ರಾಣೆಬೆನ್ನೂರ- ರೆಡ್ಡಿ ಸಮಾಜದ ಆರಾಧ್ಯ ದೈವ ಸಮಾಜ ಸುಧಾರಕ ವೇಮನರು ವಿಶ್ವ ಕಂಡ ಮಹಾ ಯೋಗಿಯಾಗಿದ್ದರು . ಅವರ ಆದರ್ಶಗಳು ಇಂದಿಗೂ ಪ್ರಸ್ತುತ ವಾಗಿವೆ ಎಂದು ಕಾನೂನು ಸಂಸದೀಯ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್ ಕೆ ಪಾಟೀಲ ಹೇಳಿದರು.
ಅವರು ನಗರದ ವೇಮನ್ ವಿದ್ಯಾವರ್ಧಕ ಸಂಘದ. ಆವರಣದಲ್ಲಿ ರೆಡ್ಡಿ ಸಮಾಜದವರು ಏರಿ್ಡಸಿದ್ದ 613ನೇ ವೇಮನ್ ಜಯಂತ್ಯೋತ್ಸವ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವೇಮನರನ್ನು ಗುರುತಿಸಿದವರು ಬ್ರಿಟೀಷ್ ಅಧಿಕಾರಿಸಿ ಪಿ ಬ್ರೌನ್ ರವರು. ವೇಮನರ ಆದರ್ಶಕ್ಕೆ ಹಾಗೂ ಸರಳ ಜೀವನವನ್ನು ಬ್ರೌನ್ ರವರಿಗೆ ಅಚ್ಚು ಮೆಚ್ಚಾಗಿದ್ದರು. ಅವರ ಆದರ್ಶ ತತ್ವಗಳನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದ್ದರು ಎಂದರು. ವೇಮನರನ್ನು ಹುಚ್ಚು ವೇಮಣ್ಣ ಅಂತಾ ಕರೆಯುತ್ತಾರೆ, ವೇಮನರು ಸ್ವೇಚ್ಚಾಚಾರಕ್ಕೆ ಇಳಿದಾಗ ಆತನಿಗೆ ಮನುಕುಲಕ್ಕೆ ತಂದವರು ಮಹಾ ಸಾದ್ವಿ ಮಲ್ಲಮ್ಮನವರಾಗಿದ್ದಾರೆ. ಮಲ್ಲಮ್ಮನವರ ದಾರೀದೀಪದಿಂದ ವೇಮನರ ಜೀವನ ಚರಿತ್ರೆಯೇ ಬದಲಾಯಿತು.ಹಿರಿಯರು ಹೇಳತಿದ್ರು ರೆಡ್ಡಿಗರಿಗೆ ಹೊಲ ತೋರಿಸಬಾರದು, ವಡ್ಡರಿಗೆ ಗುಡ್ಡ ತೋರಿಸಬಾರದು ಅಂತಾರೆ. ಅನೇಕರು ದೊಡ್ಡ ಜಮೀನದಾರರು ಇದ್ದಾರೆ. ನ್ಯಾಯಕ್ಕಾಗಿ ಅಶಕ್ತನ ಜೊತೆ ನಿಲ್ಲುವುದು ನಮ್ಮವರ ಗುಣ. ಅದು ವೇಮನರಿಂದ ಬಂದಿದ್ದು ಎಂದರು. ಇತರೆ ಸಮುದಾಯದವರ ಆಶೀರ್ವಾದ ಮಾಡಿದ್ದರಿಂದ ರೆಡ್ಡಿ ಸಮುದಾಯದವರು ಎಮ್ ಎಲ್ ಎ. ಗಳಾಗಿ ಮಂತ್ರಿಗಳಾಗಿದ್ದಾರೆ. ಮಲ್ಲಮ್ಮ ರಾಜ ಮನೆತನದವರು. ವೇಮನ ಯೋಗಿ ಮಾಡಲು ಮೂಗು ಬಟ್ಟು ಕೊಟ್ಟವರು ಎಂದರು.ವೇಮನರ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ರೆಡ್ಡಿ ಸಮಾವೇಶವನ್ನು ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮಾಡಿದಾಗ ದೇವೇಗೌಡರು ಇಂತಹ ಒಗ್ಗಟ್ಟಿನ ಸಮುದಾಯ ನೋಡಿಲ್ಲ ಅಂತಾ ಹೇಳಿದರು.
