52ನೇ ಇಂಜಿನಿಯರಿಂಗ್ ದಿನ ಆಚರಣೆ

ಬೆಳಗಾವಿ, 15: ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ 52ನೇ ಇಂಜಿನಿಯರ್ಸ್ ದಿನ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಅವಿಷ್ಕಾರ ಡಿಸೈನ್ ತಿಂಕರ್ಸ್ ಲ್ಯಾಬ್ನ್ನು ಡಾ. ಸಾವಳಗೇಶ್ವರ ದೇವರು ಮತ್ತು ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಇಂಜಿನಿಯರ ಮಹೇಶ ಹಿರೇಮಠ ಇವರಿಂದ ಉದ್ಘಾಟಿಸಲಾಯಿತು.

ಡಾ. ಸಾವಳಗೇಶ್ವರ ದೇವರು ತಮ್ಮ ಆಶೀರ್ವಚನದಲ್ಲಿ ಎಲ್ಲ ವಿದ್ಯಾಥರ್ಿಗಳ ಕುರಿತು ಇಂಜಿನಿಯರ ವಿಶ್ವೇಶ್ವರಯ್ಯ ಅವರನ್ನು ಆದರ್ಶ ವ್ಯಕ್ತಿಯನ್ನಾಗಿ ಸ್ವೀಕರಿಸಿ ಅವರ ತತ್ವಗಳನ್ನು ಪಾಲಿಸಬೇಕೆಂದು ಸಲಹೆ ನೀಡಿದರು.