ರಾಣೇಬೆನ್ನೂರು27; ತಾಲೂಕಿನ ಮಾಕನೂರು ಗ್ರಾಮ ಪಂಚಾಯತಿ ಆವರಣದಲ್ಲಿ ರವಿವಾರ ನಡೆದ 71ನೇ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ಗ್ರಾಪಂ ಉಪಾಧ್ಯಕ್ಷೆ ರತ್ನಮ್ಮ ಬಣಕಾರ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷೆ ರತ್ನಮ್ಮ ಬಣಕಾರ ಅವರು, ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಇಲ್ಲಿನ ನಾಗರೀಕರು ಸಹಕಾರ ನೀಡಬೇಕು. ಸಹಕಾರದಿಂದಲೇ ಎಲ್ಲ ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದು ಅಲ್ಲದೇ ಗ್ರಾಮಗಳ ಸರ್ವಾಂಗೀಣ ಪ್ರಗತಿಗೆ ಸಹಕಾರಿಯಾಗುವುದು ಎಂದು ಕರೆ ನೀಡಿದರು.
ಗ್ರಾಪಂ ಅಧ್ಯಕ್ಷ ಶಿವನಗೌಡ ಮಲ್ಲನಗೌಡ್ರ, ಸದಸ್ಯ ನಾಗಪ್ಪ ಬಾಕರ್ಿ, ಶಿಕ್ಷಕರಾದ ಬಸವರಾಜ ದುರುಗಮ್ಮನವರ, ರಾಜು ಹಿರೇಮಠ, ಬಿ.ವಿ.ಶ್ಯಾಮನೂರು, ಅಕ್ಕಮ್ಮ, ಶೈಲಜಾ, ರಾಜೇಶ್ವರಿ ಪೂಜಾರ, ಎಸ್.ಎಂ.ಚೆನ್ನಮಲ್ಲಯ್ಯ, ಎನ್.ಎಂ.ಮತ್ತೂರು, ಗ್ರಾಪಂ ಕಾರ್ಯದಶರ್ಿ ಕರಬಸನಗೌಡ ಭರಮಗೌಡ್ರ, ಚಂದ್ರಶೇಖರ ಕುಂಬಳೂರು ಸೇರಿದಂತೆ ಮತ್ತಿತರ ಗಣ್ಯರು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ನಡೆದ ಶಾಲಾ ವಿದ್ಯಾರ್ಥಿಗಳ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಜನರ ಗಮನ ಸೆಳೆದವು.
ಸಂವಿಧಾನದ ಆಶಯದಂತೆ ಸಮಾನ ಸಮಾಜ ನಿಮರ್ಾಣಕ್ಕೆ ಬದ್ಧರಾಗೋಣ: ಜಿಲ್ಲಾಧಿಕಾರಿ