66ನೇ ಸಹಕಾರಿ ಸಪ್ತಾಹ ಧ್ವಜಾರೋಹಣ

ಲೋಕದರ್ಶನ ವರದಿ

ಬೆಟಗೇರಿ: ಗ್ರಾಮದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿಯಲ್ಲಿ ಅಖಿಲ ಭಾರತ ಸಹಕಾರಿ ಸಪ್ತಾಹ ಪ್ರಯುಕ್ತ  66ನೇ ಸಹಕಾರಿ ಸಪ್ತಾಹ ಧ್ವಜಾರೋಹಣ ಗುರುವಾರ ನ.14 ರಂದು ನಡೆಯಿತು. ಸಹಕಾರಿ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾಜರ್ುನ ನೀಲಣ್ಣವರ ಅವರು, ಸಹಕಾರಿ ಪಿತಾಮಹ ಶಿದ್ದನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಬಳಿಕ ಸಹಕಾರಿ ಧ್ವಜಾರೋಹಣ ನೆರವೇರಿಸಿದರು. 

ಮುಖ್ಯ ಕಾರ್ಯನಿವಾಹಕ ಈರಣ್ಣ ಸಿದ್ನಾಳ, ಬಸವರಾಜ ಮಾಳೇದ, ವೀರಭದ್ರ ದಂಡಿನ, ಅಪ್ಪಯ್ಯಪ್ಪ ಸಿದ್ನಾಳ, ಗುಳಪ್ಪ ಪಣದಿ, ಬಸವರಾಜ ದಂಡಿನ ಸೇರಿದಂತೆ ಸಹಕಾರಿ ಆಡಳಿತ ಮಂಡಳಿ ಸದಸ್ಯರು, ಗಣ್ಯರು, ಇತರರು ಇದ್ದರು. 

ಚೈತನ್ಯ ಸೊಸಾಯಿಟಿ: ಇಲ್ಲಿಯ ಚೈತನ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ ಶಾಖೆಯಲ್ಲಿ ಅಖಿಲ ಭಾರತ ಸಹಕಾರಿ ಸಪ್ತಾಹ ಪ್ರಯುಕ್ತ 66 ನೇ ಸಹಕಾರಿ ಸಪ್ತಾಹ ಧ್ವಜಾರೋಹಣ ಗುರುವಾರದಂದು ನಡೆಯಿತು. 

ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸಣ್ಣಪ್ಪ ಐದುಡ್ಡಿ ಅವರು, ಸಹಕಾರಿ ಪಿತಾಮಹ ಶಿದ್ದನಗೌಡ ಪಾಟೀಲ ಅವರ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಬಳಿಕ ಸಹಕಾರಿ ಧ್ವಜಾರೋಹಣ ನೆರವೇರಿಸಿದರು. ಶಾಖೆಯ ಮುಖ್ಯ ಕಾರ್ಯನಿವಾಹಕ ವಿಠಲ ನೇಮಗೌಡರ, ಬನಪ್ಪ ಚಂದರಗಿ, ಪ್ರಕಾಶ ಹಾಲಣ್ಣವರ, ಚೇತನ ಕುದರಿ ಸೇರಿದಂತೆ ಇಲ್ಲಿಯ ಸೊಸಾಯಿಟಿ ಸಲಹಾ ಸಮಿತಿ ಸದಸ್ಯರು, ಸಹಕಾರಿ ಧುರಿಣರು, ಗಣ್ಯರು, ಇತರರು ಇದ್ದರು. 

ಕನಕಶ್ರೀ ಸಂಘದಲ್ಲಿ: ಸ್ಥಳೀಯ ಕನಕ ಶ್ರೀ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದಲ್ಲಿ 66ನೇ ಸಹಕಾರಿ ಸಪ್ತಾಹ ಧ್ವಜಾರೋಹಣ ಕಾರ್ಯಕ್ರಮ ಗುರುವಾರದಂದು ಜರುಗಿತು. ಸಹಕಾರಿ ಧುರೀಣ   ಹನುಮಂತ ವಡೇರ ಅವರು, ಸಹಕಾರಿ ಪಿತಾಮಹ ಶಿದ್ದನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಬಳಿಕ ಸಹಕಾರಿ ಧ್ವಜಾರೋಹಣ ನೆರವೇರಿಸಿದರು. 

ಸಂಘದ ಮುಖ್ಯ ಕಾರ್ಯನಿವಾಹಕ ರಮೇಶ ಹಾಲಣ್ಣವರ, ಬಸವರಾಜ ಕುರಬೇಟ, ಸುರೇಶ ವಡೇರ, ಸಂಘದ ಆಡಳಿತ ಮಂಡಳಿ ಸದಸ್ಯರು, ಗಣ್ಯರು ಇದ್ದರು.

ಪಿಕೆಪಿಎಸ್ ಸಂಘದಲ್ಲಿ: ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 66 ನೇ ಸಹಕಾರಿ ಸಪ್ತಾಹ ಪ್ರಯುಕ್ತ ಸಪ್ತ ವರ್ಣದ ಸಹಕಾರಿ ಧ್ವಜಾರೋಹಣ ಕಾರ್ಯಕ್ರಮ ಗುರುವಾರದಂದು ನಡೆಯಿತು.    ಸಹಕಾರಿ ಪಿತಾಮಹ ಶಿದ್ದನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಬಳಿಕ ಸಂಘದ ಅಧ್ಯಕ್ಷ ಸದಾಶಿವ ಕುರಿ ಸಹಕಾರಿ ಧ್ವಜಾರೋಹಣ ನೆರವೇರಿಸಿದರು. ಶಾಖೆಯ ಮುಖ್ಯ ಕಾರ್ಯನಿವರ್ಾಹಕ ಅಡಿವೆಪ್ಪ ಮುರಗೋಡ, ಆಡಳಿತ ಮಂಡಳಿ ಸದಸ್ಯರು, ಸಹಕಾರಿ ಧುರಿಣರು, ಗಣ್ಯರು, ಸಿಬ್ಬಂದಿ, ಇತರರು ಇದ್ದರು.