5ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಸಿಂದಗಿ : 5ನೇ ಸಿಂದಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಮಲ್ಲಿಕಾಜರ್ುನ ವೇದಿಕೆಯಲ್ಲಿ ಸಮ್ಮೇಳನವನ್ನು ಕೇಂದ್ರ ಸಾಹಿ


ಲೋಕದರ್ಶನ ವರದಿ

ದಿ.02ರಂದು ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಲಗಂಗಾದೇವಿ ಮಹಾಮಂಟಪದಲ್ಲಿ ಹಮ್ಮಿಕೊಂಡ 5ನೇ ಸಿಂದಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಮಲ್ಲಿಕಾಜರ್ುನ ವೇದಿಕೆಯಲ್ಲಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಕನರ್ಾಟಕ ಸರಕಾರ ಎಡಬಿಡಂಗಿ ಕಾಯ್ದೆ ತೆಗೆಯುತ್ತಿದೆ. ಕನ್ನಡವನ್ನು ಕಟ್ಟುವ ಸಂದರ್ಭದ ಇಂದಿನ ದಿನಮಾನಗಳಲ್ಲಿ ಮಕ್ಕಳು ಕಡಿಮೆ ಇರುವ ಶಾಲೆಗಳನ್ನು ಮುಚ್ಚುವ ಕಾಯ್ದೆ ಮಾಡಿತ್ತು. ಅದಕ್ಕೆ ಹೋರಾಟ ಮಾಡಿದಾಗ ಹಿಂದಕ್ಕೆ ಪಡೆಯಿತು. ಇಂತ ಕಾಯ್ದೆಗಳನ್ನು ಎಂದೂ ತರಬಾರದು. ಪಕ್ಕದ ಮಹಾರಾಷ್ಟ್ರ ಸರಕಾರ ಕಡಿಮೆ ಇರುವ ಕನ್ನಡ ಶಾಲೆಗಳನ್ನು ನಡೆಸುತ್ತಿದೆ. ಆದರೆ ಕನರ್ಾಟಕ ಸರಕಾರ ಕಡಿಮೆ ಮಕ್ಕಳು ಇರುವ ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸ ಮಾಡುವ ಬದಲು ಕನ್ನಡ ಶಾಲೆಗಳನ್ನು ಕಾನ್ವೆಂಟ್ ಮಟ್ಟಕ್ಕೆ ಅಭಿವೃದ್ಧಿ ಮಾಡುವ ಕೆಲಸ ಮಾಡಬೇಕು ಎಂದರು.

ಪ್ರಸ್ತುತ ದಿನದಲ್ಲಿ ಕನ್ನಡಕ್ಕೆ ಕುತ್ತು ಬಂದಿದೆ. ಕನ್ನಡ ಶಾಲೆಗಳ ಕಡಿಮೆಯಾಗಿ ಆಂಗ್ಲ ಭಾಷೆ ಶಾಲೆಗಳು ಹೆಚ್ಚುತ್ತಿವೆ. ಬೇರೆ ಭಾಷೆಯನ್ನು ದ್ವೇಷಿಸುವುದು ಬೇಡ. ಮೊದಲು ನಾವು ಕನ್ನಡ ಬೆಳೆಸೋಣ. ಕನ್ನಡ ಅನ್ನದ ಭಾಷೆಯಾಗಲಿ. ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಕನ್ನಡವನ್ನು ಕನ್ನಡಿಕರಿಸುವ ಕೆಲಸ ಮಾಡಬೇಕು. ಉದ್ಯೋಗ ನೀಡುವ ಪ್ರತಿ ಸ್ಪಧರ್ಾತ್ಮಕ ಪರೀಕ್ಷೆ, ಉದ್ಯೋಗ ನೀಡುವ ಶಿಕ್ಷಣದಲ್ಲಿ ಕನ್ನಡ ಭಾಷೆ ಕನ್ನಡಾಯವಾಗಬೇಕು. ಕನ್ನಡ ವಿಷಯದಲ್ಲಿ 100 ಅಂಕಗಳ ಪರೀಕ್ಷೆ ನಡೆಯಬೇಕು ಆಗ ಕನ್ನಡಿಗರಿಗೆ ನೆಲೆಸಿಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತ ಪಡೆಸಿದರು.

ಯುವಕರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಆಗ ಸಾಹಿತ್ಯ ರಚನೆ ಮಾಡಲು ಸಾಧ್ಯ. ಪಂಪನ ವಾರಸುದಾರರಾದ ನಾವು ಪಂಪನಿಂದ ಇಂದಿನ ಸಾಹಿತಿಗಳ ಕೃತಿಗಳನ್ನು ಅಧ್ಯಯನ ಮಾಡಬೇಕು. ಏನು ಬೇಕಾದರು ಬರೆದರೆ ಸಾಹಿತ್ಯ ವಾಗುತ್ತದೆ ಎಂಬ ಭ್ರಮೆಯಿಂದ ನಾವು ಹೊರಬರಬೇಕು. ಹೃದಯವಂತಿಕೆಯಿಂದ ಬರೆದ ಸಾಹಿತ್ಯ ಸೃಷ್ಠಿಯಾಗಬೇಕು. ಕನ್ನಡ ಭಾಷೆ ಪ್ರಫುಲ್ಲವಾಗಿ ಬೆಳೆಸುವ ಸಾಹಿತ್ಯ ಸೃಷ್ಠಿಯಾಗಬೇಕು. ಆಧುನಿಕ ಕನ್ನಡ ಭಾಷೆಯಲ್ಲಿ ಪರಿಭಾಷೆ ಬದಲಾಯಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ತೋಟಗಾರಿಕೆ ಇಲಾಖೆ ಸಚಿವ ಎಂ.ಸಿ.ಮನಗೂಳಿ ಮಾತನಾಡಿ, ಸಿಂದಗಿ ತಾಲೂಕು ಬರಗಾಲ ಪ್ರದೇಶವಾದರೂ ಸಾಹಿತ್ಯ ಕೃಷಿಗೆ ಬರಗಾಲವಿಲ್ಲ. ಇಲ್ಲಿನ ಸಾಹಿತಿಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷೆ ಉಳಿದಿದ್ದು ಗ್ರಾಮೀಣ ಮಹಿಳೆಯರಿಂದ.  ಗ್ರಾಮೀಣ ಮಟ್ಟದಲ್ಲಿ ಇಂಥ ಕಾರ್ಯಕ್ರಮಗಳು ನಡೆಯುವದರಿಂದ ಭಾಷೆ ಅಸ್ಥಿತ್ವಕ್ಕೆ ಉಳಿಯಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ನಿಕಟಪೂರ್ವ ಸವರ್ಾಧ್ಯಕ್ಷ ಸಾಹಿತಿ ಡಾ.ಚನ್ನಪ್ಪ ಕಟ್ಟಿ ಅವರು 5ನೇ ಸಿಂದಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷ ಹಿರಿಯ ಸಾಹಿತಿ ಡಾ.ಬಿ.ಆರ್.ನಾಡಗೌಡ ಅವರಿಗೆ ನಾಡಧ್ವಜವನ್ನು ಹಸ್ತಾಂತರಿಸಿದರು. 

ಸಮ್ಮೇಶಳನದ ಸವರ್ಾಧ್ಯಕ್ಷ ಹಿರಿಯ ಸಾಹಿತಿ ಡಾ.ಬಿ.ಆರ್.ನಾಡಗೌಡ, ನಿಕಟಪೂರ್ವ ಸವರ್ಾಧ್ಯಕ್ಷ ಡಾ.ಚನ್ನಪ್ಪ ಕಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ಶಾಂತಗಂಗಾಧರ ಮಹಾಸ್ವಾಮಿಗಳು, ಮುನಿಂದ್ರ ಶ್ರೀಗಳು, ರಾಜಯೋಗಿನಿ ಬ್ರಹ್ಮಕುಮಾರಿ, ಕಸಾಪ ಜಿಲ್ಲಾ ಅಧ್ಯಕ್ಷ ಮಲ್ಲಿಕಾಜರ್ುನ ಯಂಡಿಗೇರಿ ಮಾತನಡಿದರು.

ಇದೇ ಸಂದರ್ಭದಲ್ಲಿ ರಾ.ಸಿ.ವಾಡೇದ ಅವರ ಅಜ್ಜಿ ಆಸೆ, ಎಂ.ಎನ್.ಚಪ್ಪರಬಂದ ಅವರ ಓನಲ್ಲೆ ನಾನಿನ್ನ ಬಲ್ಲೆ ಕೃತಿಗಳು ಹಾಗೂ ಸಂಸ್ಕೃತಿ ಸಂಪನ್ನರು, ಸಂಸ್ಕೃತಿ ಸಿರಿ, ಸಂಸ್ಕೃತಿ ಸೌರಭ ಸ್ಮರಣ ಸಂಚಿಕೆಗಳು ಬಿಡುಗಡೆಯಾದವು.

ತಾಪಂ ಉಪಾಧ್ಯಕ್ಷೆ ಲಲಿತಾಬಾಯಿ ದೊಡಮನಿ, ತಾಪಂ ಸದಸ್ಯರಾದ ನಿಂಗಣ್ಣ ಗೊಬ್ಬೂರ, ಗ್ರಾಪಂ ಅಧ್ಯಕ್ಷ ಶ್ರೀಶೈಲ ಬಿರಾದಾರಾ, ಉಪಾಧ್ಯಕ್ಷೆ ಹೇಮಾವತಿ ಓಲೆಕಾರ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಬಿ.ಆರ್.ಬನಸೋಡೆ, ಜಿಲ್ಲಾ ಪ್ರಧಾನಸಂಚಾಲಕ ಚಂದ್ರಶೇಖರ ದೇವರೆಡ್ಡಿ, ಶರಣಪ್ಪ ವಾರದ, ಕ್ಷೇತ್ರಸಮನ್ವಯಾಧಿಕರಿ ಸಂತೋಷಕುಮಾರ ಬೀಳಗಿ, ದೈಹಿಕ ಶಿಕ್ಷಣಾಧಿಕಾರಿ ಎ.ಎಂ.ಬಿರಾದಾರ, ಶಿಕ್ಷಕರ ಸಂಘದ ಪ್ರತಿನಿಧಿ ಎಸ್.ಎಂ.ಚಿಗರಿ, ಸಿದ್ದು ಬುಳ್ಳಾ, ಶಂಕರ ಬಗಲಿ, ಅಶೋಕ ತೆಲ್ಲೂರ, ಆರ್.ಎಸ್.ಬಿರಾದಾರ ಅವರು ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.

ಹಿರಿಯ