7 ಕೋಟಿ 32 ಲಕ್ಷ ರೂಗಳ ಕಾಮಗಾರಿಗೆ ಚಾಲನೆ
ಯಮಕಮರಡಿ 21 : ಸ್ಥಳೀಯ ವಿಧಾನಸಭಾ ವ್ಯಾಪ್ತಗೆ ಬರುವ ಕಡೋಲಿ ಜಿ.ಪಂ ವ್ಯಾಪ್ತಿಯಲ್ಲಿ ಬರುವ ಕಡೋಲಿ ಗ್ರಾಮದಲ್ಲಿ 90 ಲಕ್ಷರೂಗಳ ಸಿ ಸಿ ರಸ್ತೆ ಕಾಮಗಾರಿ ಹಾಗೂ 2 ಅಂಗನವಾಡಿ ನೂತನ ಕಟ್ಟಡಗಳಿಗೆ 20 ಲಕ್ಷರೂ ಗ್ರಾಮದ ಸ್ಮಶಾನ ಅಭಿವೃದ್ದಿಗೆ 5 ಲಕ್ಷರೂಪಾಯಿ ಗ್ರಾಮದ ಕೇರೆ ನಿರ್ಮಾಣಕ್ಕೆ 50 ಲಕ್ಷರೂಪಾಯಿ ಕೇದನೂರ ಗ್ರಾಮದಲ್ಲಿ ಸಿ ಸಿ ರಸ್ತೆ ಕಾಮಗಾರಿಗೆ 35 ಲಕ್ಷರೂಪಾಯಿ ಗುಂಜನಟ್ಟಿ ಗ್ರಾಮದಿಂದ ಹಂದಿಗನೂರ ಗ್ರಾಮದವರೇಗೆ 5 ಕೋಟಿ ರೂ ವೆಚ್ಚದಲ್ಲಿ ರಸ್ತೆ ಡಾಂಬರಿಕರಣಕ್ಕೆ ಚಾಲನೆ ಹಾಗೂ ಮಣ್ಣಿಕೇರಿ ಗ್ರಾಮದಲ್ಲಿ 2 ನೂತನ ಶಾಲಾ ಕೋಠಡಿಗಳಿಗೆ 32 ಲಕ್ಷರೂಪಾಯಿ ಒಟ್ಟು 7 ಕೋಟಿ 32 ಲಕ್ಷರೂಗಳ ಕಾಮಗಾರಿಗೆ ಚಾಲನೆ ನಿಡಲಾಯಿತು. ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಅಣ್ಣಾ ಜಾರಕಿಹೋಳಿ ಅವರ ಅನುದಾನದಲ್ಲಿ ಸಚಿವರ ಸೂಚನೆಯ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮೀತಿಯ ಯುವ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಅಣ್ಣಾ ಜಾರಕಿಹೋಳಿ ರವರು ದಿ.19 ರಂದು ಕಡೋಲಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಪೂಜೆ ನೆರವೆರಿಸಿ ಚಾಲನೆ ನಿಡಿದರು. ಈ ಸಂದರ್ಬದಲ್ಲಿ ಸಚಿವರ ಆಪ್ತರಾದ ಮಲಗೌಡ ಪಾಟೀಲ ಮಾಜಿ ಜಿ ಪಂ ಉಪಾಧ್ಯಕ್ಷ ಅರುಣ ಕಟಾಂಬಳಿ ರಾಜು ಮಾಯನ್ನಾ ಗೌಡಪ್ಪಾ ಪಾಟೀಲ, ರಾಹುಲ ಜಾಧವ, ಹಾಗೂ ಗ್ರಾ.ಪಂ ಅಧ್ಯಕ್ಷರು ಉಪಾಧ್ಯಕ್ಷರು ಸರ್ವಸಧ್ಯಸರು ಗ್ರಾಮದ ಮುಖಂಡರು ಉಪಸ್ಥಿತರಿದ್ದು ಕಾಮಗಾರಿಗೆ ಚಾಲನೆ ನಿಡಿದರು.