ಶ್ರೀ ಸಿದ್ದೇಶ್ವರ ದೇವರ 50ನೇ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ

ಕಾಗವಾಡ 17: ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಶ್ರೀ ಸಿದೇಶ್ವರ ದೇವರ 50ನೇ ಜಾತ್ರಾ ಮಹೋತ್ಸವದ ನಿಮಿತ್ಯ ಬೃಹತ ಕೃಷಿ ಮೇಳದಲ್ಲಿ ಆಯೋಜಿಸಿದ ಶ್ವಾನ ಪ್ರದರ್ಶನದಲ್ಲಿ ಗಮನ ಸೆಳೆದ ನಾಯಿಗಳ ಝಲಕ ವಿವಿಧ ತಳಿಯ ಹತ್ತಾರು ನಾಯಿಗಳು ಶ್ವಾನ ಪ್ರೀಯರನ್ನು ಸಂತೋಷ ಪಡೆಸಿದವು.

ರಾಟವಿಲ್ಲರ, ಲ್ಯಾಬ್ರೋಡಾಗ್, ಜರ್ಮನ ಶೇಫರ್ಡ್, ಮೂಧೋಳ ಹೌಂಡ್ಸ, ಪಿಟ್ಬುಲ್ಲ್, ಪಾಕಿಸ್ಥಾನ ಬುಲ್ಲಿ, ಸೇರಿದಂತೆ 13 ಬೇರೆ ಬೇರೆ ತಳಿಯ 63 ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಇದರಲ್ಲಿ ಪ್ರಥಮ ಸ್ಥಾನ ಪ್ರಮೋದ ಸಾಳುಂಕೆ(ಕಾರವಾನ) ಇವರ ಡಾಬರಮ್ಯಾನ್, ದ್ವೀತಿಯ ಸ್ಥಾನ ವಿನಾಯಕ ಹುಬ್ಬಳ್ಳಿ ಇವರ ಸೈಬೇರಿನ್ ಹಸ್ಕಿ, ತೃತೀಯ ಪ್ರವೀಣ ಪಾಟೀಲ ಇವರ ಜರ್ಮನ್ ಶೇಫರ್ಡ್ ಶ್ವಾನಗಳಿಗೆ ಅನುಕ್ರಮವಾಗಿ 10,001, ದ್ವೀತಿಯ 7,001, ತೃತೀಯ 5,001 ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು.

ವಿಜಯಪೂರ, ಮೂಧೋಳ, ಮುಗಳಖೋಡ, ಅಥಣಿ, ಮಹಾರಾಷ್ಟ್ರದ ಸಾಂಗಲಿ, ಮಿರಜ, ಇಚ್ಛಲಕರಂಜಿ, ಜಯಸಿಂಗಪೂರದ ಶ್ವಾನಗಳು ಭಾಗವಹಿಸಿದವು.

ಸಿಮ್ ಕಂಪನಿಯೋಂದರ ಜಾಹಿರಾತು ಮೂಲಕ ಗಮನ ಸೆಳೆದ ಪುಟ್ಟ ದೇಹ ರಚನೆಹೊಂದಿರುವ ಮುದ್ದಾದ ಪಗ್ ವಿಶೇಷವಾಗಿ ಚಿಕ್ಕಮಕ್ಕಳ ಆಕರ್ಷಣೆ ಕೇಂದ್ರವಾಗಿತ್ತು.ಚಿಕ್ಕಚಿಕ್ಕ ಕಾಲುಗಳು ಸುಕ್ಕುಗಟಿದ ಚರ್ಮದಲ್ಲಿ ಹುದಗಿದ ಗೋಲು ಮುಖದಲ್ಲಿ ನಳನಳಿಸುವ ಈಶ್ವಾನ ಅತ್ತಿಂದತ್ತ ಓಡಾಡುತ್ತಿರುವುದನ್ನು ಕಂಡು ಚಿಣ್ಣರು ಖುಷಿ ಅನುಭವಿಸಿದರು.

