ಬೆಟಗೇರಿ 22: ಗ್ರಾಮದ ವ್ಹಾಲಿಬಾಲ್ ಕ್ಲಬ್ ಆಶ್ರಯದಲ್ಲಿ 71ನೇ ಗಣರಾಜ್ಯೋತ್ಸವ ಪ್ರಯುಕ್ತ ಪ್ರಪ್ರಥಮ ಬಾರಿ ಹೊನಲು ಬೆಳಕಿನ ವ್ಹಾಲಿಬಾಲ್ ಪಂದ್ಯಾವಳಿಗಳ ಉದ್ಘಾಟನೆ ಸಮಾರಂಭ ಇದೇ ರವಿವಾರ ಜ.26ರಂದು ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ವಿವಿಡಿ ಸಕರ್ಾರಿ ಪ್ರೌಢ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ.
ಅರಭಾಂವಿ ಶಾಸಕ, ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪಂದ್ಯಾವಳಿ ಉದ್ಘಾಟನೆ ನೆರವೇರಿಸಲಿದ್ದಾರೆ. ಕೌಜಲಗಿ ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ ಮುಖ್ಯತಿಥಿಗಳಾಗಿ ಆಗಮಿಸಲಿದ್ದಾರೆ. ಗೋಕಾಕ ಎಲ್ಇಟಿ ವ್ಯವಸ್ಥಾಪಕ ನಿದರ್ೇಶಕ ಸನತ ಜಾರಕಿಹೊಳಿ ವಿಶೇಷ ಅತಿಥಿಗಳಾಗಿ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ತಾಪಂ, ಗ್ರಾಪಂ ಹಾಗೂ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಕ್ರೀಡಾಪ್ರೇಮಿಗಳು, ಗಣ್ಯರು ಸಮಾರಂಭದಲ್ಲಿ ಅತಿಥಿಗಳಾಗಿ, ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.
ವಿಜೇತ ತಂಡಗಳಿಗೆ ಹಲವು ಜನ ಗಣ್ಯರ, ಕ್ರೀಡಾಪ್ರೇಮಿಗಳ ಪ್ರಾಯೋಜಕತ್ವದಲ್ಲಿ ಆಕರ್ಷಕ ನಗದು, ಟ್ರೋಪಿ ನೀಡಲಿದ್ದಾರೆ. ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವ ತಂಡದವರು ಶನಿವಾರ ಜ.25 ರಂದು ಸಾಯಂಕಾಲ 6 ಗಂಟೆ ಒಳಗೆ ತಮ್ಮ ತಂಡದ ಹೆಸರು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ, ಹೆಸರು ನೊಂದಾಯಿಸಲು ಮೊ.ನಂ: 9972767341, 8904199115, 7019516386, 7019008066 ಗೆ ಸಂಪಕರ್ಿಸಲು ಕೊರಲಾಗಿದೆ ಎಂದು ವ್ಹಾಲಿಬಾಲ್ ಪಂದ್ಯಾವಳಿ ಆಯೋಜಕ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.