71ನೇ ಗಣರಾಜ್ಯೋತ್ಸವ: ಸರ್ಮೋತ್ತಮ ಸೇವಾ ಪ್ರಶಸ್ತಿ ಪಡೆದ ನೌಕರರಿಗೆ ಸನ್ಮಾನ

ಕೊಪ್ಪಳ 27: 71ನೇ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ಈ ವರ್ಷದ ``ಸರ್ಮೋತ್ತಮ ಸೇವಾ ಪ್ರಶಸ್ತಿ''ಗೆ ಆಯ್ಕೆಯಾದ ಜಿಲ್ಲೆಯ ನೌಕರರಿಗೆ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು. 

71ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು (ಜ.26) ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ``ಸವರ್ೋತ್ತಮ ಸೇವಾ ಪ್ರಶಸ್ತಿ'' ಪ್ರದಾನ ಮಾಡಲಾಯಿತು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹಲವು ಗಣ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದು, ``ಸರ್ಮೋತ್ತಮ ಸೇವಾ ಪ್ರಶಸ್ತಿ'' ಪಡೆದ ನೌಕರರಿಗೆ ಸನ್ಮಾನಿಸಿದರು.   

ಪ್ರಶಸ್ತಿ ಪಡೆದ ನೌಕರರು: ``ಸರ್ಮೋತ್ತಮ ಸೇವಾ ಪ್ರಶಸ್ತಿ'' ಪಡೆದ ನೌಕರರ ವಿವರ ಇಂತಿದೆ.  ಉಪ ವಿಭಾಗಾಧಿಕಾರಿ ಸಿ.ಡಿ. ಗೀತಾ, ಗಂಗಾವತಿ ತಾಲ್ಲೂಕ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ಡಾ. ಡಿ.ಮೋಹನ್, ಪಶು ಸಂಗೋಪನಾ ಇಲಾಖೆ ಉಪ ನಿದರ್ೇಶಕ ಡಾ. ಬಸಯ್ಯ ಸಾಲಿ, ಕೊಪ್ಪಳ ನಗರಸಭೆ ಪೌರಾಯುಕ್ತ ಟಿ.ಎ. ಮಂಜುನಾಥ, ಕೊಪ್ಪಳ ತಹಶೀಲ್ದಾರ ಜೆ.ಬಿ. ಮಜ್ಜಿಗಿ, ಕೆ.ಎಸ್.ಡಿ.ಎಲ್ ಕಚೇರಿಯ ಫಾಮರ್ಾಸಿಸ್ಟ್ ಸುರೇಶ ಮೋರಗೇರಿ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ ಪಿ.ನಾಗರಾಜ, ಮುನಿರಾಬಾದ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮಿ ಬಿ., ಕುಕನೂರು ಗ್ರಾಮಲೆಕ್ಕಾಧಿಕಾರಿ ಶರಣಪ್ಪ ಹಳ್ಳಿ ಮತ್ತು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ವಾಹನ ಚಾಲಕ ಅನಿಲ ಕುಮಾರ ಜೋಷಿ, ಈ ಹತ್ತು ಜನ ನೌಕರರು ಈ ವರ್ಷದ ಸರ್ಮೋತ್ತಮ ಸೇವಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ:  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿ ಗೌರವಿಸಲಾಯಿತು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪ ವಿಭಾಗಾಧಿಕಾರಿ ಸಿ.ಡಿ ಗೀತಾ, ಕೊಪ್ಪಳ ತಹಶೀಲ್ದಾರ ಜೆ.ಬಿ. ಮಜ್ಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹಲವು ಗಣ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಾಧಕರಿಗೆ ಸನ್ಮಾನಿಸಿದರು. 

ಸಾಧಕರ ವಿವರ: 2019-20ನೇ ಸಾಲಿನ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿ ಪ್ರಶಸ್ತಿಯನ್ನು ಪಡೆದಿರುವ ಕೊಪ್ಪಳ ಜಿಲ್ಲೆಯ ರಮೇಶ ವೈದ್ಯರವರಿಗೆ, ತುಂಗಭದ್ರಾ ಆಣೆಕಟ್ಟಿನ ಸ್ಲುಯಿಸ್ ಗೇಟ್ನ ನಿರ್ವಹಣೆ ಮಾಡಿ ಜನ-ಜೀವನ ಹಾನಿಯಾಗದಂತೆ ಕರ್ತವ್ಯ ನಿರ್ವಹಿಸಿದ್ದ ಕನರ್ಾಟಕ ನೀರಾವರಿ ನಿಗಮ ನಿಯಮಿತ ಬೆಂಗಳೂರಿನ ವ್ಯವಸ್ಥಾಪಕ ನಿದರ್ೇಶಕರಾದ ಮಲ್ಲಿಕಾಜರ್ುನ ಗುಂಗೆ, ಯಶಸ್ವಿ ಬೆನ್ನುಹುರಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಾದ ಗಂಗಾವತಿಯ ಡಾ. ಈಶ್ವರ್ ಸವಡಿ, ಡಾ. ಸಲಾವುದ್ದೀನ್ ಹಾಗೂ ಡಾ. ಸುಜಾತಾ ಆರಾಧ್ಯ, ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪಡೆದ ಗೃಹ ರಕ್ಷಕ ದಳದ ಸೀನಿಯರ್ ಪ್ಲಟೂನ್ ಕಮಾಂಡರ್ ವೀರಣ್ಣ ಕೆ. ಬಡಿಗೇರ, ಮುಖ್ಯ ಮಂತ್ರಿಗಳ ಚಿನ್ನದ ಪದಕ ಪಡೆದ ಗೃಹ ರಕ್ಷಕ ದಳದ ಪ್ಲಟೂನ್ ಕಮಾಂಡರ್ ರುದ್ರಪ್ಪ ಪತ್ತಾರ ಮತ್ತು ದೆಹಲಿಯಲ್ಲಿ ನಡೆದ 65ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟ-2020ರ ದೊಣ್ಣೆವರಸೆ ಕ್ರೀಡಾ ಕ್ಷೇತ್ರದಲ್ಲಿ ದ್ವೀತಿಯ ಸ್ಥಾನಪಡೆದ ಕ್ರೀಡಾಪಟು ಕೃಷ್ಣಾ ಸಿದ್ದಪ್ಪ ಗೊಲ್ಲರ ಹಾಗೂ ಈ ಕ್ರೀಡೆಯಲ್ಲಿ ಭಾಗವಹಿಸಿದ್ದ ಪಟುಗಳಾದ ವಿಷ್ಣು ಪ್ರಾಣೇಶ, ಅಭಿಲಾಷ ದಿವಾಕರ, ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟ-2020ರ ಹಗ್ಗದ ಆಟದಲ್ಲಿ ಭಾಗವಹಿಸಿದ ಶ್ರವಣಕುಮಾರ ಎಸ್. ಕಿಂದ್ರಿ ಹಾಗೂ ಭೀಮಸೇನ ಎಚ್. ಪರಸಾಪುರ, ಈ ಸಾಧಕರಿಗೆ ಸನ್ಮಾನಿಸಲಾಯಿತು.     

