ಮೂಡಲಗಿ: ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿರುವ ದಿನ. ನಮ್ಮ ದೇಶ ಮಾತೆಯಾದ ಭಾರತಮಾತೆ ಇಂಗ್ಲೀಷರ ದಾಸ್ಯತೆಯ ಸಂಕೋಲೆಗಳಿಂದ ಬಿಡುಗೊಡೆ ಹೊಂದಿದ ಪವಿತ್ರ ದಿನ ಎಂದು ಮೂಡಲಗಿ ಪೋಲಿಸ ಠಾಣೆಯ ಪಿ.ಎಸ್.ಐ. ಶರಣೇಶ ಜಾಲಿಹಾಳ ಹೇಳಿದರು.
ಪಟ್ಟಣದ ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮತ್ತು ಲಕ್ಷ್ಮಣ ವಾಯ್. ಅಡಿಹುಡಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೆರಿಸಿ ಮಾತನಾಡುತ್ತಾ, ನಮ್ಮ ದೇಶ ಮೊದಲು ಪರದೇಶದವರ ಆಡಳಿತಕ್ಕೆ ಒಳಪಟ್ಟಿತ್ತು ಅವರು ನಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದರು. ಅವರ ಕೈಯೊಳಗಿನ ಕೈಗೊಂಬೆಗಳಂತೆ ನಾವು ಇರಬೇಕಾಗಿತ್ತು. ಆದರೆ ಅದನ್ನು ಸಹಿಸದ ಅನೇಕ ಮಹಾತ್ಮರು ತಮ್ಮ ತನು-ಮನ-ದನವನ್ನು ಅರ್ಪಿಸಿ ನಮಗೆ ಸ್ವಾತಂತ್ರ್ಯವನ್ನು ಕೊಡಿಸಿದರು. ಅಂದಿನಿಂದ ನಾವು ಈ ದಿನವನ್ನು ಅತಿ ವಿಜೃಂಭನೆಯಿಂದ ಆಚರಿಸುತ್ತೆವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೇಯ ಸಂಸ್ಥಾಪಕ ಎಲ್.ವಾಯ್.ಅಡಿಹುಡಿ, ಪ್ರಧಾನ ಶಿಕ್ಷಕಿ ಪಲ್ಲವಿ ಭಂಡಾರಿ, ಹನಮಂತ ಪೂಜೇರಿ, ಈಶ್ವರ ಕಂಕಣವಾಡಿ, ಹಾಲಪ್ಪಾ ಅಂತರಗಟ್ಟಿ, ಹನಮಂತ ಕಂಕಣವಾಡಿ, ರಾಮಣ್ಣ ಮಂಟೂರ, ಅಜ್ಜಪ್ಪ ಕಂಕಣವಾಡಿ, ಯಲ್ಲಪ್ಪ ಖಾನಟ್ಟಿ, ಮಂಜುನಾಥ ಕುಂಬಾರ ಮತ್ತು ಪೋಲಿಸ ಸಿಬ್ಬಂದಿ, ಸೈನಿಕ ತರಬೇತಿಯ ಶಿಬಿರಾರ್ಥಿಗಳೂ ಹಾಗೂ ಶಾಲಾ ಮಕ್ಕಳು ಭಾವಹಿಸಿದ್ದರು.