ಶಾಸಕ ಲಕ್ಷ್ಮಣ ಸವದಿ ಆದೇಶದಂತೆ ವಿವಿಧ ಜಾತಿಯ 7,500 ಸಸಿಗಳು ನಾಟಿ
7,500 saplings of various species planted as per the orders of MLA Lakshman Savadi
ಸಂಬರಗಿ 27: ಶಾಸಕ ಲಕ್ಷ್ಮಣ ಸವದಿ ಇವರ ಆದೇಶದಂತೆ ಅರಣ್ಯ ಇಲಾಖೆಯ ಅಧಿಕಾರಿ ಪ್ರಶಾಂತ ಗೌರಾಣಿ ಇವರ ಮಾರ್ಗದರ್ಶನದಲ್ಲಿ ಅನಂತಪೂರ ವಲಯ ಸಹಾಯಕ ಅರಣ್ಯ ಅಧಿಕಾರಿ ಶಿವಾಜಿ ಮುಂಜೆ ಇವರು ಗಡಿ ಭಾಗದಲ್ಲಿ ವಿವಿಧ ಜಾತಿಯ 7,500 ಸಸಿಗಳು ನಾಟಿ ಮಾಡಿದ್ದಾರೆ. ಸಸಿ ನಾಟಿ ಮಾಡಿದ ನಂತರ ಆ ಮರಗಳ ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಪಡೆದುಕೊಂಡು ಪ್ರತಿ ನೂರು ಮರಕ್ಕೆ ಒಬ್ಬ ವ್ಯಕ್ತಿಯನ್ನು ರಕ್ಷಣೆ ಮಾಡಲು ಆಯ್ಕೆ ಮಾಡಿದ್ದಾರೆ.
ಅನಂತಪೂರ ವಲಯದಲ್ಲಿ ಬರುವ ಖಿಳೇಗಾಂವ, ಸಂಬರಗಿ, ಶಿವನೂರ, ಅಬ್ಬಿಹಾಳ, ತೆವರಟ್ಟಿ, ಹಣಮಾಪೂರ, ಸಿದ್ದೇವಾಡಿ, ವಿಷ್ಣುವಾಡಿ, ಜಕ್ಕಾರಟ್ಟಿ, ಅರಳಿಹಟ್ಟಿ ಸುತ್ತ-ಮುತ್ತಲಿನ ಸಂಪರ್ಕ ರಸ್ತೆಗಳು ಹಾಗೂ ಶಾಲಾ ಆವರಣಗಳಲ್ಲಿ ಸಸಿಯನ್ನು ನಾಟಿ ಮಾಡಿದ್ದಾರೆ. ಶಾಲೆಯ ಆವರಣದಲ್ಲಿರುವ ಸಸಿಗಳ ರಕ್ಷಣೆ ಮಾಡಲು ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೆ ಸೂಚಿಸಿದ್ದಾರೆ. ಮರಗಳ ನಾಟಿ ಮಾಡುವ ಕೆಲವು ಮುಕ್ತಾಯ ಹಂತದಲ್ಲಿ ಬಂದಿದೆ. ಸಸಿ ನಾಟಿ ಮಾಡಿದ ನಂತರ ರಕ್ಷಣೆ ಮಾಡಲು ಸುತ್ತ ಮುತ್ತ ಕಂಟಿ ಬೇಲಿಯನ್ನು ಹೊಡೆದು ರಕ್ಷಣೆ ಮಾಡುತ್ತಿದ್ದಾರೆ.
ತಾಂವಶಿ ಗ್ರಾಮದಿಂದ ಅನಂತಪೂರ ವರೆಗೆ ರಸ್ತೆಯ ಬದಿಗೆ ಕಳೆದ ಎರಡು ವರ್ಷಗಳಿಂದ ನಾಟಿ ಮಾಡಿರುವ ಸಸಿಗಳು ಮರಗಳಾಗಿ ನಿಂತಿವೆ. ಅದರಲ್ಲಿ ಬೆವಿನ ಮರಗಳು, ಹುಣಸೇ ಮರ, ಆಲದ ಮರ ಇನ್ನೀತರ ಗಿಡಗಳನ್ನು ನಾಟಿ ಮಾಡಿ ಮರಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹೊಂದಿದ್ದಾರೆ. ನಾಟಿ ಮಾಡಿದ ನಂತರ ಪ್ರತಿ ಗ್ರಾಮಕ್ಕೆ ಮರಗಳ ಪರೀಶೀಲಣೆ ಮಾಡಲು ವಾರದಲ್ಲಿ ಒಂದು ದಿನ ಅಧಿಕಾರಿ ತಂಡ ಹೊಗುತ್ತದೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 