ಲೋಕದರ್ಶನ ವರದಿ
ಚಿಕ್ಕೋಡಿ 9: ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ ಅವರ 129ನೇ ಜಯಂತಿ ಉತ್ಸವದ ಅಂಗವಾಗಿ ಛಲವಾದಿ ಸಮಾಜದ 6ನೇ ರಾಜ್ಯ ಮಟ್ಟದ ವಧು ವರರ ಸಮಾವೇಶವನ್ನು ಫೆ. 16 ರಂದು ಪಟ್ಟಣದ ಭೀಮನಗರದ ಡಾ. ಬಿ.ಆರ್.ಅಂಬೇಡ್ಕರ ಸಮೂದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪುರಸಭೆ ಸದಸ್ಯ ಶಾಮ ರೇವಡೆ ತಿಳಿಸಿದರು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ ಸಮೂದಾಯ ಭವನದಲ್ಲಿ ಬಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ಕನರ್ಾಟಕ, ಆಂದ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಂದ ವಧು ವರರು ಭಾಗವಹಿಸಲಿದ್ದು, ಸಮಾವೇಶವು ಫೆ. 16 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ ಎಂದು ಹೇಳಿದರು.
ಅತ್ಯಂತ ಹಿಂದುಳಿದ ಛಲವಾದಿ ಸಮಾಜ ಬಾಂಧವರಿಗಾಗಿ ಈ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಭಾಗವಹಿಸುವವರು 18 ವರ್ಷ ಮಲ್ಪಟ್ಟವರಿರಬೇಕು. ಮುಂಚಿತವಾಗಿ ಹೆಸರು ನೊಂದಾಯಿಸಬೇಕು.
ಸಮಾವೇಶಕ್ಕೆ ಬರುವವರು ಪೋಟೊ ಮತ್ತು ವೈಯಕ್ತಿಕ ಮಾಹಿತಿ, ಆಧಾರ ಕಾರ್ಡ ಮತ್ತು ಶಾಲಾ ದಾಖಲಾತಿ ತೆಗೆದುಕೊಂಡು ಬರಬೇಕು ಎಂದು ಹೇಳಿದರು.
ಛಲವಾದಿ ಸಮಾಜ ಬಾಂಧವರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ಉದ್ದೇಶದಿಂದ ಮುಂಬರುವ ಏ. 14 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುವ ಗುರಿಯನ್ನು ಸಹ ಹೊಂದಲಾಗಿದೆ ಎಂದು ತಿಳಿಸಿದರು.
ಅಶೋಕ ಭಂಡಾರಕರ, ಗಿರೀಶ ಆಚನೂರ, ಅಪ್ಪಾಸಾಬ ಬ್ಯಾಳಿ, ರಾವಸಾಬ ಪಕೀರೆ, ವಿಜಯಕುಮಾರ ಹತ್ತಿ, ಸುದರ್ಶನ ತಮ್ಮನ್ನವರ, ಬಸವರಾಜ ಡಾಕೆ, ಎಂ.ಆರ್.ಮುನ್ನೋಳಿಕರ, ದುಂಡಪ್ಪ ರೇವಡೆ, ಶಂಕರಾನಂದ ದರಬಾರೆ, ನಿರಂಜನ ಕಾಂಬಳೆ, ಶ್ರೀಮಂತ ಮಾಳಗೆ ಮುಂತಾದವರು ಉಪಸ್ಥಿತರಿದ್ದರು.