ಲೋಕದರ್ಶನವರದಿ
ರಾಣೇಬೆನ್ನೂರು: ಏ.21: ಸಮಾಜದಲ್ಲಿ ಮತ್ತು ದೇಶದಲ್ಲಿ ಅವಘಡಗಳು ಸಂಭವಿಸುವುದು ಆಕಸ್ಮಿಕ ಇವುಗಳು ಯಾವುದು ಪೂರ್ವನಿಯೋತವಲ್ಲ. ಕೊರೊನಾ ವೈರಸ್ ಹಾವಳಿಯಿಂದಾಗಿ ದೇಶ ಮತ್ತು ವಿಶ್ವವೇ ತತ್ತರಿಸಿ ಹೋಗಿದೆ. ಜಿಲ್ಲೆಯ ಜನರ ಅದೃಷ್ಠವೋ ಏನೋ ನಮ್ಮ ಭಾಗಕ್ಕೆ ವೈರಸ್ ಸೊಂಕು ಪ್ರಕರಣಗಳು ಸಂಭಿಸಿಲ್ಲ. ಇದೆಲ್ಲವೂ ಮಾಡಿದ ಪುಣ್ಯದ ಫಲ ಎಂದು ಭಾವಿಸಬೇಕಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಅವರು ತಾಲೂಕಿನ ಹರನಗಿರಿ ಭಾರತೀಯ ಜನತಾಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಮಾಡಿದ 51 ಸಾವಿರ ರೂ.ಗಳ ನಗದು ಮೊತ್ತವನ್ನು ಸ್ವೀಕರಿಸಿ ಗ್ರಾಮಸ್ಥರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದರು.
ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತೆಗೆದುಕೊಂಡಿರುವ ಸಂಪೂರ್ಣ ಲಾಕ್ಡೌನ್ ಪರಿಣಾಮ ರಾಜ್ಯದಲ್ಲಿ ಕೋರೊನಾ ಸೊಂಕು ರೋಗವು ಹರಡಲು ಸಾಧ್ಯವಾಗಿಲ್ಲ.
ಇದೇ ರೀತಿ ನಾವೆಲ್ಲರೂ ಮೇ 3ರವರೆಗೆ ಸ್ವಯಂ ಗೃಹದಿಗ್ಭಂಧನ ವಿಧಿಸಿಕೊಂಡು ಸಾಗಿಸದರೆ, ಭವಿಷ್ಯದಲ್ಲಿ ಮತ್ತೆ ಪುನ: ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದು ಅದಕ್ಕೆ ಗ್ರಾಮಸ್ಥರು ಸಹಕರಿಸಿ ಸಕರ್ಾರದೊಂದಿಗೆ ಕೈ ಜೋಡಿಸಲು ಮುಂದಾಗಬೇಕು ಎಂದು ಪೂಜಾರ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ, ಮಂಜಪ್ಪ ಜ್ಯೋತಿ, ಹೆಚ್.ಹೆಚ್.ಪಾಟೀಲ, ಮುರುಗೇಶ್ ಕೊರಿಶೆಟ್ಟರ್, ಹೊಳಬಸಪ್ಪ ಕುಪ್ಪೇಲೂರ, ಬಸವರಾಜಯ್ಯ ಕರಸ್ಥಳಮಠ, ನಾಗರಾಜ ಕುಪ್ಪೇಲೂರ, ಮಲ್ಲಿಕಾಜರ್ುನ ಜ್ಯೋತಿ, ಹನುಮಂತಪ್ಪ ಮೀನಕಟ್ಟಿ ಸೇರಿದಂತೆ ಮತ್ತಿತರ ಗಣ್ಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.