ನೌಕರರ ಭವಿಷ್ಯ ನಿಧಿಗೆ ಫೆಬ್ರವರಿಯಲ್ಲಿ 6.91 ಲಕ್ಷ ಹೊಸ ಚಂದಾದಾರರ ಸೇರ್ಪಡೆ

ನವದೆಹಲಿ, ಏಪ್ರಿಲ್ 24ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿಯಂತೆ ಈ ವರ್ಷದ ಫೆಬ್ರವರಿಯಲ್ಲಿ ನೌಕರರ ಭವಿಷ್ಯ ನಿಧಿ(ಇಪಿಎಫ್‍)ಯ ಹೊಸ ಚಂದಾದಾರರ ಸಂಖ್ಯೆ 6,91,273ರಷ್ಟಿದೆ.ಸೆಪ್ಟೆಂಬರ್ 2017 ರಿಂದ ಫೆಬ್ರವರಿ 2020 ರವರೆಗೆ, ಇಪಿಎಫ್ ಯೋಜನೆಗೆ 3,29,17,421 ಹೊಸ ಚಂದಾದಾರರು ಸೇರ್ಪಡೆಯಾಗಿದ್ದಾರೆ ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.ಇದೇ ಅವಧಿಯಲ್ಲಿ ಒಟ್ಟು 3,74,70,897 ಹೊಸ ಚಂದಾದಾರರು ನೌಕರರ ರಾಜ್ಯ ವಿಮಾ ಯೋಜನೆಗೆ(ಇಎಸ್ಐ) ಸೇರ್ಪಡೆಯಾಗಿದ್ದಾರೆ.
ಇಎಸ್‌ಐನಲ್ಲಿ ಹೊಸದಾಗಿ ನೋಂದಾಯಿತ ನೌಕರರ ಸಂಖ್ಯೆ ಮತ್ತು ತಿಂಗಳಲ್ಲಿ ದೇಣಿಗೆ ನೀಡುತ್ತಿರುವವರ ಸಂಖ್ಯೆ 11,56,583ರಷ್ಟಿದೆ. ಸೆಪ್ಟೆಂಬರ್ 2017 ರಿಂದ ಫೆಬ್ರವರಿ 2020 ರವರೆಗೆ ರಾಷ್ಟ್ರೀಯ ಪಿಂಚಣಿ ಯೋಜನೆಗೆ 18,49,113 ಹೊಸ ಚಂದಾದಾರರು ಸೇರ್ಪಡೆಯಾಗಿದ್ದಾರೆ.ಫೆಬ್ರವರಿಯಲ್ಲಿ ಪಾವತಿ ಮಾಡುತ್ತಿರುವವರ ಹೊಸ ಚಂದಾದಾರರ ಸಂಖ್ಯೆ 60,002ರಷ್ಟಿದೆ. ಇದು ರಾಜ್ಯ ಸರ್ಕಾರಗಳು ಮತ್ತು ಸರ್ಕಾರೇತರ ನೌಕರರನ್ನು ಒಳಗೊಂಡಿದೆ.ಈ ವರದಿಯು ಔಪಚಾರಿಕ ವಲಯದಲ್ಲಿನ ಉದ್ಯೋಗ ಮಟ್ಟಗಳ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಒದಗಿಸುತ್ತದೆ.  ಇಪಿಎಫ್ ಯೋಜನೆ, ಇಎಸ್ಐ ಯೋಜನೆ ಮತ್ತು  ಎನ್‍ಪಿಎಸ್‍ ಒಳಗೊಂಡಂತೆ ಮೂರು ಪ್ರಮುಖ ಯೋಜನೆಗಳಡಿ ಚಂದಾದಾರರಾಗಿರುವವರ ಸಂಖ್ಯೆ ಬಳಸಿ ಸೆಪ್ಟೆಂಬರ್ 2017ರ ಅವಧಿಯನ್ನು ಒಳಗೊಂಡಂತೆ ಸಚಿವಾಲಯ ಏಪ್ರಿಲ್‍ 2018ರಿಂದ ಔಪಚಾರಿಕ ವಲಯದ ಉದ್ಯೋಗ ಸಂಬಂಧಿತ ಅಂಕಿ-ಅಂಶಗಳನ್ನು ಹೊರತರುತ್ತಿದೆ.