್ಷಣ ಇಲಾಖೆಯಿಂದ ಶಿಕ್ಷಕಿ ಎ. ಕೆ. ನದಾಫ ಸೇರಿದಂತೆ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ವೇಳೆ ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ, ಪ. ಪಂ. ಮುಖ್ಯಾಧಿಕಾರಿ ಡಿ. ಎನ್. ತಹಶೀಲ್ದಾರ,ಪಿಎಸ್‌ಐ ಎಲ್. ಬಿ. ಮಾಳಿ, ವೈದ್ಯಾಧಿಕಾರಿ ಬಿ. ಎಸ್. ಬಳ್ಳೂರ, ಪಶು ವೈದ್ಯಾಧಿಕಾರಿ ಎಂ. ವ್ಹಿ. ಪಾಟೀಲ, ಹೇಸ್ಕಾಂ ಎಸ್ ಓ ಮಹಾಂತೇಶ ಯರಗಟ್ಟಿ, ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಮಾಜಿ ಸೈನಿಕ ಕುಮಾರ ಹಿರೇಮಠ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಪ. ಪಂ. ಸದಸ್ಯರಾದ ನಿಖಿಲ ಪಾಟೀಲ, ಸಲೀಂಬೇಗ ಜಮಾದಾರ, ಹನುಮಂತ ಹಾರೂಗೋಪ್ಪ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಕಸಾಪ ಅಧ್ಯಕ್ಷ ತಮ್ಮಣ್ಣಾ ಕಾಮಣ್ಣವರ ಸೇರಿದಂತೆ ಅನೇಕರು ಇದ್ದರು.