ನವದೆಹಲಿ, ಫೆ 27, ಕೊರೊನಾ ವೈರಸ್ನಿಂದಾಗಿ ನಲುಗಿರುವ ಚೀನಾದ ವುಹಾನ್ ನಿಂದ 76 ಮಂದಿ ಭಾರತೀಯರನ್ನು ವಾಯು ಪಡೆಯ ವಿಶೇಷ ವಿಮಾನದ ಮೂಲಕ ಇಂದು ದೆಹಲಿಗೆ ಕರೆತರಲಾಗಿದೆ. ಇದರಲ್ಲಿ 36 ಮಂದಿ ವಿದೇಶಿಯರು ಸಹ ಸೇರಿದ್ದಾರೆ.ಭಾರತೀಯ ವಾಯುಪಡೆಯ ವಿಶೇಷ ಗ್ಲೋಬ್ ಮಾಸ್ಟರ್ ವಿಮಾನ ಗುರುವಾರ ಮುಂಜಾನೆ ದೆಹಲಿಗೆ ಆಗಮಿಸಿದೆ. ಇದರಲ್ಲಿ ಕೆಲವು ಬಾಂಗ್ಲಾದೇಶ, ಚೀನಾ, ಮೈನ್ಮಾರ್ ದೇಶದ ಪ್ರಜೆಗಳು ಸಹ ಸೇರಿದ್ದಾರೆ. ಎಲ್ಲರನ್ನು ದೆಹಲಿಯ ಚಾವ್ಲಾ ಪ್ರದೇಶದಲ್ಲಿರುವ ಕೊರೊನಾ ವೈರಸ್ ತಪಾಸಣಾ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ .