ಹುಬ್ಬಳ್ಳಿ 20: ಯೋಗವು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಸಾಧನವಾಗಿದ್ದು ಪ್ರತಿಯೊಬ್ಬರು ತಮ್ಮ ಜೀವನ ಶೈಲಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲರವರು ಕರೆ ನೀಡಿದರು.
ಡಾ. ಆರ್. ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ "ಯೋಗ ಜಾಗೃತಿ ನಡಿಗೆ ಜಾಥಾ" ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯೋಗಾಭ್ಯಾಸ ಮಾಡಲು ಲಿಂಗ, ಜಾತಿ, ವಯಸ್ಸಿನ ಭೇದವಿಲ್ಲ ಆಸಕ್ತಿಯಿಂದ ಪತ್ರಿಯೊಬ್ಬರೂ ಮುಕ್ತ ಮನಸ್ಸಿನಿಂದ ಯೋಗಾಭ್ಯಾಸ ಮಾಡಬಹುದೆಂದರು.
ಜಿಲ್ಲಾಧಿಕಾರಿ ದೀಪಾ ಚೋಳನ್ರವರು ಮಾತನಾಡಿ ಯೋಗಾಭ್ಯಾಸವು ಒಂದೇ ದಿನಕ್ಕೆ ಸೀಮಿತ ಮಾಡದೇ ಪ್ರತಿದಿನ ಯೋಗ ಮಾಡುವದರಿಂದ ಈಗಿನ ಒತ್ತಡ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ನುಡಿದರು. ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಬಿ. ಸಿ. ಸತೀಶರವರು ಉಪಸ್ಥಿತರಿದ್ದರು.
ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಈ ಬಾರಿ ಶಿಕ್ಷಣ ಇಲಾಖೆಯ 3000 ಕ್ಕೂ ಹೆಚ್ಚು ಶಾಲಾಮಕ್ಕಳು ಶಿಕ್ಷಕರು ; 2000 ಕ್ಕೂ ಹೆಚ್ಚು ವೈದ್ಯರು, ಯೋಗಪಟುಗಳು, ವಿವಿಧ ಸಂಘಸಂಸ್ಥೆ ಸದಸ್ಯರು, ಸಾರ್ವಜನಿಕರು ಭಾಗವಹಿಸಿ ಯೋಗ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ದಾಖಲೆ ನಿರ್ಮಿಸಿದರು.
ಯೋಗ ಜಾಗೃತಿ ಜಾಥಾದಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಸಂಗಮೇಶ. ಕಲಹಾಳ, ಧಾರವಾಡ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಖಾಜಿಯವರು, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿ ಸುಚೇತಾ. ನೆಲವಿಗಿ, ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾದ ಡಾ.ಬಿ.ಪಿ.ಪೂಜಾರ, ಪತಂಜಲಿ ಯೋಗ ಸಮಿತಿಯ ಭವರಲಾಲ. ಅಯ್ಯರ್ , ಭಾರತ ವಿಕಾಸ ಪರಿಷತ್ತಿನ ಜಗದೀಶ. ಮಳಗಿ, ಭಾರತ ಸ್ವಾಭಿಮಾನ ಟ್ರಸ್ಟನ ಎಂ.ಡಿ.ಪಾಟೀಲ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬಳಗದ ಬ್ರಹ್ಮಕುಮಾರಿ ರೋಹಿಣಿ ಅಕ್ಕಾ ಹಾಗೂ ಮಾತಾಜಿಯವರು, ರೆಡ್ಕ್ರಾಸ್ ಸಂಸ್ಥೆಯ ಮುಖ್ಯಸ್ಥರಾದ ಡಾ.ವಿ.ಡಿ ಕರ್ಪುರಮಠ, ಭಾರತ ಸೇವಾದಳದ ಕಾಶೀನಾಥ. ಹಂದ್ರಾಳ ಮತ್ತು ವಿವಿಧ ಸಂಘ ಸಂಸ್ಥೆಗಳ ಯೋಗಸಾಧಕರು, ಪದಾಧಿಕಾರಿಗಳು; ಗುತ್ತಲ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಹೊಂಬಳ, ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕರು ಎನ್.ಎಸ್.ಎಸ್. ವಿದ್ಯಾರ್ಥಿಗಳು, ಸ್ಕೌಟ್ಸ & ಗೈಡ್ಸ ಮಕ್ಕಳು, ಎ.ಎಫ್.ಆಯ್ ಅಧ್ಯಕ್ಷರಾದ ಡಾ. ರವೀಂದ್ರ, ಡಾ. ಹುದ್ದಾರ, ಡಾ. ಮಾಂಡ್ರೆ ಹಾಗೂ ಸದಸ್ಯರು, ನಿಮಾ ಖಾಸಗಿ ವೈದ್ಯಕೀಯ ಸಂಸ್ಥೆಯ ಡಾ. ತ್ಯಾಗರಾಜ ಹಾಗೂ ವೈದ್ಯರುಗಳು, ಎನ್.ಜಿ.ಓ ಸದಸ್ಯರು, ಪೋಲಿಸ್ ಇಲಾಖೆ ಅಧಿಕಾರಿಗಳು-ಆರಕ್ಷಕರು ಭಾಗವಹಿಸಿದ್ದರು.
ವೈದ್ಯಾಧಿಕಾರಿಗಳಾದ ಡಾ. ಸುಮಂಗಲಾ, ಡಾ. ವೀರಭದ್ರಪ್ಪಾ. ಮುಸರಿ, ಡಾ. ಶಂಕರ. ಹಿರೇಮಠ ಡಾ. ಮಲ್ಲಿಕಾರ್ಜುನ . ಎ. ಎಸ್, ಡಾ. ಹೇಮಂತ. ಅರಕೇರಿ, ಡಾ. ಬಿ. ವಿ. ರಜಪೂತ, ಡಾ. ಶಿವಪ್ಪ. ಮಾದರ, ಡಾ. ಬಿ. ಎಸ್. ಶಿವನಗೌಡ, ಡಾ. ಸವಿತಾ. ಹುಣಸಿಮರದ, ಡಾ. ಆಶಾ. ಎನ್, ಡಾ. ಬಿ. ಎಸ್. ಆದಿ, ಡಾ. ಅಮೃತಾ. ಪಾಸ್ತೆ, ಡಾ. ಫಾತೀಮಾ. ಮೂಲಿಮನಿ, ಡಾ. ನಿಂಗಪ್ಪಾ. ಕಿನ್ನಾಳ, ಡಾ. ಉಗಾರ, ಖಾಸಗಿ ಆಯುರ್ವೇದ ಕಾಲೇಜು ಪ್ರಾಧ್ಯಾಪಕರು ವಿದ್ಯಾರ್ಥಿಗಳು ಹಾಗೂ ಎಲ್ಲ ಆಯುಷ್ ಸಿಬ್ಬಂದಿಯವರು ಪಾಲ್ಗೊಂಡಿದ್ದರು.