6ನೇಕನ್ನಡ ಸಾಹಿತ್ಯ ಸಮ್ಮೇಳನ

ಮುಚಖಂಡಿ ಗ್ರಾಮದಲ್ಲಿ ಪ್ರಚಾರ ಸಾಮಾಗ್ರಿ ಬಿಡುಗಡೆ

ಲೋಕದರ್ಶನ ವರದಿ

ಬಾಗಲಕೋಟೆ: ಬರುವ ಅಕ್ಟೋಬರ್ 14ರಂದು ತಾಲ್ಲೂಕಿನ ಸುಕ್ಷೇತ್ರ ಮುಚಖಂಡಿ ಗ್ರಾಮದಲ್ಲಿ  ನಡೆಯುವ ತಾಲ್ಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಾಮಾಗ್ರಿಗಳನ್ನು ಮಂಗಳವಾರ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಬಿಡುಗಡೆ ಮಾಡಲಾಯಿತು.

ದೇವಸ್ಥಾನದ ಧರ್ಮದಶರ್ಿ ಪ್ರಭುಸ್ವಾಮಿ ಸರಗಣಾಚಾರಿ ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆ ಮಾಡಿದರು.ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಶೈಲ ಕರಿಶಂಕರಿ,ಗೌರವ ಕಾರ್ಯದಶರ್ಿ ಜಿ.ಕೆ.ತಳವಾರ,ತಾಲ್ಲೂಕಾ ಕಸಾಪ ಅಧ್ಯಕ್ಷ ವಿನೋದ ಯಡಹಳ್ಳಿ,ಗೌರವ ಕಾರ್ಯದಶರ್ಿ ಎಂ.ಬಿ.ಉಗರಗೋಳ,ಎಂ.ಎಸ್.ಕಲಗುಡಿ,ಗೌರವ ಕೋಶಾಧ್ಯಕ್ಷ ನಾರಾಯಣ ಯಳ್ಳಿಗುತ್ತಿ,ಸದಸ್ಯ ಬಸವರಾಜ ಶೆಟ್ಟಿ,ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಮುಕ್ಕುಪ್ಪಿ,ಜಿಲ್ಲಾ ಕಜಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ,ಪ್ರೌಢ ಶಾಲೆ ಹಾಗೂ ಪ.ಪೂ.ಮಹಾಮಂಡಳದ ಅಧ್ಯಕ್ಷ ದಯಾನಂದ ಶಿಕ್ಕೇರಿ,ಕಸಾಪ ಸಂಘಟನಾ ಕಾರ್ಯದಶರ್ಿ ಆರ್.ಸಿ.ಚಿತ್ತವಾಡಗಿ,ಶಿರೂರ ವಲಯದ ಗೌರವ ಕಾರ್ಯದಶರ್ಿ ಎಸ್.ಆರ್.ಎಮ್ಮಿಮಠ,ಕೆ.ಎಸ್.ದೇಸಾಯಿ,ಮಕ್ಕಳ ಸಾಹಿತಿ ಎಸ್.ಎಸ್.ಹಳ್ಳೂರ ಉಪಸ್ಥಿತರಿದ್ದರು.

ಈ ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲ ಕನ್ನಡ ಮನಸುಗಳು,ಕನ್ನಡ ಅಭಿಮಾನಿಗಳು,ಸಾಹಿತಿಗಳು ಕೈ ಜೋಡಿಸುವ ಮೂಲಕ ಕನ್ನಡದ ನುಡಿ ತೇರನ್ನು ಎಳೆಯಲು ಕಸಾಪ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಹಾಗೂ ತಾಲ್ಲೂಕಾಧ್ಯಕ್ಷ ವಿನೋಧ ಯಡಹಳ್ಳಿ ಮತ್ತು ಸ್ವಾಗತ ಸಮಿತಿ ಕೋರಿದೆ.

9ಬಿಜಿಕೆ8

ಬಾಗಲಕೋಟೆ ತಾಲ್ಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಾಮಾಗ್ರಿಗಳನ್ನು ಮುಚಖಂಡಿ ಗ್ರಾಮದ ಹಿರಿಯರು ಹಾಗೂ ವೀರಭದ್ರೇಶ್ವರ ದೇವಸ್ಥಾನದ ಧರ್ಮದಶರ್ಿ ಪ್ರಭುಸ್ವಾಮಿ ಸರಗಣಾಚಾರಿ ಬಿಡುಗಡೆ ಮಾಡಿದರು.