ಆಕರ್ಷಕ ಪಥಸಂಚಲನ ಹಾಗೂ ಸ್ಥಬ್ಧಚಿತ್ರ ಪ್ರದರ್ಶನ: ವಿವಿಧ ಶಾಲಾ ಮಕ್ಕಳು, ಪೊಲೀಸ್, ಎನ್.ಸಿ.ಸಿ. ಸೇವಾದಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಗೃಹರಕ್ಷಕದ ದಳದಿಂದ ನಡೆದ ಆಕರ್ಷಕ ಪಥಸಂಚಲನದಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದವು.  ಇದರಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾ ವಸತಿ ನಿಲಯಕ್ಕೆ ಪ್ರಥಮ ಬಹುಮಾನ ಲಭಿಸಿತು.  ದ್ವೀತಿಯ ಬಹುಮಾನವನ್ನು ಬಾಲಕೀಯರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ತಂಡ ಪಡೆದರೆ, ಸ್ವಾಮೀ ವಿವೇಕಾನಂದ ಪ್ರೌಢ ಶಾಲೆಯ ತಂಡವು ತೃತೀಯ ಬಹುಮಾನಕ್ಕೆ ಪಾತ್ರವಾಯಿತು.  ಸ್ಥಬ್ಧಚಿತ್ರ ಪ್ರದರ್ಶನದಲ್ಲಿ ಕೊಪ್ಪಳದ ಶಾಸಕರ ಸರಕಾರಿ ಮಾದಯ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಯಲಬುಗರ್ಾ ಪಟ್ಟಣ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಈಶನ್ಯಾ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸಂಸ್ಥೆ ಭಾಗವಹಿಸಿದ್ದವು.  ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸರ್ವ ಧರ್ಮ ಸಮನ್ವಯ ವೇದಿಕೆಯ ಸ್ಥಬ್ಧಚಿತ್ರ ಹಾಗೂ ಈಶಾನ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದ ಎಂ.ಐ.ಜಿ-21 ಲಾಂಚರ್ ಸ್ಥಬ್ಧಚಿತ್ರಕ್ಕೆ ಪ್ರಥಮ ಬಹುಮಾನ ದೊರೆಯಿತು.  ದ್ವೀತಿಯ ಬಹುಮಾನ ಯಲಬುರ್ಗಾ ಪಟ್ಟಣ ಪಂಚಾಯತ್ನ ಜಲಶಕ್ತಿ ಅಭಿಯಾನ ಕುರಿತಾದ ಸ್ಥಬ್ಧಚಿತ್ರ ಪಡೆದರೆ, ಕೃಷಿ ಇಲಾಖೆಯ ``ಸಮಗ್ರ ಯೋಜನೆ, ಸಂತುಷ್ಟ ರೈತ, ಸಮೃದ್ಧ ಭಾರತ'' ಸ್ಥಬ್ಧಚಿತ್ರವು ತೃತೀಯ ಬಹುಮಾನವನ್ನು ಪಡೆಯಿತು.  

ನೃತ್ಯ ಕಾರ್ಯಕ್ರಮ: ನೃತ್ಯ ಕಾರ್ಯಕ್ರಮದಲ್ಲಿ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಉರ್ದು ಶಾಲಾ ವಿಭಾಗದ ವಿದ್ಯಾರ್ಥಿನಿಯರು, ಬಾಲಕೀಯರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿನಿಯರು ಹಾಗೂ ಕಾಳಿದಾಸ ಪ್ರೌಢ ಶಾಲೆಯ ವಿದ್ಯಾಥರ್ಿಗಳಿಂದ ಆಕರ್ಷಕ ನೃತ್ಯ ನಡೆಯಿತು.  ಇದರಲ್ಲಿ ಬಾಲಕೀಯರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ ತಂಡಕ್ಕೆ ಬಹುಮಾನ ಲಭಿಸಿತು.