ಸಿಯೋಲ್, ಮಾರ್ಚ್ 23,ದಕ್ಷಿಣ ಕೊರಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 64 ಹೊಸ ಕರೋನ ಪ್ರಕರಣ ದಾಖಲಾಗಿದ್ದು,ಈ ವರೆಗೆ 111 ಜನರು ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ 250 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ವರದಿ ತಿಳಿಸಿವೆ.ಹಿಂದಿನ ದಿನ, ದೇಶದಲ್ಲಿ 98 ಹೊಸ ಕರೋನವೈರಸ್ ಪ್ರಕರಣಗಳು ದಾಖಲಾಗಿವೆ. ಕೆಸಿಡಿಸಿ ಪ್ರಕಾರ, ದಕ್ಷಿಣ ಕೊರಿಯಾದಲ್ಲಿ ಈಗ 8,961 ದೃಡಪಡಿಸಿದ ಕೊರೊನಾ ಪ್ರಕರಣ ದಾಖಲಾಗಿದ್ದು ದೇಶದಲ್ಲಿ ಈವರೆಗೆ 111 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಚೇತರಿಸಿಕೊಂಡ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇದೆ 11 ರಂದು ಕರೋನವೈರಸ್ ಸಾಂಕ್ರಾಮಿಕ ಜಾಡ್ಯ ಎಂದು ಘೋಷಣೆ ಮಾಡಿತ್ತು .ಜಗತ್ತಿನಾದ್ಯಂತ ಸೋಂಕಿಗೆ ಈವರೆಗೆ 14,600 ಕ್ಕೂ ಹೆಚ್ಚು ಸಾವು ಸಂಭವಿಸಿದೆ