ವೇಮನರದ್ದು ಮತ್ತು ಹೇಮರಡ್ಡಿ ಮಲ್ಲಮ್ಮನವರದ್ದು ಸರಕಾರದಿಂದ ಜಯಂತಿ ಆಚರಣೆ ಮಾಡಲಾಗುತ್ತಿದೆ. ನಗರದಲ್ಲಿ ವೇಮನ ಭವನ ಮಾಡುವ ಕನಸಿದ್ದು, ಈ ಹಿನ್ನಲೆಯಲ್ಲಿ ವೇಮನ ವಿದ್ಯಾವರ್ಧಕ ಸಂಘಕ್ಕೆ ಮೊದಲನೆಯ ಕಂತಾಗಿ 50 ಲಕ್ಷ ಅನುದಾನ ಕೊಡುವುದಾಗಿ ಭರವಸೆ ನೀಡಿದರು.ಮುಂದಿನ ವೇಮನ ಜಯಂತಿಗೆ ನೂತನ ವೇಮನ ಕಲ್ಯಾಣ ಮಂಟಪದಲ್ಲಿ ಆಗಬೇಕು. ವೇಮನ ಜಯಂತಿ ಪ್ರೇರಣೆ ಪಡೆದು ನಾಳೆಯಿಂದನೇ ಕಲ್ಯಾಣ ಮಂಟಪದ ಕೆಲಸ ಪ್ರಾರಂಭ ಮಾಡಬೇಕು. ಸರಕಾರದ ಹಣದಿಂದ ಮತ್ತು ನಮ್ಮ ಶ್ರಮದಿಂದ ಕಲ್ಯಾಣ ಮಂಟಪ ಆಗಬೇಕು. ಈ ವೇದಿಕೆಯಲ್ಲಿ ನಾಲ್ಕು ಪುಸ್ತಕ ಬಿಡುಗಡೆಗೊಳಿಸಿದ್ದು ಸ್ವಾಗತಾರ್ಹ. ಈ ಸಮಾಜವನ್ನು 3 ಬಿ ವರ್ಗಕ್ಕೆ ಸೇರಿಸಬೇಕು ಅನ್ನೊದು ಸಮಾಜದ ಬಹು ವರ್ಗಗಳ ಬೇಡಿಕೆ ಇದೆ. ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರಿ.ಜಾತಿ ಮೇಲೆ ಶಕ್ತಿ ಬೆಳೆಸಿಕೊಂಡವರಲ್ಲ ನಾವು. ಎಲ್ಲರಿಂದ ಗೌರವ ಸಿಗಬೇಕಾದರೆ ಹೇಮರಡ್ಡಿ ಮಲ್ಲಮ್ಮ ಮತ್ತು ವೇಮನರ ತತ್ವ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದರು. ಉಪಸಭಾಪತಿ ರುದ್ರ್ಪ ಲಮಾಣಿ ಮಾತನಾಡಿ ರೆಡ್ಡಿ ಸಮುದಾಯದವರು ಎಲ್ಲರೂ ಮನಸ್ಸು ಮಾಡಿದರೆ ಕಲ್ಯಾಣ ಮಂಟಪ ಕಟ್ಟುವುದು ದೊಡ್ಡದಲ್ಲ. ಹಾವೇರಿ ನಗರದಲ್ಲಿ ರೆಡ್ಡಿ ಸಮುದಾಯಕ್ಕೆ ಒಂದು ಸೈಟನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ದಾನ ಮಾಡುವ ಮನಸ್ಸು ವೇಮನರವರಿಗಿತ್ತು. .ಅನೇಕ ಜನ ಹಿರಿಯರು ಸಮುದಾಯದ ಕಲ್ಯಾಣ ಮಂಟಪ ಕಟ್ಟುವ ಆಸೆ ಇತ್ತು. ಒಂದು ಕೋಟಿ ಶಾಸಕರ ಅನುಧಾನ ಮತ್ತು ಕೂಡಿಟ್ಟ ಹಣವನ್ನು ಡಿ ಸಿ ಯವರ ಮುಖಾಂತರ ವೇಮನ ವಿದ್ಯಾವರ್ಧಕ ಸಂಘಕ್ಕೆ ತಲುಪಿಸುವೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ರುಕ್ಮಿಣಿ ಸಾವಕಾರ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಮನೋಜ ಸಾವಕಾರ, ಶಿಗ್ಗಾವಿ ಜಾನಪದ ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ. ಡಾ. ಟಿ. ಎಂ. ಭಾಸ್ಕರ್ , ಪ್ರಶಾಂತರೆಡ್ಡಿ ಯರೆಕುಪ್ಪಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸಮಾಜದ ಮುಖಂಡರು ಮತ್ತಿತರರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ವೇಮನರ ಭಾವಚಿತ್ರದ ಮೆರವಣೆಗೆಯು ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡು ನಗರದ ಪ್ರಮಖ ಬೀದಿಗಳಲ್ಲಿ ಸಂಚರಿಸಿತು.