ಸಿಂದಗಿ 01: ತಾಲೂಕಿನ ಬೂದಿಹಾಳ ಪಿ.ಎಚ್.ಗ್ರಾಮದಲ್ಲಿ ದಿ.31ರಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಹಮ್ಮಿಕೊಂಡ 5ನೇ ಸಿಂದಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಎಲ್ಲಿ ನೋಡಿದಲ್ಲಿ ಕನ್ನಡ ಜಾತ್ರೆಯ ಸಂಭ್ರಮ. ನಾಡದೇವಿ ಭಾವಚಿತ್ರದೊಂದಿಗೆ ಸಮ್ಮೇಳನದ ಸವರ್ಾಧ್ಯಕ್ಷ ಹಿರಿಯ ಸಾಹಿತಿ ಡಾ.ಬಿ.ಆರ್.ನಾಡಗೌಡ ಅವರ ಮೆರವಣಿಗೆ ಜರುಗಿತು. ಮಾರ್ಗದುದ್ದಕ್ಕೂ ತಳಿಲು ತೋರಣದಿಂದ ಅಲಂಕರಿಸಿ ನಾಡದೇವಿ ಭಾವಚಿತ್ರಕ್ಕೆ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಗ್ರಾಮಸ್ಥರು ಸ್ವಾಗತ ಕೋರಿದರು.
ಬಿಜೆಪಿ ಹಿರಿಯ ಧುರಿಣ ಚಂದ್ರಶೇಖರ ನಾಗೂರ ಅವರು ಮೆರವಣಿಗೆ ಚಾಲನೆ ನೀಡಿದರು. ಶಾಂತಗಂಗಾಧರ ಸ್ವಾಮಿಗಳು, ಶೈಲಶ್ರೀ ಪಟ್ಟಣಶೆಟ್ಟಿ, ಶಿಲ್ಪಾ ಕುದರಗೊಂಡ, ಶಾರದಾ ಮಂಗಳೂರ, ಸಿದ್ದಣ್ಣ ಚೌಧರಿ ಕನ್ನೊಳ್ಳಿ ಸೇರಿದಂತೆ ಕಸಾಪ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು ಭಾಗವಹಿಸಿದ್ದರು.
ಮೆರವಣಿಗೆ ಉದ್ದಕ್ಕೂ ಕೊಕಟನೂರ ಗ್ರಾಮದ ಮಾರುತಿ ಕಲಾ ತಂಡ, ಹಂದಿಗನೂರ ಗ್ರಾಮದ ಕಸ್ತೂರಿಬಾ ವಸತಿ ಶಾಲೆ ಮಕ್ಕಳ ಡೊಳ್ಳು ಕುಣಿತ ತಂಡ, ಕಕ್ಕಳಮೇಲಿ ತಾಂಡಾ ಮಹಿಳಾ ತಂಡ ಸೇರಿದಂತೆ ವಿವಿಧ ಕಲಾ ತಂಡಗಳು ಕಲಾ ಪ್ರದರ್ಶನ ಮಾಡಿದರು. 250ಕ್ಕು ಹೆಚ್ಚು ಮಹಿಳೆಯರು ಕುಂಭ ಹೊತ್ತು ಕುಂಭ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.