ಮಾಜಿ ಶಾಸಕರು ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕಲ್ಲಪ್ಪಣ್ಣಾ ಮಗೆಣ್ಣವರ ಶ್ವಾನ ಪ್ರದರ್ಶನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಾತ್ರೆ ಪ್ರಮಾಣ ಕಡಿಮೆ ಆಗುತ್ತದೆಯೆಂದು ತಿಳಿದುಕೊಂಡಿದ್ದೆ. ಆದರೆ ಈ ವರ್ಷ ಜಾತ್ರೆ ಪ್ರಮಾಣ ಹೆಚ್ಚಾಗಿದೆ. ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನ ಸಿಗುವ ಸಾಧ್ಯತೆ ಇದೆ ಮತ್ತು ಪ್ರಾಣಿಗಳಲ್ಲಿ ಅತಿ ಪ್ರಾಮಾಣಿಕತೆ ಮತ್ತು ಆತನಿಗೆ ಅನ್ನ ನೀಡಿರುವ ಅನ್ನದಾತನ ಮೇಲೆ ಇಡುವ ನಂಬಿಕೆ ಕೇವಲ ಶ್ವಾನಗಳಲ್ಲಿ ಮಾತ್ರವಿದೆ. ಅವುಗಳನ್ನು ದೇಶದ ಸೈನಿಕದಳದಲ್ಲಿಯು ಬಳಸುತ್ತಾರೆ. ಒಂದು ವೇಳೆ ಮಾನವರು ಅಪ್ರಾಮಾಣಿಕತೆ ತೊರಿಸಿದರು ಶ್ವಾನಗಳಲ್ಲಿರುವ ಪ್ರಾಮಾಣಿಕತೆ ಆದಿ ಕಾಲದಿಂದಲು ಇದೆ ಎಂದರು.

ಪ್ರೇರಣಾ ಫೌಂಡಷನ ಅಧ್ಯಕ್ಷರಾದ ಸಂಜು ಭೀರಡಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ಪ್ರಫುಲ ಕಾಚರ್ಿ, ಸಂತೋಷ ಶಹಾ, ಸುರೇಶ ಕುಡವಕ್ಕಲಗಿ, ಅಶೋಕ ಬಾಳಿಕಾರ, ಹಾಗೂ ಮೋಹನ ಗಾಣಿಗೇರ, ಆಗಮಿಸಿದ್ದರು.

ನಿಣರ್ಾಯಕರಾಗಿ ಪಶು ವೈದ್ಯಾಧಿಕಾರಿಗಳಾದ ಡಾ.ಭುಜಬಲಿ ಐಗಳಿ, ಡಾ.ಸುರೇಶ ಅಂಗಡಿ, ಡಾ.ಆನಂದ ಪಾಟೀಲ, ಡಾ.ಸಚಿನ ಸೌಂದಲಗಿ, ಮಹಾದೇವತೇಲಿ ಹಾಗೂ ಅಭಿನಂದನ ಪಾಟೀಲ ಕಾರ್ಯನಿರ್ವಹಿಸಿದರು.

ಬಾಹುಬಲಿ ಕುಸನಾಳೆ, ಗುರುರಾಜ ಮಡಿವಾಳರ, ನ್ಯಾಯವಾದಿ ಸಂಜಯ ಕುಚನೂರೆ, ಸಂಜು ಕುಸನಾಳೆ, ಅನೀಲ ಸತ್ತಿ, ಅಣ್ಣೇಶ ಅಪರಾಜ, ಶೀತಲ ಬಾಲೋಜಿ, ಮಲ್ಲು ಕೋಲಾರ, ರಾಜು ಖವಟಕೋಪ್, ನವೀಣ ಗಾಣಿಗೇರ, ಮಂಜು ಕುಚನೂರೆ, ರಾಹುಲ್ ಬನಿಜವಾಡ, ಪ್ರದೀಪ ಲಿಂಬಿಕಾಯಿ, ಸೇರಿದಂತೆ ಅನೇಕರು ಸಹಕರಿಸಿದರು.