ಕೆರೂರ ಪಪಂ ಬೆಂಕಿ ನಂದಿಸಲು 70 ಸಾವಿರ ವೆಚ್ಚ ! ಬೀದಿ ದೀಪ ನಿರ್ವಹಣೆಗೂ ಭಾರಿ ವೆಚ್ಚ* ಟೆಂಡರ್ ಕರೆಯದಿರುವದು ಅಕ್ಷಮ್ಯ

70 thousand cost to put out the fire at Kerura PAP! Huge cost to maintain street lights* Not invitin

ಕೆರೂರ ಪಪಂ ಬೆಂಕಿ ನಂದಿಸಲು 70 ಸಾವಿರ ವೆಚ್ಚ ! ಬೀದಿ ದೀಪ ನಿರ್ವಹಣೆಗೂ ಭಾರಿ ವೆಚ್ಚ* ಟೆಂಡರ್ ಕರೆಯದಿರುವದು ಅಕ್ಷಮ್ಯ   

ಕೆರೂರ 11: ಕೆರೂರ ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕಸ್ಮಿಕವಾಗಿ ಕಸ ವಿಲೇವಾರಿ ಘಟಕದಲ್ಲಿ ಹೊತ್ತಿದ ಬೆಂಕಿ ನಂದಿಸಲು ಸುಮಾರು 70 ಸಾವಿರ ವೆಚ್ಚ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.  ಇಲ್ಲಿಯ ಪಪಂ ಸಭಾ ಭವನದಲ್ಲಿ ಸೋಮವಾರ ಅಧ್ಯಕ್ಷೆ ನಿರ್ಮಲಾ ಮದಿ ಸಮ್ಮುಖದಲ್ಲಿ ನಡೆದ ಬಜೆಟ್ ಸಭೆಯಲ್ಲಿ ಲೆಕ್ಕಪತ್ರದಿಂದ ಇದು ಅನಾವರಣಗೊಂಡಿದೆ.  ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಅವ್ಯವಸ್ಥೆಯ ಬೀದಿ ದೀಪ ನಿರ್ವಹಣೆಗೆ ಮುಕ್ತಿ ಕಾಣಿಸಲು ಟೆಂಡರ್ ಕರೆಯಬೇಕು ಎಂದು ಸದಸ್ಯರು ಆಗ್ರಹಿಸಿದರು. ಈಗಾಗಲೇ ಲಕ್ಷಾಂತರ ವೆಚ್ಚ ಮಾಡಿದರು ಅಸಮರ​‍್ಕ ಬೀದೀದೀಪ ನಿರ್ವಹಣೆ ಕಾರ್ಯದಿಂದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದ ಕಾಮಗಾರಿಗಳನ್ನು ತುರ್ತಾಗಿ ಆರಂಭಿಸಲು ಒತ್ತಾಯಿಸಿದರು.  ಬೇಸಿಗೆ ಆರಂಭಗೊಂಡಿದ್ದು ಅಲ್ಲಲ್ಲಿ ನೀರಿನ ಅಬಾವ 24ಥ7 ಕಾರ್ಯ ವಿಳಂಬದಿಂದ ನಾಲ್ಕಾರು ದಿನಗಳಿಗೊಮ್ಮ ನೀರು ಸರಬುರಾಜು ಆಗುತ್ತಿದೆ ಕೆಲತಜಡೆ ಗಡಸು ನೀರು ಬಾರದೆ ಅಸಮರ​‍್ಕ ಪೂರೈಕೆಯು ನಾಗರಿಕರ ಆಕ್ರೋಶಕ್ಕೆ ತುತ್ತಾಗಿದೆ.  ಬಸ್ ನಿಲ್ದಾಣದಿಂದ ರಾಚೋಟೇಶ್ವರ ದೇವಸ್ಥಾನವರೆಗೆ 12 ಅಡಿ ರಸ್ತೆಯನ್ನು ಬರುವ ಜಾತ್ರೆಯೊಳಗೆ ಪೂರ್ಣಗೊಳಿಸಲು ಸೂಚಿಸಲಾಯಿತು.  ಉಳಿಕೆ ಬಜೆಟ ಮಂಡನೆ: ಇಲ್ಲಿಯ ಪಪಂ 3ಲಕ್ಷ 24 ಸಾವಿರ ವಾರ್ಷಿಕ ಉಳಿಕೆ ಬಜೆಟ್ ಮಂಡಿಸಿದ್ದಾರೆ. ಹೊಸ ನಿವೇಶನ, ಅಂಗಡಿಗಳ ನೂತನ ಪರವಾಣಿಗೆ, ಕರಬಾರ, ಆಸ್ತಿ ತೆರಿಗೆ, ಹೆಚ್ಚಳಕ್ಕೆ ಸಭೆ ನಿರ್ಧರಿಸಿತು. ಕಟ್ಟಡಗಳಿಂದ ಮತ್ತು ವಾಣಿಜ್ಯ ಸಂಕಿರ್ಣಗಳ ಬಾಡಿಗೆ ಹಾಗೂ ಇತರೆ ಸಂಪನ್ಮೂಲಗಳ ಆದಾಯ ನೀರೀಕ್ಷೆ ಮಾಡಲಾಗಿದೆ.  ಎಸ್‌.ಎಫ್‌.ಸಿ ವಿಶೇಷ ಅನುದಾನ,ಸ್ವಚ್ಚ ಭಾರತ ಮೀಶೆನ,16 ಹಣಕಾಸು ಸಾಮಾನ್ಯ ಮೂಲ ಅನುದಾನಗಳಿಂದ ವೃದ್ಧಿ ನೀರಿಕ್ಷೆಯ ಗುರಿಯನ್ನು ಹೊಂದಲಾಗಿದೆ ಮುಖ್ಯಾಧಿಕಾರಿ ರಮೇಶ ಮಾಡಬಾಳ ತಿಳಿಸಿದರು.  ಉಪಾಧ್ಯಕ್ಷ ಮೊದಿನಸಾಬ ಚಿಕ್ಕೂರ, ಸದಸ್ಯರಾದ ಕುಮಾರ ಐಹೊಳೆ, ವಿಠ್ಠಲ ಗೌಡರ, ಮಲ್ಲಪ್ಪ ಹಡಪದ, ಪರಶುರಾಮ ಮಲ್ಲಾಡದ, ಯಾಸೀನ ಖಾಜಿ, ಶಂಕರ ಕೆಂದೂಳಿ, ಮಂಜುಳಾ ತಿಮ್ಮಾಪೂರ, ಶೋಭಾ ಛತ್ರಬಾನು, ಕವಿತಾ ಪ್ರಭಾಕರ, ಅಕ್ಕಮಹಾದೇವಿ ಶೆಟ್ಟರ್, ಮಹಾನಂದ ಪೂಜಾರ ಮತ್ತಿತರರು ಹಾಜರಿದ್ದರು.