ಬೆಳಗಾವಿ : ಜಿಲ್ಲೆಯ ಖಾನಾಪೂರ ತಾಲೂಕಿನ ಗೋಲಹಳ್ಳಿ ವಲಯದ ಅರಣ್ಯಾಧಿಕಾರಿಗಳು ಬೇಟೆಯಾಡಿದ್ದ ಜಿಂಕೆ ಸಮೇತ ಇಬ್ಬರು ಆರೋಪಿತರನ್ನು ಹಾಗೂ ಅದೇ ಪ್ರದೇಶದಲ್ಲಿ ಇನ್ನೋಂದು ಪ್ರಕರಣದಲ್ಲಿ ನಾಲ್ವರು ಆರೋಪಿತರನ್ನು ವಶಕ್ಕೆ ಪಡೆದಿದ್ದು, ಹೀಗೆ ಒಟ್ಟು ಎರಡು ಪ್ರಕರಣಗಳಲ್ಲಿ 6 ಜನರನ್ನು ವಶಕ್ಕೆ ಪಡೆದಿದ್ದಾರೆ.
ಖಾನಾಪೂರ ತಾಲೂಕಿನ ಗೋಲಹಳ್ಳಿ ಅರಣ್ಯ ವಲಯದಲ್ಲಿ ಜಿಂಕೆ ಬೇಟೆಯಾಡುತ್ತಿದ್ದ ಎರಡು ಪ್ರಕರಣಗಳಲ್ಲಿ ಒಟ್ಟು ಆರು ಜನ ಬೇಟೆಗಾರರನ್ನು ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಬೇಟೆಯಾಡಿದ ಜಿಂಕೆ ಹಾಗೂ ಅದಕ್ಕೆ ಬಳಸಿದ್ದ ದ್ವಿಚಕ್ರವಾಹನ ಮತ್ತು ಕೆಲವು ಸಾಮಗ್ರಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ 6 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಅಧಿಕಾರಿಗಳು ಈ ಕುರಿತು ತನಿಖೆ ತೀವ್ರಗೋಲಿಸಿದ್ದಾರೆ ಎನ್ನಲಾಗಿದೆ.
ಖಾನಾಪೂರ ತಾಲೂಕಿನಲ್ಲಿ ಜಿಂಕೆಗಳ ಬೇಟೆಯಾಡುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ತೀವ್ರ ನಿಗಾ ವಹಿಸಿ ಅರಣ್ಯ ಜೀವಿಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕಿದೆ ಎನ್ನುವದು ಖಾನಾಪೂರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರ ಒತ್ತಾಯವಾಗಿದೆ.