ನವದೆಹಲಿ, ಮೇ 25, ಚಿಲಿಯಲ್ಲಿ ಭಾನುವಾರ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 69,102 ಕ್ಕೇರಿದ್ದು, ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 718 ಆಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ 3,709 ಕೊರೊನಾ ಪ್ರಕರಣ ದಾಖಲವಾಗಿವೆ ಎಂದು ತಿಳಿಸಿದೆ. ಈ ಅವಧಿಯಲ್ಲಿ 45 ಸೋಂಕಿತರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಏಕಾಏಕಿ ಕೊರೊನಾ ದಾಖಲಾತಿಗಳ ಹೆಚ್ಚಳವನ್ನು ಎದುರಿಸಲು ಚಿಲಿ ತನ್ನ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಮುಂದಾಗಿದೆ.
ಭಾನುವಾರ, ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ, ಆರೋಗ್ಯ ಸಚಿವ ಜೈಮ್ ಮನಾಲಿಚ್ ಮತ್ತು ಉಪ ಆರೋಗ್ಯ ಸಚಿವ ಆರ್ಟುರೊ ಜುನಿಗಾ ಅವರೊಂದಿಗೆ ರಾಜಧಾನಿ ಸ್ಯಾಂಟಿಯಾಗೊ ಮತ್ತು ಮೆಟ್ರೋಪಾಲಿಟನ್ ಪ್ರದೇಶದ ಸೊಟೆರೊ ಹೊಸ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದರು.ಗುಣಮಟ್ಟದ ಆಸ್ಪತ್ರೆಗಳ ಮೇಲಿನ ಹೊರೆ ತಪ್ಪಿಸಲು ಸರ್ಕಾರವು ನಿರ್ಮಿಸಿರುವ ಐದು ತಾತ್ಕಾಲಿಕ ವ್ಯವಸ್ಥೆಗಳಲ್ಲಿ ಇದು ಮೊದಲನೆಯದು. ಈ ಕಾರ್ಯಕ್ಕೆ ಸರ್ಕಾರ 13.7 ಲಕ್ಷ ಯುಎಸ್ ಡಾಲರ್ ಖರ್ಚು ಮಾಡಿದ್ದು, 100 ಹಾಸಿಗೆಗಳನ್ನು ಈ ಆಸ್ಪತ್ರೆ ಹೊಂದಿದೆ. "ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಆಸ್ಪತ್ರೆ ಸ್ಥಾಪನೆ ದೊಡ್ಡ ಅನುಕೂಲ. ನಿರ್ಣಾಯಕ-ಆರೈಕೆ ಹಾಸಿಗೆಗಳಿಗೆ ನಮಗೆ ಹೆಚ್ಚು ಅವಶ್ಯಕತೆ ಮತ್ತು ಬೇಡಿಕೆಯಿದೆ, ಇದು ರೋಗಿಗಳನ್ನು ಸ್ಥಳಾಂತರಿಸುವುದನ್ನು ತಪ್ಪಿಸುತ್ತದೆ. ಮತ್ತು ಅವರ ಮನೆಗಳಿಗೆ ಮತ್ತು ಅವರ ಕುಟುಂಬಗಳಿಗೆ ಹತ್ತಿರವಿರುವಂತೆ ನೋಡಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ" ಎಂದು ಪಿನೆರಾ ಹೇಳಿದ್ದಾರೆ.